ದಾವಣಗೆರೆ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ವಿಬಿ ಜಿ ರಾಮ್ ಜಿ ಯೋಜನೆ ಕುರಿತಂತೆ ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಇತರರ ನೇತೃತ್ವದಲ್ಲಿ ತಾಲೂಕಿನ ದೊಡ್ಡಬಾತಿ, ಹಳೇ ಬಾತಿ ಗುಡ್ಡದ ಕ್ಯಾಂಪ್, ನೀಲಾನಹಳ್ಳಿ, ಹಳೇ ಬಾತಿ ಗ್ರಾಮಗಳಲ್ಲಿ ಮಂಗಳವಾರ ಗ್ರಾಮಸ್ಥರಿಗೆ ಜಾಗೃತಿ ಅಭಿಯಾನ ಕೈಗೊಳ್ಳಲಾಯಿತು.
ಈ ಯೋಜನೆಗೆ ರಾಜ್ಯ ಸರ್ಕಾರದ ಜವಾಬ್ದಾರಿ ಸಹ ಇರಲೆಂದು ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ಅನುಪಾತದಲ್ಲಿ ಕಾಯ್ದೆ ಜಾರಿಗೆ ತಂದಿದೆ. ಈ ಮೊದಲು ರಾಜ್ಯ ಸರ್ಕಾರಗಳಿಗೆ ಈ ಯೋಜನೆ ಬಂಗಾರದ ಮೊಟ್ಟೆ ಇಡುವ ಕೋಳಿಯಾಗಿತ್ತು. ಕೇಂದ್ರದ ಹಣ ದುರುಪಯೋಗ ಮಾಡಿಕೊಂಡು, ಲೂಟಿ ಮಾಡುತ್ತಿದ್ದರು. ಯೋಜನೆ ತಿದ್ದುಪಡಿ ಆದಾಗಿನಿಂದ ಯಾವುದಕ್ಕೂ ಆಸ್ಪದ ಇಲ್ಲದಂತಾಗಿದೆ. ಅದನ್ನೇ ಕಾಂಗ್ರೆಸ್ಸಿಗರಿಗೆ ಹಳ್ಳಿಯಿಂದ ದಿಲ್ಲಿವರೆಗೆ ಇರುವವರಿಗೆ ಸಹಿಸಲಾಗುತ್ತಿಲ್ಲ ಎಂದು ಟೀಕಿಸಿದರು.
ಕೂಲಿ ಕಾರ್ಮಿಕರ ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ ಸಿಸ್ಟಮ್, ವೀಡಿಯೋ ರೆಕಾರ್ಡಿಂಗ್‌ನಂತಹ ಅನೇಕ ಬದಲಾವಣೆ ತರಲಾಗಿದೆ. 100 ದಿನ ಇದ್ದ ಮಾನವ ದಿನಗಳನ್ನು ಈಗ 125 ದಿನವಾಗಿ ಹೆಚ್ಚಿಸಿದೆ. ದಿನಗೂಲಿ ಸಹ ಹೆಚ್ಚಿಸಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಜನಪ್ರಿಯ ಪಾರದರ್ಶಕ ಯೋಜನೆಗೆ ಇನ್ನಿಲ್ಲದಂತೆ ವಿರೋಧಿಸುತ್ತಿದೆ. ಅದರಲ್ಲೂ ಎಂದಿಗೂ ಸಲಾಕೆ, ಪುಟ್ಟಿ ಮುಟ್ಟದ ಕಾಂಗ್ರೆಸ್ ನಾಯಕರು ವಿಬಿ ಜಿ ರಾಮ್ ಜಿ ವಿರುದ್ಧ ಸಲಾಕಿ ಪುಟ್ಟಿ ಹಿಡಿದು, ಹೋರಾಟದ ನೆಪದಲ್ಲಿ ನಾಟಕವಾಡುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರ ವಿರುದ್ಧ ಅವರು ಹರಿಹಾಯ್ದರು.ಉತ್ತರ ಮಂಡಲ ಅಧ್ಯಕ್ಷ ತಾರೇಶ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳು, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಮಾಜಿ ಮೇಯರ್ ಕೆ.ಆರ್. ವಸಂತಕುಮಾರ, ಎಚ್.ಎನ್. ಗುರುನಾಥ, ಮುಖಂಡರಾದ ಬಾತಿ ಶಿವಕುಮಾರ, ಬಾತಿ ದೊಗ್ಗಳ್ಳಿ ವೀರೇಶ, ಬಾತಿ ರೇವಣಸಿದ್ದಪ್ಪ, ಎನ್.ಎಚ್. ಹಾಲೇಶ ನಾಯಕ, ಬಾತಿ ಸಿದ್ದೇಶ, ಮಂಜುನಾಥ ಗುತ್ತೂರು, ರಾಜು ಶಾಮನೂರು, ರಾಜು ತೋಟಪ್ಪ, ವಾಟರ್ ಮಂಜುನಾಥ ಹಾಗೂ ಗ್ರಾಮಸ್ಥರು ಇದ್ದರು.
- - --10ಕೆಡಿವಿಜಿ16, 17.ಜೆಪಿಜಿ:
ದಾವಣಗೆರೆ ತಾಲೂಕಿನ ಹಳೇ ಬಾತಿ, ದೊಡ್ಡ ಬಾತಿ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಬಿಜೆಪಿಯಿಂದ ಜಾಗೃತಿ ಅಭಿಯಾನ ನಡೆಸಲಾಯಿತು.