- ಜಿಪಂ ಸಿಇಒಗೆ ಚನ್ನಗಿರಿ ಶಾಸಕ ಬಸವರಾಜ ಸೂಚನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಮುಕ್ತವಾದ ಗ್ರಾಮಗಳಿಗೆ ನೀರು ಪೂರೈಸಲು, ಶಿಥಿಲವಾದ ಶಾಲೆ, ಅಂಗನವಾಡಿ ಕೇಂದ್ರಗಳು, ಶೌಚಾಲಯ ದುರಸ್ತಿ, ನಿರ್ಮಾಣ ಕಾರ್ಯ ಇನ್ನೊಂದು ತಿಂಗಳಲ್ಲೇ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಸೂಚಿಸಿದರು.
ನಗರದ ಜಿಪಂ ಕಚೇರಿಯಲ್ಲಿ ಸಿಇಒ ಸುರೇಶ ಬಿ. ಇಟ್ನಾಳ್ ಜೊತೆಗ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ಇತರೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಜೆಜೆಎಂನಡಿ ಕಾಮಗಾರಿ ಪೂರ್ಣಗೊಂಡ ಭಾಗ, ಗ್ರಾಮಗಳಿಗೆ ನೀರು ಪೂರೈಸುವ ಕೆಲಸ ಮೊದಲು ಆಗಬೇಕು ಎಂದರು.ಶುದ್ಧ ನೀರಿನ ಘಟನೆಗಳ ನಿರ್ವಹಣೆ ಸಮರ್ಪಕವಾಗಿ ಆಗಬೇಕು. ಮನೆ ಮನೆಗೆ ಕಲ್ಪಿಸಿರುವ ನೀರು ಸಂಪರ್ಕದ ಬಗ್ಗೆ ಸಭೆಗಳಲ್ಲಿ ಗ್ರಾಮೀಣ ನೀರು ಪೂರೈಕೆ ಎಂಜಿನಿಯರ್‌ಗಳು ಗಮನ ಹರಿಸಬೇಕು. ಶಿಥಿಲ ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿ ಶೀಘ್ರ ಕೈಗೊಳ್ಳಬೇಕು. ಶೌಚಾಲಯ ಕಾಮಗಾರಿಗಳನ್ನೂ ಇನ್ನೊಂದು ತಿಂಗಳಲ್ಲೇ ಪೂರ್ಣಗೊಳಿಸಿ, ಬಳಕೆಗೆ ಮುಕ್ತವಾಗಿಸಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ನೀರು, ಚರಂಡಿ, ಶಾಲಾ-ಅಂಗನವಾಡಿ ಕೇಂದ್ರಗಳ ದುರಸ್ತಿ, ರಸ್ತೆ ಕಾಮಗಾರಿ, ದುರಸ್ತಿಗೆ ಗಮನ ಹರಿಸಬೇಕು. ನರೇಗಾ ಯೋಜನೆಯಡಿ ಶಾಲೆಗಳ ಭೋಜನಾಲಯ ಮತ್ತು ನೀರು ಪೂರೈಕೆ ಕಾಮಗಾರಿಗಳ ಬೇಗ ಮುಗಿಸಬೇಕು. ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಪೈಪ್‌ಗಳು ಗುಣಮಟ್ಟದ್ದಾಗಿರಬೇಕು ಎಂದು ಶಾಸಕರು ತಾಕೀತು ಮಾಡಿದರು.- - -
ಕೋಟ್ ಪೈಪ್ ಲೈನ್ ಅಳವಡಿಕೆ ನಂತರ ಗುಂಡಿಗಳಲ್ಲಿ ಸರಿಯಾಗಿ ಮುಚ್ಚಬೇಕು. ಮಣ್ಣಿನ ರಸ್ತೆಯಾಗಿದ್ದರೆ ಅದನ್ನು ಸರಿಪಡಿಸಬೇಕು. ಸಿಸಿ ರಸ್ತೆ ಅಥವಾ ಡಾಂಬರ್ ರಸ್ತೆಯಾಗಿದ್ದರೆ ಅವುಗಳನ್ನು ಸರಿಯಾಗಿ ಸಮತಟ್ಟು ಮಾಡಬೇಕು. ಯಾವುದೇ ಕಾಮಗಾರಿ ಕಳಪೆಯೆಂದು ಕಂಡುಬಂದರೆ ಸಂಬಂಧಿಸಿದ ಎಂಜಿನಿಯರ್, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ- ಬಸವರಾಜ ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ
- - - -2ಕೆಡಿವಿಜಿ6, 7:ದಾವಣಗೆರೆ ಜಿಪಂ ಕಚೇರಿಯಲ್ಲಿ ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಅವರು ಜಿಪಂ ಸಿಇಒ ಸುರೇಶ ಇಟ್ನಾಳ್ ಅವರಿಂದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದು, ಸಲಹೆ-ಸೂಚನೆ ನೀಡಿದರು.