-ತಾಲೂಕು ಜೆಡಿಎಸ್ ಘಟಕದಿಂದ ರಾಜ್ಯ ಸರ್ಕಾರಕ್ಕೆ ಮನವಿಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ರಾಜ್ಯದ ಜನತೆ ಎದುರಿಸುತ್ತಿರುವ ಸಂಕಷ್ಟದ ಈ ಸಮಯದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ಸಿನ ಪ್ರಯಾಣದ ಬೆಲೆಯನ್ನು ಶೇ.23 ಏರಿಕೆ ಮಾಡಿರುವುದು ಜನವಿರೋಧಿಯಾಗಿದೆ. ಅಲ್ಲದೇ ದಿನಬಳಕೆಯ ಹಾಲಿನ ಉತ್ಪನ್ನಗಳ ಬೆಳೆಯನ್ನು ₹8 ಗಳಿಂದ ₹35ರವರೆಗೆ ಏರಿಸಿರುವುದು ಕೂಡಾ ಖಂಡನೀಯ.
ಇದರಿಂದ ಬಡ ಮತ್ತು ಕೆಳ ವರ್ಗದ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಜೀವನ ನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಮರುಪರಿಶೀಲನೆ ನಡೆಸಿ ಧಾರಣೆ ಹಿಂಪಡೆಯುವಂತೆ ಆಗ್ರಹಿಸಿದರು.ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಗ್ರಾಮೀಣ ಭಾಗದ ಜನತೆ ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿವ ನೀರಿನ ತಲೆದೋರಿದ್ದು, ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆಯೂ ಉಂಟಾಗಿದೆ.
ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್, ಪ್ರದಾನ ಕಾರ್ಯದರ್ಶಿ ಕುಡುವತ್ತಿ ಗುರುದತ್, ಮೇಧೋಳಿಗೆ ರಾಮಸ್ವಾಮಿ, ತಲುಬಿ ರಾಘವೇಂದ್ರ, ಶೈಲಾ ನಾಗರಾಜ್, ಕುಂದಾ ಪ್ರವೀಣ್ ಹಾಗೂ ಆರಗ ಪ್ರೇಮಚಂದ್ರ ಇದ್ದರು.
ತೀರ್ಥಹಳ್ಳಿ ತಾಲೂಕು ಜೆಡಿಎಸ್ ಘಟಕದಿಂದ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮನವಿ ಸಲ್ಲಿಸಲಾಯಿತು. ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್, ಪ್ರದಾನ ಕಾರ್ಯದರ್ಶಿ ಕುಡುವತ್ತಿ ಗುರುದತ್, ಮೇಧೋಳಿಗೆ ರಾಮಸ್ವಾಮಿ ಮತ್ತಿತರರು ಇದ್ದರು.