ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದ ಹೊರವಲಯದ ಜೆ.ಕೆ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ವಿದ್ಯಾವಂತ ನಿರುದ್ಯೋಗಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣ ಮತ್ತು ಅನುತೀರ್ಣ ಹಾಗೂ ಎಲ್ಲಾ ಪದವೀಧರರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವುದೇ ಉದ್ಯೋಗ ಮೇಳದ ಉದ್ದೇಶ ಎಂದರು.
40 ಉದ್ಯಮಗಳು ಭಾಗಿಉದ್ಯೋಗ ಮೇಳದಲ್ಲಿ ಬೆಂಗಳೂರಿನ ಪೀಣ್ಯ, ಬೊಮ್ಮಸಂದ್ರ, ಜಿಗಣಿ, ಬೆಂಗಳೂರು ಗ್ರಾಮಾಂತರ ಪ್ರದೇಶದ ಕೈಗಾರಿಕೆಗಳಾದ ದೇವನಹಳ್ಳಿ, ಹೊಸಕೋಟೆಯ ಚೊಕ್ಕಹಳ್ಳಿ (ಪಿಲ್ಲಗುಂಪೆ) ಹಾಗೂ ಅವಿಭಜಿತ ಕೋಲಾರ ಜಿಲ್ಲೆಯ ವೇಮಗಲ್, ನರಸಾಪುರ ಹಾಗೂ ತಾಲೂಕಿನ ಮಸ್ತೇನಹಳ್ಳಿ ಸೇರಿದಂತೆ ೪೦ಕ್ಕೂ ಹೆಚ್ಚು ಬೃಹತ್ ಹಾಗೂ ಮಧ್ಯಮ ಮತ್ತು ಸಣ್ಣ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು ವಿವಿಧ ಪದವಿಗಳನ್ನು ಪಡೆದಂತಹ ವಿದ್ಯಾರ್ಥಿಗಳು ಹಾಗೂ ಪಿಯುಸಿ, ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಮತ್ತು ಅನುತ್ತೀರ್ಣ ಹಾಗೂ ಎಲ್ಲಾ ಪದವೀಧರರಾದ ೩೦೦೦ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗವಕಾಶ ದೊರೆಯುವ ಅವಕಾಶವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರೆಡ್ಡಿ, ಉದ್ಯೋಗ ಮೇಳದ ಉಸ್ತುವಾರಿ ಸುರೇಂದ್ರ ರೆಡ್ಡಿ, ನಗರಸಭಾ ದೇವಳಂ ಶಂಕರ್, ಅಗ್ರಹಾರ ಮುರಳಿ, ಮಂಜುನಾಥ್, ಅಲ್ಲಭಕಾಷ್, ಮುಖಂಡರಾದ ವೆಂಕಟೇಶ್, ದೊಡ್ಡಬೊಮ್ಮನಹಳ್ಳಿ ರವಿ, ವೆಂಕಟರಮಣಪ್ಪ, ಮಧು, ಮುನಿವೆಂಕಟರೆಡ್ಡಿ ಮತ್ತಿತರರು ಇದ್ದರು.