ಕನ್ನಡಪ್ರಭ ವಾರ್ತೆ ಹಿರಿಯೂರು
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಮುದಾಯದ ಭವನಕ್ಕೆ ನಿವೇಶನ ನೀಡುವುದರ ಜತೆಗೆ ಭವನ ನಿರ್ಮಾಣಕ್ಕೆ 1 ಕೋಟಿ ರು. ಅನುದಾನ ನೀಡಲಾಗುವುದು ಎಂಬ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಶ್ರೀನಿವಾಸ ರೆಡ್ಡಿ, ರಾಷ್ಟ್ರೀಯ ಸದಸ್ಯ ಅಮೃತೇಶ್ವರಸ್ವಾಮಿ.ಜಿಲ್ಲಾದ್ಯಕ್ಷ ಮಹಡಿ ಶಿವಮೂರ್ತಿ, ತಾಲೂಕು ಅಧ್ಯಕ್ಷ ಉಮೇಶ್ ಗುರಾಣಿಮಠ, ಪ್ರಧಾನ ಕಾರ್ಯದರ್ಶಿ, ವಕೀಲ ಮಹಾಂತೇಶ್, ಜಿಲ್ಲಾ ವೀರಶೈವ ನೌಕರರ ಸಂಘದ ಅಧ್ಯಕ್ಷ ವೀರೇಶ್, ನಗರಸಭಾ ಸದಸ್ಯೆ ರತ್ನಮ್ಮ ತಿಪ್ಪೀರಣ್ಣ, ರಾಜ್ಯ ಮಹಿಳಾ ನಿರ್ದೇಶಕಿ ಶಶಿಕಲಾ, ರೂಪಾ, ಶಶಿಧರಬಾಬು, ರುದ್ರಪ್ಪ ಜಾಲಿಕಟ್ಟೆ, ಕಿರಣ್ ಶಂಕರ್, ರೋಟರಿ ವೀರೇಶ್, ಜೆ.ಎಂ.ಶಿವಾನಂದ್, ಅರುಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.