ಮಹಾಲಿಂಗನಹಟ್ಟಿ ಮನೆಗಳಿಗೆ ತಲುಪದ ಜೆಜೆಎಂ

KannadaprabhaNewsNetwork | Published : Mar 1, 2025 1:00 AM

ಸಾರಾಂಶ

ಪ್ರಧಾನಿ ಕನಸಿನ ಮನೆ ಮನೆಗೆ ನೀರು ( ಜೆಜೆಎಂ) ಯೋಜನೆ ಬಂದು ವರ್ಷಗಳೇ ಕಳೆದರೂ ಸಹ ತಾಲೂಕಿನ ಮಹಾಲಿಂಗನಹಟ್ಟಿ ಗ್ರಾಮದಲ್ಲಿ ನೀರಿನ ಬವಣೆಗೆ ಪರಿಹಾರ ದೊರೆತಿಲ್ಲ.

ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ

ಪ್ರಧಾನಿ ಕನಸಿನ ಮನೆ ಮನೆಗೆ ನೀರು ( ಜೆಜೆಎಂ) ಯೋಜನೆ ಬಂದು ವರ್ಷಗಳೇ ಕಳೆದರೂ ಸಹ ತಾಲೂಕಿನ ಮಹಾಲಿಂಗನಹಟ್ಟಿ ಗ್ರಾಮದಲ್ಲಿ ನೀರಿನ ಬವಣೆಗೆ ಪರಿಹಾರ ದೊರೆತಿಲ್ಲ. ಸಂಸದರು ಪ್ರತಿ ದಿನಾ ಮೀಟಿಂಗಗಳಲ್ಲಿ ಜೆಜೆಎಂ ಕಾಮಗಾರಿ ಅನುಷ್ಠಾನದ ಕುರಿತು ಹೇಳಿದರೂ ಸಹ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಈ ಗ್ರಾಮಕ್ಕೆ ಕಳೆದ ಒಂದು ವರ್ಷದಿಂದ ಕುಡಿಯಲು ನೀರು ನೀಡಲು ಗ್ರಾಪಂ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣ ಗ್ರಾಪಂ ವ್ಯಾಪ್ತಿಗೆ ಬರುವ ಮಹಾಲಿಂಗನಹಟ್ಟಿ ಗ್ರಾಮದಲ್ಲಿ ಒಂದುವರೆ ವರ್ಷದಿಂದ ನೀರು ಪೂರೈಸುವಲ್ಲಿ ಗ್ರಾಪಂ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದು, ಪ್ರತಿನಿತ್ಯ ಹೆರಜೇನಹಳ್ಳಿ ಗ್ರಾಮದ ಜನ ಕಿಲೋ ಮೀಟರಗಟ್ಟಲೇ ದೂರ ಹೋಗಿ ನೀರು ತಂದು ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಒಂದು ವರ್ಷಗಳ ಹಿಂದೆ ಹೊಸ ಬೋರ್ ವೆಲ್ ಹಾಕಿಸಿಕೊಡುವಂತೆ ಊರಿನ ಗ್ರಾಮಸ್ಥರು ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತ್ತು. ಅದರೆ ಇಲ್ಲಿಯವರೆಗೆ ಯಾರೊಬ್ಬ ಅಧಿಕಾರಿಗಳು ಇಲ್ಲಿನ ಜನರಿಗೆ ನೀರನ್ನ ನೀಡುವ ಗೋಜಿಗೆ ಹೋಗಿಲ್ಲ. ಗ್ರಾಪಂ ತಾಪಂ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಗೋಗರಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ಈ ದೇಶದಲ್ಲಿ ಇದ್ದಿವಾ ಇಲ್ಲ ಬೇರೆ ದೇಶದಲ್ಲಿ ಇದ್ದಿವಾ ಗೊತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಡಾಂಬರಿಕರಣ ಕಾಣದ ಹೆರಜೇನಹಳ್ಳಿ ಗ್ರಾಮನಮ್ಮ ಮಹಾಲಿಂಗನಹಟ್ಟಿ ಗ್ರಾಮಕ್ಕೆ ಹೋಗಬೇಕಾದರೆ ಹೆರಜೇನಹಳ್ಳಿ ಗ್ರಾಮದಿಂದ ಬರಬೇಕು ಆದರೆ ಗಟ್ಲಗೊಲ್ಲಹಳ್ಳಿ ಗ್ರಾಮದಿಂದ ಬರುವ ರಸ್ತೆ ತುಂಬ ಹದಗೆಟ್ಟಿದ್ದು, ಬೈಕ್‌ನಲ್ಲಿ ಬರಬೇಕಾದರೂ ಕಷ್ಟವಾಗುತ್ತದೆ. ಇನ್ನೂ ಅಪಘಾತ, ಹೆರಿಗೆ ನೋವುಗಳಿಗೆ ಆಂಬ್ಯುಲೆನ್ಸ್ ಬರಲು ಸಾಧ್ಯವಾಗದಷ್ಟು ರಸ್ತೆ ಹಾಳಾಗಿದೆ. ಅನೇಕ ಬಾರಿ ಡಾಂಬರ್ ಹಾಕುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.ಒಂದು ವರ್ಷದ ಹಿಂದೆ ನೀರಿನ ಸಮಸ್ಯೆಸುಮಾರು ಒಂದು ವರ್ಷದ ಹಿಂದೆ ನೀರಿನ ಸಮಸ್ಯೆ ಸರಿ ಪಡಿಸಿ ಎಂದು ತಾಪಂ ಇಒ, ಗ್ರಾಪಂ ಪಿಡಿಒ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಲಿಖಿತ ಮೂಲಕ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ. ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕಾಂತರಾಜು ಅವರು ಗ್ರಾಪಂ ಅಧಿಕಾರಿಗಳು ಆ ಗ್ರಾಮಕ್ಕೆ ನೀರು ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅಲ್ಲಿಗೆ ಯಾರು ಸಹ ನೀರು ಬಿಡುತ್ತಿಲ್ಲ. ಒಂದು ವಾರದಲ್ಲಿ ಬೋರ್ ವೆಲ್ ಬರುತ್ತೆ ಎಂದು ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು ಜನರ ಜೀವದ ಜತೆ ಚಲ್ಲಾಟ ಆಡುತ್ತಿರುವುದು ಶೋಚನೀಯ ಸಂಗತಿಯಾಗಿದೆ.ನಮ್ಮ ಗ್ರಾಮದಲ್ಲಿ ಮನೆ ಇಲ್ಲ ಅದರಿಂದ ನಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲಾಗಿದೆ. ಗ್ರಾಪಂಗೆ ಕಂದಾಯ, ನೀರಿನ ಕಂದಾಯ ಸೇರಿದಂತೆ ಸರ್ಕಾರಕ್ಕೆ ತೆರಿಗೆ ನೀಡಲಾಗುತ್ತಿದೆ. ಅದರೆ ನಮಗೆ ರಸ್ತೆ ಮತ್ತು ನೀರಿನ ಸೌಲಭ್ಯ ನೀಡುತ್ತಿಲ್ಲ. ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ.ಗೋಪಾಲಕೃಷ್ಣ ಊರಿನ ಗ್ರಾಮಸ್ಥರು. ಕೋಟ್‌ 2

ಮಹಾಲಿಂಗನಹಟ್ಟಿ ಗ್ರಾಮಕ್ಕೆ ಹೊಸ ಬೋರ್‌ ವೆಲ್ ಕೊರಸಿ ನೀರಿನ ಸಮಸ್ಯೆ ಬಗೆಹರಿಸಲು ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಅನುಮೋದನೆ ಪಡೆಯಲಾಗಿದೆ. ಈ ಹಿಂದೆ ಕೊರೆಸಲಾಗಿದ್ದ ಬೋರ್‌ವೆಲ್‌ನಲ್ಲಿ ನೀರು ನಿಂತಿದೆ. ಜಿಪಂ ಅನುಮತಿ ಪಡೆದು ಅದಷ್ಟು ಬೇಗ ಬೋರ್ ಕೊರಸಿ ನೀರಿನ ವ್ಯವಸ್ಥೆ ಮಾಡಲಾಗುವುದು. - ಕಾಂತರಾಜು. ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಕೊರಟಗೆರೆ.

Share this article