- ಜ್ವಾಲಾಮಾಲಿನಿ ಜೇಸಿ ಸಂಸ್ಥೆ 36 ನೇ ಜೇಸಿ ಸಪ್ತಾಹ ಸ್ನೇಹ ಮಿಲನ ಸಮಾರೋಪ
110 ವರ್ಷದ ಹಿಂದೆ ಪ್ರಾರಂಭವಾದ ಜೆಸಿಐ ಈಗ ಪ್ರಪಂಚದ 136 ದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್ ತಿಳಿಸಿದರು.
ಭಾನುವಾರ ಸಂಜೆ ಪಟ್ಟಣದ ಕನ್ಯಾಕುಮಾರಿ ಕಂಪರ್ಟ್ ಹಾಲ್ ನಲ್ಲಿ ನಡೆದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ 36 ನೇ ಜೇಸಿ ಸಪ್ತಾಹ ಸ್ನೇಹ ಮಿಲನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯದಲ್ಲಿ 68 ಸಾವಿರ ಸದಸ್ಯರಿದ್ದಾರೆ. ಜೇಸಿ ವಲಯ 14 ರಲ್ಲಿ 3800 ಸದಸ್ಯರಿದ್ದಾರೆ. ವಲಯ 14 ರಲ್ಲೇ ಎನ್.ಆರ್.ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅತ್ಯಂತ ಹಿರಿಯ ಸಂಸ್ಥೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರ ನೀಡುತ್ತಿದ್ದು ಸಂಸ್ಕೃತಿ, ಶಿಸ್ತು ಕಲಿಸುತ್ತಿಲ್ಲ. ಮಕ್ಕಳನ್ನು ಕೇವಲ ಯಂತ್ರವನ್ನಾಗಿ ಮಾಡುತ್ತಿದ್ದೇವೆ. ಇದು ಬದಲಾಗಿ ಮಕ್ಕಳನ್ನು ಒಳ್ಳೆಯ ಮನುಷ್ಯರಾಗಿ ಬೆಳೆಸಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಜೇಸಿ ಸಂಸ್ಥೆ ನಾಯಕತ್ವ ಗುಣ ಕಲಿಸುತ್ತದೆ. ಜೇಸಿ ಸಂಸ್ಥೆ ಸದಸ್ಯರ ವ್ಯಕ್ತಿತ್ವ ಬೆಳೆಯುತ್ತದೆ. ಜೇಸಿ ಸಂಸ್ಥೆ ಸದಸ್ಯರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ತಂದೆ,ತಾಯಿ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಮಾನವೀಯತೆ ಗುಣ ಬೆಳೆಸಬೇಕು. ಯಾವುದೇ ವ್ಯಕ್ತಿ ಒಮ್ಮೆ ಜೀವನದಲ್ಲಿ ಸೋತರೂ ಎದೆ ಗುಂದದೆ ಮತ್ತೆ ಪ್ರಯತ್ನ ಪಟ್ಟರೆ ಜೀವನದಲ್ಲಿ ಜಯಗಳಿಸಬಹುದು ಎಂದರು.
ಸಭೆ ಅಧ್ಯಕ್ಷತೆಯನ್ನು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ ಗೌಡ ವಹಿಸಿದ್ದರು. ಸಭೆಯಲ್ಲಿ ವಲಯ 14 ರ ಉಪಾಧ್ಯಕ್ಷ ಜಿ.ಎನ್.ಪ್ರಶಾಂತಕುಮಾರ್, ಕನ್ಯಾಕುಮಾರಿ ಕಂಪರ್ಟ್ಸ್ ಮಾಲೀಕ ಡಿ.ರಮೇಶ್, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಕಾರ್ಯದರ್ಶಿ ಮಿಥುನ್ ಗೌಡ, ನಿಕಟ ಪೂರ್ವ ಅಧ್ಯಕ್ಷ ಮನು ಎಂ.ಪಿ., ಜೇಸಿ ಸಪ್ತಾಪದ ಪ್ರಧಾನ ನಿರ್ದೇಶಕ ಜೋಯಿ ಬ್ರೋ, ಜೇಸಿ ರೆಟ್ ವಿಂಗ್ ಅಧ್ಯಕ್ಷೆ ದಿಶಾಗೌಡ, ಜೂನಿಯರ್ ಜೇಸಿ ಅಧ್ಯಕ್ಷೆ ನಾಗವಂಶಿಗೌಡ ಇದ್ದರು.