ರಾಜ್ಯ ಸರ್ಕಾರದ ವೈಫಲ್ಯತೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

KannadaprabhaNewsNetwork | Published : Jul 2, 2025 12:21 AM
ಆಡಳಿತ ವೈಫಲ್ಯತೆ ಹಾಗೂ ಹಲವು ಇಲಾಖೆಗಳಲ್ಲಿ ಭಾರೀ ಭ್ರಷ್ಟಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಚಿಕ್ಕಮಗಳೂರಿನ ಕೆ.ಎಂ. ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದರು.  | Kannada Prabha

ಸಾರಾಂಶ

ಚಿಕ್ಕಮಗಳೂರು, ಆಡಳಿತ ವೈಫಲ್ಯತೆ ಹಾಗೂ ಹಲವು ಇಲಾಖೆಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಕೆ.ಎಂ. ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

- ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಆಂದೋಲನ । ಚಿಕ್ಕಮಗಳೂರಿನಲ್ಲಿ ಪಂಜಿನ ಮೆರವಣಿಗೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಆಡಳಿತ ವೈಫಲ್ಯತೆ ಹಾಗೂ ಹಲವು ಇಲಾಖೆಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಕೆ.ಎಂ. ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೂ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರಾಜ್ಯ ಸರ್ಕಾರ ಕೂಡಲೇ ಅಧಿಕಾರ ತ್ಯಜಿಸಬೇಕೆಂದು ಒತ್ತಾಯಿಸಿದರು.ಕಾಂಗ್ರೆಸ್ ಸ್ವಪಕ್ಷ ಶಾಸಕರಿಂದಲೇ ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೇಳೆಯುವ ಕ್ರಮವಾಗಿದೆ. ಸರ್ಕಾರದ ವಾಲ್ಮೀಕಿ ಹಗರಣ ಕೋಟ್ಯಾಂತರ ಹಣವನ್ನು ದುರುಪಯೋಗ ಮಾಡಿಕೊಂಡಿರುವ ವಿರುದ್ಧ ವಿಧಾನ ಪರಿಷತ್, ಸಭೆಯೊಳಗೆ ಹೋರಾಟ ರೂಪಿಸಿದ ಪರಿಣಾಮ ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮಕ್ಕೆ ಮೀಸಲಿಸಿರಿದ ಅನುದಾನ ದುರುಪಯೋಗ, ಭಾರೀ ಭ್ರಷ್ಟಾಚಾರಗಳು ಮುಗಿಲು ಮುಟ್ಟಿದೆ. ಬಡವರಿಗೆ ಕೊಡಬೇಕಾದ ವಾಸದ ಮನೆಯ ವಿಚಾರದಲ್ಲೂ ಭ್ರಷ್ಟಾಚಾರ ಎಸಗಿವೆ ಎಂದು ಸ್ವ ಪಕ್ಷದ ಶಾಸಕರು ಅಪಾದಿಸಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು ಸತ್ಯಾಸತ್ಯತೆ ಬಯಲಿಗೆಳಿಯದೇ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.ಈ ಸಂಬಂಧ ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ನೇತೃತ್ವ ದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಜನತೆ ಮುಂದಿಡುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಬೃಹತ್ ಆಂದೋಲನ ನಡೆಸುತ್ತಿದೆ ಎಂದರು.ರಾಜ್ಯದ ಯುವಕರು, ರೈತರು ಹಾಗೂ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ದ್ರೋಹವೆಸಗಿ ಹಣ ಲೂಟಿ ಮಾಡುತ್ತಿದೆ. ಈ ಸರ್ಕಾರದಿಂದ ಬಡವರು, ಮಧ್ಯಮ ವರ್ಗದವರು ಬದುಕಲಾರದ ಸ್ಥಿತಿಗೆ ಬಂದಿರುವ ಕಾರಣ ಸರ್ಕಾರ ನೈತಿಕ ಹಕ್ಕು ಕಳೆದು ಕೊಂಡಿದ್ದು ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಮಾತನಾಡಿ, ರಾಜ್ಯನಾಯಕರ ಆದೇಶದನ್ವಯ ಜಿಲ್ಲೆಯಾದ್ಯಂತ ಭ್ರಷ್ಟ ರಾಜ್ಯ ಸರ್ಕಾರದ ವಿರುದ್ಧ ಅಭಿಯಾನ ಹಮ್ಮಿಕೊಂಡು ಎಳೆ ಎಳೆಯಾಗಿ ಬಿಚ್ಚಿಸುವ ಕೆಲಸ ಜೆಡಿಎಸ್ ಕಾರ್ಯಕರ್ತರು ಮಾಡಲಿ ದ್ದಾರೆ. ಜೊತೆಗೆ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಜನಾಂದೋಲನ ಹಾಗೂ ಸದಸ್ಯತ್ವ ಅಭಿಯಾನ ನಡೆಸಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಿ ಕಾರ್ಯಕರ್ತರಲ್ಲಿ ಹುರುಪು ತುಂಬುತ್ತಿದ್ದಾರೆ ಎಂದರು.ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಮಾತನಾಡಿ, ವಾಲ್ಮೀಕಿ, ಮುಡಾ, ಪಡಿತರ ಚೀಟಿ ಹಗರಣ ಮತ್ತು ವಸತಿ ಯೋಜನೆ ಭ್ರಷ್ಟಾಚಾರ ಸೇರಿದಂತೆ ಸಾಲು ಸಾಲು ಹಗರಣಗಳು ರಾಜ್ಯ ಸರ್ಕಾರದಲ್ಲಿ ಕೇಳಿ ಬರುತ್ತಿದೆ. ಆರ್ಥಿಕ ಸಬಲ ರಾದವರಿಗೆ ಮಾತ್ರ ವಸತಿ ಎಂಬ ನಿಯಮ ರೂಪಿಸಿ ಬಡವರನ್ನು ಕೆಳ ತಳ್ಳುತ್ತಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಗೋಪಿ, ಶೀಲಾ ದಿನೇಶ್, ಮಾಜಿ ಸದಸ್ಯ ದಿನೇಶ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್‌ಗೌಡ, ತಾಪಂ ಮಾಜಿ ಸದಸ್ಯ ಆನಂದ್‌ನಾಯ್ಕ್, ಮುಖಂಡರಾದ ಡಿ.ಜೆ.ಸುರೇಶ್, ದೇವರಾಜ್‌ ಅರಸ್, ನಂದೀಶ್, ಮೂರ್ತಿ, ಚೇತನ್, ಸಿದ್ದಿಕ್, ಜಾಕರೀಯಾ ಜಾಕೀರ್, ಈಶ್ವರೇಗೌಡ, ರವಿ, ಸತೀಶ್, ಜಯಂತಿ, ರತ್ನ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 30 ಕೆಸಿಕೆಎಂ 4ಆಡಳಿತ ವೈಫಲ್ಯತೆ ಹಾಗೂ ಹಲವು ಇಲಾಖೆಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಚಿಕ್ಕಮಗಳೂರಿನ ಕೆ.ಎಂ. ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

PREV