ಜೇವರ್ಗಿ: ನಾಡಿದ್ದು ಕನ್ನಡ ಸಾಹಿತ್ಯ ಸಮ್ಮೇಳನ: ಎಸ್‌.ಕೆ.ಬಿರಾದಾರ

KannadaprabhaNewsNetwork |  
Published : Nov 18, 2026, 01:45 AM IST
ಜೇವರ್ಗಿ, ೧) ಸಚಿವ ಡಾ.ಅಜಯಸಿಂಗ್,೨) ಸಮ್ಮೇಳನಾದ್ಯಕ್ಷ ಡಾ.ಗೋವಿಂದರಾಜ ಆಲ್ದಾಳ, ಅವರ  ಭಾವಚಿತ್ರ ಅಂಟಿಸಲಾಗಿದ್ದು ಬಳಸಲು ಮನವಿ, | Kannada Prabha

ಸಾರಾಂಶ

S.K Biradar President of the Taluk unit of the Kannada Sahitya Parishat- stated that the taluk-level Kannada Literary Conference will be held in Jewargi on November 20.

ಕನ್ನಡಪ್ರಭ ವಾರ್ತೆ ಜೇವರ್ಗಿ

ತಾಲುಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನ.20 ರಂದು ಜೇವರ್ಗಿಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲುಕು ಘಟಕದ ಅಧ್ಯಕ್ಷ ಎಸ್‌.ಕೆ.ಬಿರಾದಾರ ತಿಳಿಸಿದರು.

ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಚಿವ ಡಾ.ಅಜಯಸಿಂಗ್ ಅವರು ಸ್ವಾಗತ ಸಮೀತಿ ಅಧ್ಯಕ್ಷರಾಗಿದ್ದು, ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಅಭಿನವಗವಿಸಿದ್ದೇಶ್ವರ ಸ್ವಾಮಿಜಿ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಖಾಪುರ ತಪೋವನ ಮಠದ ಡಾ.ಸಿದ್ದರಾಮ ಶಿವಾಚಾರ್ಯರು, ಸೊನ್ನದ ಡಾ.ಶಿವಾನಂದ ಸ್ವಾಮಿಜಿ ಸಾನಿದ್ಯದಲ್ಲಿ ಸಮ್ಮೇಳನ ನಡೆಯಲಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಡಾ.ಕೇದಾರಲಿಂಗಯ್ಯ ಹಿರೇಮಠ, ಜಿಲ್ಲಾದ್ಯಕ್ಷ ವಿಜಯಕುಮಾರ ತೆಗಲತಿಪ್ಪಿ, ಸಮ್ಮೇಳನಾದ್ಯಕ್ಷ ಡಾ.ಗೋವಿಂದರಾಜ ಆಲ್ದಾಳ, ರಾಜೆಶೇಖರ ಸಾಹು ಸೀರಿ, ಡಾ.ಎಸ.ಎಸ.ಗುಬ್ಬಿ, ಕುಲಸಚಿವ ಡಾ.ರಮೇಶ ಲಂಡನಕರ್ ಭಾಗವಹಿಸುವರು. ಬೆಳಗ್ಗೆ ರಾಷ್ಟ್ರ ದ್ವಜಾರೋಹಣವನ್ನು ಪ್ರಾಚಾರ್ಯ ಡಾ.ಧರ್ಮಣ್ಣ ಬಡಿಗೇರ ನೆರವೇರಿಸಲಿದ್ದು, ಕಸಾಪ ತಾಲುಕು ಅದ್ಯಕ್ಷ ಎಸ.ಕೆ.ಬಿರಾದಾರ ಪರಿಷತ್ ದ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧದಿಂದ ಸಮ್ಮೇಳನದ ವೇದಿಕೆ ಹಳೆ ತಹಸೀಲ್ದಾರ ಕಚೇರಿವರೆಗೆ ಸಮ್ಮಳನಾದ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಲಂಬಾಣಿ ನೃತ್ಯ, ದೊಡ್ಡ ಹಲಿಗೆ, ಕಣಿ ಹಲಿಗೆ ಸಹಿತ ವಿವಿದ ಕಲಾ ತಂಡಗಳು ಭಾಗವಹಿಸಲಿವೆ. ಸಮ್ಮೇಳನದಲ್ಲಿ ಕಸಾಪ ತಾಲೂಕು ಘಟಕದಿಂದ ತಾಲೂಕುಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು, ಡಿಎಚ್‌ಒ ಡಾ.ಸಿದ್ದುಪಾಟೀಲ,ಡಾ.ಶಿವರಾಜ ಪಾಟೀಲ ಹರವಾಳ, ಆದಪ್ಪ ಸಿಕೇದ, ಡಾ.ಗೀತಾ ಯಾಕಾಪೂರ, ಕೃಷ್ಣಾ ಸುಬೇದಾರ ಪಿಎಸ್ ಐ, ಶಂಕರಗೌಡ ಹಾಲ್ಗಡ್ಲಾ, ವಿನೋದಕುಮಾರ ಕುಲಕರ್ಣಿ, ಸಿದ್ದಾರಾಮ ಬಡಿಗೇರ, ಡಾ.ನಾಗರಾಜ ಚನಗೊಂಡ, ಮಹಾಲಕ್ಷ್ಮೀ ಪಾಟೀಲ, ದೇವೇಂದ್ರ ಪವಾರ, ಶ್ರೀಮಂತ ಕುಂಬಾರ, ಗುರುರೇವಣಸಿದ್ದ ಕೀರಣಗಿ, ಮುತ್ತಣ್ಣಗೌಡ ದೇಸಣಗಿ,ಭಿಮಾಶಂಕರ ಬಿರಾಳ ಸಿಆರ ಸಿ, ಶರಣಬಸವ ಹಿರೇಮಠ, ಸುನೀಲಕುಮಾರ ಕುಲಕರ್ಣಿ ಸೇರಿದಂತೆ ಇನ್ನು ಅನೇಕ ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು ಎಂದು ಎಸ್‌.ಕೆ.ಬಿರಾದಾರ ಹೇಳಿದರು.

ಬಿಜೆಪಿ ಜಿಲ್ಲಾ ನಿಕಟಪೂರ್ವ ಅದ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಮೇರವಣಿಗೆ ಉದ್ಘಾಟಿಸಲಿದ್ದು, ಪುರಸಭೆ ಮಾಜಿ ಅದ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ ನೇತೃತ್ವ ವಹಿಸುವರು. ಸಮ್ಮೆಳನದ ಗೌರವಾದ್ಯಕ್ಷ ದಯಾನಂದ ದೇವರಮನಿ, ಮಲ್ಲಿಕಾರ್ಜುನ ಗೌಡ ಪಾಟೀಲ ಬಿರಾಳ, ಸಮ್ಮೇಳನ ಕಾರ್ಯಾದ್ಯಕ್ಷ ರಮೇಶಬಾಬು ವಕೀಲ,ಕಸಾಪ ಗೌರವಾದ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಡಾ.ಪಿ.ಎಮ್.ಮಠ, ಕಲ್ಯಾಣಕುಮಾರ ಸಂಗಾವಿ, ಉಮಾಕಾಂತ ಗೋಲಗೇರಿ, ಶ್ರೀಹರಿ ಕರಕ್ಕಿಹಳ್ಳಿ, ಕವಿತಾ ಹಳ್ಳಿ, ರಿಯಾಜ ಪಟೇಲ ಮುದಬಾಳ, ಮಹಾದೇವಿ ಸುಬೇದಾರ, ಸುನಂದಾ ಕಲ್ಲಾ, ಬಸಮ್ಮ ಹುಗಾರ, ಕಸಾಪ ನಗರ ಘಟಕದ ಅದ್ಯಕ್ಷ ಬಂಗಾರಪ್ಪ ಆಡೀನ, ಎಸ.ಎ.ಪಡಶೆಟ್ಟಿ, ಚಂದ್ರಶೇಖರ ತುಂಬಗಿ, ಪರಮೇಶ್ವರ ಬಿರಾಳ, ಶಾಮರಾಯಗೌಡ ಪಾಟೀಲ ಕೂಳಕೋರ, ಸಿದ್ದು ಕೆರೂರ ಸೇರದಂತೆ ಅನೆಕರು ಬಾಗವಹಿಸುವರು ಎಂದು ಎಸ್‌.ಕೆ.ಬಿರಾದಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಾಶ್ರೀ ಉತ್ತಮ ವೇದಿಕೆ: ಜಿಪಂ ಸಿಇಒ
ತೋಂಟದ ಸಿದ್ಧಲಿಂಗ ಶ್ರೀಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಇತ್ತು: ಈಶಣ್ಣ ಬೆಟಗೇರಿ