ಕೆಜಿಎಫ್ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜಾತ್ಯತೀತ ಜನತಾದಳಕ್ಕೆ (ಜೆಡಿಎಸ್) ೨೫ ವರ್ಷ ತುಂಬಿದ ಹಿನ್ನೆಲೆ ಕೆಜಿಎಫ್ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ರಜತ ಮಹೋತ್ಸವ ಕಾರ‍್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ಜೆಡಿಎಸ್ ಮುಖಂಡ ಡಾ. ರಮೇಶ್‌ಬಾಬು ವಿ.ಎಂ. ಅವರು ತಿಳಿಸಿದರು. ಪತ್ರಿಕಾ ಪ್ರಕಟಣೆಯಲ್ಲಿ, ಮಾಜಿ ಪ್ರಧಾನಿ ದೇವೇಗೌಡರ ಹೋರಾಟದ ಪ್ರತಿಫಲವಾಗಿ ೧೯೯೯ ರ ನ.೨೨ ರಂದು ಪಕ್ಷ ಸ್ಥಾಪನೆಯಾಗಿದ್ದು, ಅಂದಿನಿಂದ ಈ ೨೫ ವರ್ಷಗಳಲ್ಲಿ ಪಕ್ಷ ಅನೇಕ ಏಳು ಬೀಳು ಕಂಡಿದೆ, ಚುನಾವಣೆಯಲ್ಲಿ ಸೋಲು, ಗೆಲುವು ಸಹಿತ ಅಧಿಕಾರ ಕಂಡಿದ್ದೇವೆ, ಆದರೆ ಎಂದೂ ಹಿಗ್ಗಲಿಲ್ಲ, ಕುಗ್ಗಲಿಲ್ಲ, ಪಕ್ಷದ ನಾಯಕರಾಗಲಿ, ಕಾರ್ಯಕರ್ತರಾಗಲಿ ಮನಸ್ಸಿಗೆ ತೆಗೆದುಕೊಂಡಿಲ್ಲ, ಹಾಗೆಂದು ಸುಮ್ಮನೆಯೂ ಇಲ್ಲ, ಪಕ್ಷವನ್ನು ಬಲಪಡಿಸುತ್ತೇವೆ ಎನ್ನುವ ಆತ್ಮಸ್ಥೈರ್ಯದಿಂದ ನಡೆಯುತ್ತಿದ್ದೇವೆ ಎಂದು ರಮೇಶ್ ಬಾಬು ತಿಳಿಸಿದರು.
ತಾಲೂಕು ಮಟ್ಟದಲ್ಲಿ ವರ್ಷವಿಡೀ ಆಚರಣೆ ಮಾಡಬೇಕೆಂಬ ಆದೇಶವಾಗಿದೆ, ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಕೃಷ್ಣಾರೆಡ್ಡಿ ಕಾರ‍್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ರಜತ ಮಹೋತ್ಸವದಲ್ಲಿ ೨ ಸಾವಿರ ಕಾರ‍್ಯಕರ್ತರು ಭಾಗಿ:ಡಿ.೨೦ರಂದು ನಡೆಯುವ ರಜತ ಮಹೋತ್ಸವದಲ್ಲಿ ೨ ಸಾವಿರ ಜೆಡಿಎಸ್ ಕಾರ‍್ಯಕರ್ತರು ಭಾಗವಹಿಸಲಿದ್ದು, ಕಾರ‍್ಯಕ್ರಮವು ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ೧೦ ಗಂಟೆಗೆ ಪ್ರಾರಂಭವಾಗಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಲಿದ್ದು, ನಗರಸಭೆ ಮೈದಾನದಲ್ಲಿ ಕೊನೆಗೊಳ್ಳುವುದಾಗಿ ಡಾ.ರಮೇಶ್‌ಬಾಬು ವಿ.ಎಂ. ತಿಳಿಸಿದ್ದಾರೆ.