ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

KannadaprabhaNewsNetwork |  
Published : Dec 02, 2025, 02:00 AM IST
1ಎಚ್‌ವಿಆರ್2 | Kannada Prabha

ಸಾರಾಂಶ

ಮೆಕ್ಕೆಜೋಳ, ಭತ್ತ, ಸೂರ್ಯಕಾಂತಿ, ಬಿಳಿ ಜೋಳ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ, ಶೀಘ್ರವೇ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹಾವೇರಿ: ಮೆಕ್ಕೆಜೋಳ, ಭತ್ತ, ಸೂರ್ಯಕಾಂತಿ, ಬಿಳಿ ಜೋಳ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ, ಶೀಘ್ರವೇ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಹುಕ್ಕೇರಿಮಠದಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಪ್ರತಿಭಟನೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹುತಾತ್ಮ ಮೈಲಾರ ಮಹದೇವಪ್ಪ ವೃತ್ತವನ್ನು ತಲುಪಿ ಪ್ರತಿಭಟಿಸಿದರು. ಈ ವೇಳೆ ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿ ಮೆಕ್ಕೆಜೋಳ ಖರೀದಿಸುವಂತೆ ಒತ್ತಾಯಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಹಲವು ರೈತರು ₹1800ರಿಂದ 1900 ಗಳಿಗೆ ಸಾಕಷ್ಟು ಮಾರಾಟ ಮಾಡಿದ್ದಾರೆ. ರೈತರ ಸಂಕಷ್ಟವನ್ನು ರಾಜ್ಯ ಸರ್ಕಾರ ಕೇಳುತ್ತಿಲ್ಲ, ತಕ್ಷಣವೇ ಮೆಕ್ಕೆಜೋಳಕ್ಕೆ ₹3,000, ಭತ್ತಕ್ಕೆ ₹3,500 ದರ ನಿಗದಿ ಮಾಡಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಅದೇ ರೀತಿ ರೈತರು ಬೆಳೆದ ಇನ್ನುಳಿದ ಬೆಳೆಗಳಾದ ಸೂರ್ಯಕಾಂತಿ, ಬಿಳಿಜೋಳ ಮತ್ತು ಬಿಜಾಪುರ ಜೋಳ ಬೆಳೆಗಳಿಗೆ ಬೆಂಬಲ ಬೆಲೆ ಕೊಡಬೇಕು. ಕಳೆದ 20 ವರ್ಷಗಳಿಂದ ಬಿಳಿಜೋಳಕ್ಕೆ ₹2,500 ರಿಂದ ₹2,800 ಇದ್ದು ಇಲ್ಲಿಯವರೆಗೂ ಅದೇ ಬೆಲೆ ಇದೆ. ಈ ಹಿಂದೆ ₹250-300 ಸಿಗುತ್ತಿದ್ದ ರಸಗೊಬ್ಬರ ₹1500-1800 ಆಗಿದೆ. ಹೀಗಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ ಎಂದರು.ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಸಿದ್ದಬಸಪ್ಪ ಯಾದವ, ಹಾನಗಲ್ಲ ತಾಲೂಕಾಧ್ಯಕ್ಷ ರಾಮನಗೌಡ ಪಾಟೀಲ ಸೇರಿದಂತೆ ಹಲವರು ಮಾತನಾಡಿದರು. ಶಿವಾನಂದ ಕರಿಗಾರ, ಮೃತ್ಯುಂಜಯ ಕೊಪ್ಪದ, ಲಿಂಗರಾಜ ಸತ್ಯಪ್ಪನವರ, ಲಿಂಗರಾಜ ಹೊನ್ನಾಳಿ, ಸಿದ್ದಣ್ಣ ಗುಡಿಮುಂದಿನವರ, ಮಾಂತೇಶ ಬಡಿಗೇರ, ಅಮೀರಜಾನ ಬೇಪಾರಿ, ಲಕ್ಷ್ಮಿ ಕದರಮಂಡಲಗಿ, ಗಂಗಮ್ಮ ಇಚ್ಚಂಗಿ, ಉಷಾ ಜಾಡಮಲ್ಲ, ದೀಪಾ ದಳವಾಯಿ, ನಿಂಗಪ್ಪ ಸಣ್ಣಕೊಟ್ರಪ್ಪನವರ, ಮುಕೇಶ ಅಗಸಿಬಾಗಿಲ, ನಾಗರಾಜ ಅಜ್ಜಣ್ಣನವರ, ನಾಗರಾಜ ಮುಳ್ಳಳ್ಳಿ, ಸಿದ್ದಪ್ಪ ನೀಲಮ್ಮನವರ, ನಾಗಪ್ಪ ಕರಿಗಾರ, ಮಲ್ಲನಗೌಡ್ರ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಹಿಂಗಾರಿನಲ್ಲಿ ಮಳೆಯಾಗಿಲ್ಲ. ಮೆಕ್ಕೆಜೋಳ ಕಟಾವು ಸಂದರ್ಭದಲ್ಲಿ ಕೂಲಿ ಸಮಸ್ಯೆ, ಕೂಲಿ ಕಾರ್ಮಿಕರ ದರ ಹೆಚ್ಚಳದಿಂದ ಅಪಾರ ನಷ್ಟ ಅನುಭವಿಸಿದ್ದೇವೆ. ರಾಜ್ಯದಲ್ಲಿ ಪ್ರತಿ ಸಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಿ ಖರೀದಿ ಮಾಡಬೇಕು ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ