ಯುವಜನರಲ್ಲಿ ನಾಯಕತ್ವ ಅರಿವಿಗೆ ಜೆಸಿಐ ಆದ್ಯತೆ

KannadaprabhaNewsNetwork |  
Published : Dec 21, 2025, 02:30 AM IST
ಜೆಸಿಐ ಶಿಕಾರಿಪುರ ಚಂದನ್ ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಅಧಿಕಾರ ಹಸ್ತಾಂತರಿಸಿದರು. | Kannada Prabha

ಸಾರಾಂಶ

ಯುವಪೀಳಿಗೆಯಲ್ಲಿ ತರಬೇತಿ ಮೂಲಕ ನಾಯಕತ್ವದ ಗುಣವನ್ನು ರೂಪಿಸಿ ಜೆಸಿಐ ಸಂಸ್ಥೆ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ನ್ಯಾಮತಿ ತಹಸೀಲ್ದಾರ್ ಎಂ.ಪಿ. ಕವಿರಾಜ್ ಪ್ರಶಂಸಿಸಿದರು.

ಶಿಕಾರಿಪುರ: ಯುವಪೀಳಿಗೆಯಲ್ಲಿ ತರಬೇತಿ ಮೂಲಕ ನಾಯಕತ್ವದ ಗುಣವನ್ನು ರೂಪಿಸಿ ಜೆಸಿಐ ಸಂಸ್ಥೆ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ನ್ಯಾಮತಿ ತಹಸೀಲ್ದಾರ್ ಎಂ.ಪಿ. ಕವಿರಾಜ್ ಪ್ರಶಂಸಿಸಿದರು.

ಪಟ್ಟಣದ ಭವಾನಿ ರಾವ್ ಕೇರಿಯಲ್ಲಿನ ಮೈತ್ರಿ ಶಾಲೆ ಸಭಾಂಗಣದಲ್ಲಿ ನಡೆದ ಜೆಸಿಐ ಶಿಕಾರಿಪುರ ಚಂದನ ಪ್ರಾಂತ್ಯ-ಸಿ, ವಲಯ-4ರ ಪದವಿ ಪ್ರದಾನ ಕಾರ್ಯಕ್ರಮ- 2026ರಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುವಪೀಳಿಗೆ ದೇಶದ ಆಸ್ತಿಯಾಗಿದೆ. ಅವರಿಗೆ ಸಕಾಲಕ್ಕೆ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ತರಬೇತಿ ನೀಡಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವ ರೀತಿಯಲ್ಲಿ ಯುವ ಸಮುದಾಯವನ್ನು ಪ್ರೋತ್ಸಾಹಿಸುವುದು ಎಲ್ಲ ಸಂಘ ಸಂಸ್ಥೆಗಳ ಕರ್ತವ್ಯ. ಈ ದಿಸೆಯಲ್ಲಿ ಜ್ಯೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ (ಜೆಸಿಐ) ಸಂಸ್ಥೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಯುವಪೀಳಿಗೆಗೆ ಸೂಕ್ತ ತರಬೇತಿ ಮೂಲಕ ನಾಯಕತ್ವದ ಗುಣ ರೂಪಿಸುವಲ್ಲಿ ಶ್ರಮಿಸುತ್ತಿದೆ. ಹಲವು ಪ್ರತಿಭಾನ್ವಿತರು ಜೆಸಿಐ ತರಬೇತಿ ಮೂಲಕ ಸಮಾಜಕ್ಕೆ ಕೊಡುಗೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಯುವಪೀಳಿಗೆಯಲ್ಲಿ ನಾಯಕತ್ವ ಅಭಿವೃದ್ಧಿ ಮೂಲಕ ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಜೆಸಿಐ ಸಂಸ್ಥೆಯಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಯುವಪೀಳಿಗೆ ಜೆಸಿಐ ತರಬೇತಿ ಮೂಲಕ ಪರಿಪೂರ್ಣ ವ್ಯಕ್ತಿತ್ವ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.

ಜೆಸಿಐ ಸಂಸ್ಥೆಯಲ್ಲಿ ಶಿಸ್ತು, ಸಮಯಪಾಲನೆ, ಕರ್ತವ್ಯಪ್ರಜ್ಞೆ, ಸಮವಸ್ತ್ರ ಸಹಿತ ಪ್ರತಿಯೊಂದು ಸೂಕ್ಷ್ಮ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಾಮಾನ್ಯ ವ್ಯಕ್ತಿಯೋರ್ವ ಸಮಾಜದಲ್ಲಿ ವಿಶಿಷ್ಟ ರೀತಿಯಾಗಿ ರೂಪುಗೊಳ್ಳಲು ಜೆಸಿಐ ನೀಡುತ್ತಿರುವ ಆದ್ಯತೆ ಗಮನಿಸಿ ಸಕ್ರಿಯವಾಗಿ ಯುವಪೀಳಿಗೆ ಹೆಚ್ಚು ಹೆಚ್ಚು ಪಾಲ್ಗೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸುವಂತೆ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಗಜಾನನ ಆರ್. ಹೆಗಡೆ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಯೌವನ ಅತ್ಯಂತ ಪ್ರಮುಖ ಕಾಲಘಟ್ಟವಾಗಿದೆ. ಈ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ಮೂಲಕ ಪ್ರೋತ್ಸಾಹಿಸಿದರೆ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ಸಲ್ಲಿಸಲು ಸಾಧ್ಯ ಎಂದರು.

ಈ ದಿಸೆಯಲ್ಲಿ ಜೆಸಿಐ 18ರಿಂದ 40 ವರ್ಷದ ಯುವಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ನಾಯಕತ್ವದ ಗುಣ ಬೆಳೆಸುತ್ತಿದೆ. ಆ ಮೂಲಕ ಸಮಾಜದಲ್ಲಿ ಸಕ್ರಿಯ ನಾಗರೀಕರಾಗಿ ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸಿ ಸಮುದಾಯದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವ ರೀತಿ ಉತ್ತೇಜಿಸುವ ಬಹುದೊಡ್ಡ ಕಾರ್ಯದಲ್ಲಿ ಜೆಸಿಐ ತೊಡಗಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಯುವಪೀಳಿಗೆಯಲ್ಲಿ ಸಕಾರಾತ್ಮಕ ಬದಲಾವಣೆಯಿಂದ ಸಮಾಜದ ಏಳ್ಗೆಗಾಗಿ ಜನಪರ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಲು ಜೆಸಿಐ ತರಬೇತಿ ಅತ್ಯಂತ ಮಹತ್ವದ್ದಾಗಿದೆ. ಲಾಭರಹಿತ ಅಂತರ ರಾಷ್ಟ್ರೀಯ ಜೆಸಿಐ ಸಂಸ್ಥೆ ಜಗತ್ತಿನಾದ್ಯಂತ ಸದ್ಭಾವನೆ, ತಿಳಿವಳಿಕೆಯಿಂದ ಯುವಪೀಳಿಗೆಯಲ್ಲಿ ಜಾಗೃತಿ ಉಂಟುಮಾಡುತ್ತಿದೆ ಎಂದು ತಿಳಿಸಿದರು.

ಜೆಸಿಐ ಶಿಕಾರಿಪುರ ಚಂದನ್ ಸಂಸ್ಥೆಯ 41ನೇ ಅಧ್ಯಕ್ಷರಾಗಿ ಜೆಸಿ ಶಾಂತಾರಾಮ್ ಶೇಟ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಜೇಸಿ ಪ್ರಶಾಂತ್ ಪ್ರತಿಬಿಂಬ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ಜೆಸಿ ಶರತ್ ಎಸ್. ಹಾಗೂ ಖಜಾಂಚಿಯಾಗಿ ಜೆಸಿ ಸಂತೋಷ್ ಶೇಟ್, ಮಹಿಳಾ ಘಟಕ ಅಧ್ಯಕ್ಷರಾಗಿ ಜೆಸಿ ಭಾವನ ರಾಮಪ್ಪ, ಕಾರ್ಯದರ್ಶಿಯಾಗಿ ಜೆಸಿ ಅಂಕಿತಾ ಮಧುಸೂದನ್ ಸಹಿತ ಪೂರ್ಣ ಪ್ರಮಾಣದ ಪದಾಧಿಕಾರಿಗಳು ವಿದ್ಯುಕ್ತವಾಗಿ ಜವಾಬ್ದಾರಿ ವಹಿಸಿಕೊಂಡರು.

ವೇದಿಕೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ತರಬೇತುದಾರ ಬಾಗ್ಯ ವೀರೇಶ್, ಡಾ.ಪಾಂಡುರಂಗ, ಸಂಕೇತ್ ಸಾನು, ವಿವೇಕ್ ದೂದಿಹಳ್ಳಿ, ಗೌರಿ ಪ್ರತಿಬಿಂಬ, ಹದಡಿ ಪ್ರವೀಣ್, ರಾಘವೇಂದ್ರ ರೇವಣಕರ್, ಕೆ.ವೆಂಕಟೇಶ್, ಆಕಾಶ್, ಪವಿತ್ರ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.

ತಮಗೆ ದೊರೆತ ಕಾಲಾವಧಿಯಲ್ಲಿ ಸಂಸ್ಥೆಯ ಸದಸ್ಯತ್ವ ಹೆಚ್ಚಿಸುವ ಜತೆಗೆ ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

- ಜೇಸಿ ಶಾಂತಾರಾಮ್ ಶೇಟ್, ನೂತನ ಅಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ