ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 93ನೇ ವರ್ಷದ ಹುಟ್ಟುಹಬ್ಬ ಆಚರಣೆ

KannadaprabhaNewsNetwork |  
Published : May 19, 2025, 12:05 AM IST
18ಕೆಎಂಎನ್ ಡಿ18 | Kannada Prabha

ಸಾರಾಂಶ

ಎಚ್.ಡಿ.ದೇವೇಗೌಡ ನೀರಾವರಿ ಹರಿಕಾರರು. ನಮ್ಮ ನಾಯಕ ಸಿ.ಎಸ್.ಪುಟ್ಟರಾಜುರನ್ನು ಮಾನಸ ಪುತ್ರರೆಂದು ಸ್ವೀಕರಿಸಿ ರಾಜಕೀಯವಾಗಿ ಬೆಳೆಸುವ ಮೂಲಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಿಗೆ ತಾಯಿ ಚಾಮುಂಡೇಶ್ವರಿಯು ಮತ್ತಷ್ಟು ಆಯಸ್ಸು, ಆರೋಗ್ಯ ದಯಪಾಲಿಸಲಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 93ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ನೇತೃತ್ವದಲ್ಲಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು, ಮುಖಂಡರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಸ್ಪತ್ರೆ ಒಳ - ಹೊರ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು.

ಪಟ್ಟಣದ ಬನ್ನಾರಿಯ ಮಾರಮ್ಮ ದೇವಸ್ಥಾನದ ಬಳಿ ಸೇರಿದ ಎನ್ ಡಿಎ ಮೈತ್ರಿಕೂಟದ ಕಾರ್ಯಕರ್ತರು ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿ ಹುಟ್ಟುಹಬ್ಬದ ಶುಭಕೋರಿದರು.

ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಮಾತನಾಡಿ, ಎಚ್.ಡಿ.ದೇವೇಗೌಡರು ಅಧಿಕಾರಕ್ಕೆ ಅಂಟಿಕೂರದೆ ನಿರಂತರ ಕಾವೇರಿ ಹೋರಾಟ ಸೇರಿದಂತೆ ರೈತ ಪರ ನಿಂತವರು. ಪ್ರಧಾನಿ ಮೋದಿಯವರು ಸಹ ದೇವೇಗೌಡರಿಂದ ಸಲಹೆ ಪಡೆಯುತ್ತಾರೆ. ನಮ್ಮ ಜಿಲ್ಲೆಯ ಹಲವು ತಾಲೂಕುಗಳಿಗೆ ಹೇಮಾವತಿ ನೀರು ತಂದು ಕೃಷಿಗೆ ಅನುಕೂಲ ಮಾಡಿಕೊಟ್ಟು ರೈತರ ಬದುಕಿಗೆ ಆಶಾಕಿರಣವಾಗಿದ್ದಾರೆ. ಇಂತಹ ಧೀಮಂತ ನಾಯಕರಿಗೆ ಭಗವಂತ ಮತ್ತಷ್ಟು ಆಯಸ್ಸು ನೀಡುವ ಮೂಲಕ ನಮ್ಮಂತಹ ಯುವಕರಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಎಚ್.ಡಿ.ದೇವೇಗೌಡ ನೀರಾವರಿ ಹರಿಕಾರರು. ನಮ್ಮ ನಾಯಕ ಸಿ.ಎಸ್.ಪುಟ್ಟರಾಜುರನ್ನು ಮಾನಸ ಪುತ್ರರೆಂದು ಸ್ವೀಕರಿಸಿ ರಾಜಕೀಯವಾಗಿ ಬೆಳೆಸುವ ಮೂಲಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಿಗೆ ತಾಯಿ ಚಾಮುಂಡೇಶ್ವರಿಯು ಮತ್ತಷ್ಟು ಆಯಸ್ಸು, ಆರೋಗ್ಯ ದಯಪಾಲಿಸಲೆಂದು ಹಾರೈಸಿದರು.

ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ಅಧ್ಯಕ್ಷ ಧನಂಜಯ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಚಲುವರಾಜು, ಗುರುಸ್ವಾಮಿ, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಅಶೋಕ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕ ರಾಮಕೃಷ್ಣೇಗೌಡ, ಮುಖಂಡರಾದ ಲಿಂಗರಾಜು, ರಾಧಾಕೃಷ್ಣ, ಪುರಸಭೆ ಸದಸ್ಯ ಆರ್.ಸೋಮಶೇಖರ್, ಶಿವಕುಮಾರ್, ಚಂದ್ರು, ಚಿಕ್ಕಾಡೆ ಪ್ರಸನ್ನಕುಮಾರ್, ಚೇತನ್, ಗಿರೀಶ್, ಮಾಣಿಕ್ಯನಹಳ್ಳಿ ಅಶೋಕ್, ಹೆಗ್ಗಡಹಳ್ಳಿ ರಾಮಕೃಷ್ಣ, ದೇಶವಳ್ಳಿ ಪ್ರಭಾಕರ್, ಅಲ್ಪಳ್ಳಿ ಗೋವಿಂದಯ್ಯ, ಕಡಬ ಬಲರಾಮು, ಸೋಬಾನೆ ರಾಜೇಶ್, ಬಿ.ಎಸ್.ಜಯರಾಮು, ಆರುಮುಗಂ, ಟೌನ್ ಗುರು, ನಲ್ಲಹಳ್ಳಿ ವೆಂಕಟೇಶ್ ಸೇರಿದಂತೆ ಹಲವರು ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ