ಕೊಪ್ಪಳ:
ಗಿಣಿಗೇರಿ ಗ್ರಾಮದ ಜಯರಾಂ ಪತ್ತಾರ (42) ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ. ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಮೇಲೆ ಪ್ರಥಮ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದು, ಇನ್ನೂ ನಿಗಾದಲ್ಲಿದ್ದಾರೆ.
ಮುನಿರಾಬಾದ್ ಎಇ ಸಂತೋಷ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಕೆಲಸ ನಿರ್ವಹಿಸಿದ ಬಿಲ್‌ನ ಫೈಲ್‌ಗಳು ಕಳೆದಿದೆ ಎಂದು ಹೇಳಿ ಸತಾಯಿಸಿದ್ದರಿಂದ ಬೇಸತ್ತಿದ್ದಾರೆ. ಜಯರಾಂ ಪತ್ತಾರ ಬಸ್ಸಾಪುರ ಗ್ರಾಮದ ರೆಸಾರ್ಟ್‌ನಲ್ಲಿ ಕಾಮಗಾರಿ ಮಾಡಿದ ಫೈಲ್‌ಗಳ ವಿಚಾರಕ್ಕೆ ಸಂಬಂಧಿಸಿ ಜಗಳವಾಗಿದೆ. ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.