ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಉದ್ಯೋಗ ಮೇಳಗಳು ಸಹಕಾರಿ: ಕಲ್ಯಾಣಪುರ ಮಠದ ಬಸವಣ್ಣಜ್ಜನವರು

KannadaprabhaNewsNetwork |  
Published : Jun 01, 2026, 02:00 AM IST
ಹುಬ್ಬಳ್ಳಿಯಲ್ಲಿ ಕೆಜಿಪಿ ಫೌಂಡೇಶನ್‌ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಉದ್ಯೋಗ ಮೇಳಕ್ಕೆ ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಇಂದಿಗೂ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಪರಿಹಾರಕ್ಕೆ ಹೆಚ್ಚೆಚ್ಚು ಉದ್ಯೋಗ ಮೇಳಗಳು ನಡೆಯುವಂತಾಗಲಿ ಎಂದು ಕುಂದಗೋಳದ ಕಲ್ಯಾಣಪುರಮಠದ ಬಸವಣ್ಣಜ್ಜನವರು ಹೇಳಿದರು.

ಹುಬ್ಬಳ್ಳಿ: ಇಂದಿಗೂ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಪರಿಹಾರಕ್ಕೆ ಹೆಚ್ಚೆಚ್ಚು ಉದ್ಯೋಗ ಮೇಳಗಳು ನಡೆಯುವಂತಾಗಲಿ ಎಂದು ಕುಂದಗೋಳದ ಕಲ್ಯಾಣಪುರಮಠದ ಬಸವಣ್ಣಜ್ಜನವರು ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಕೆಎಲ್‌ಇ ಸಂಸ್ಥೆಯ ಜ. ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾನುವಾರ ಕೆಜಿಪಿ ಫೌಂಡೇಶನ್ ವತಿಯಿಂದ 2ನೇ ಬಾರಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನಿಗೆ ಉದ್ಯೋಗ ಅವಶ್ಯವಾಗಿದೆ. ಇಂದು ಹಣವಿದ್ದರೆ ಎಲ್ಲ ಕೆಲಸ ಕಾರ್ಯಗಳಾಗಲು ಸಾಧ್ಯ. ಬದುಕಿನುದ್ದಕ್ಕೂ ನಾವು ನಿತ್ಯದ ಜೀವನಕ್ಕೆ ಶ್ರಮವಹಿಸಿ ದುಡಿಯುವುದು ಅವಶ್ಯವಾಗಿದೆ. ಒಳ್ಳೆಯ ದಾರಿಯಲ್ಲಿ ನಡೆದು, ದುಡಿಮೆ ಮಾಡಿ ಬದುಕು ಕಟ್ಟಿಕೊಳ್ಳಿ ಎಂದರು.

50 ಸಾವಿರ ಯುವಕರಿಗೆ ಉದ್ಯೋಗ ನೀಡುವ ಸಂಕಲ್ಪ ಹೊಂದಿರುವ ಕೆಜಿಪಿ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ಅವರ ನಿರ್ಧಾರ ಅಭಿನಂದನಾರ್ಹ. ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಇಂತಹ ಉದ್ಯೋಗ ಮೇಳ ಸಹಕಾರಿಯಾಗಿವೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಸಾಧನಾ ಪೊಟೆ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಬೃಹತ್ ಉದ್ಯೋಗ ಮೇಳ ನಡೆಯುತ್ತಿರುವುದು ಸಂತಸದ ಸಂಗತಿ. ಅಂತಾರಾಷ್ಟ್ರೀಯ ಉದ್ಯೋಗ ಅವಕಾಶಗಳು ಸಾಕಷ್ಟಿವೆ. ಆದರೆ, ವೃತ್ತಿ ಎಂಬ ಪರಿಭಾಷೆಯನ್ನು ನಾವು ಅರಿತುಕೊಳ್ಳಬೇಕು. ಕೇವಲ ವೇತನವನ್ನು ನೋಡಿ ಉದ್ಯೋಗ ಅಳೆಯಬೇಡಿ. ಕಾಟಾಚಾರಕ್ಕೆ ಉದ್ಯೋಗ ಎಂಬ ಕಲ್ಪನೆಯಿಂದ ಹೊರಬಂದು, ಕೌಶಲ್ಯ ಅಳವಡಿಸಿಕೊಂಡು ಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ವೃತ್ತಿಯಲ್ಲಿ ದೃಢ ನಿರ್ಧಾರ, ಗಟ್ಟಿತನ ಬೆಳೆಸಿಕೊಳ್ಳಬೇಕು. ಯಾವುದೇ ಕೆಲಸ ಸಿಗಲಿ ಶ್ರದ್ಧೆಯಿಂದ ಗೌರವಿಸಿ ಕಾರ್ಯ ನಿರ್ವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಜೆಪಿ ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್ ಮಾತನಾಡಿ, 2025 ರಲ್ಲಿ ಫೌಂಡೇಶನ್ ಆರಂಭ ಮಾಡಿ, ಮೊದಲು ಆರಂಭಿಸಿದ್ದೇ ಉದ್ಯೋಗ ಮೇಳ. ಐದು ವರ್ಷಗಳಲ್ಲಿ ಫೌಂಡೇಶನ್ ಮೂಲಕ 50 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಉದ್ಯೋಗಾಂಕ್ಷಿಗಳು ಈ ಉದ್ಯೋಗ ಮೇಳದ ಸದುಪಯೋಗಕ್ಕೆ ಮುಂದಾಗಿ ಎಂದರು.

ಕಾಲೇಜಿನ ನಿಯೋಜನೆ ಅಧಿಕಾರಿ ಶಿಲ್ಪಾ ಸುಣಗಾರ, ಕೆಜಿಪಿ ಫೌಂಡೇಶನ್ ಪ್ರಮುಖರಾದ ಸಂಕೇತ ಶೇಟ್, ರಾಜು ಪಾಟೀಲ ಸೇರಿದಂತೆ ಹಲವರಿದ್ದರು. ಪ್ರಾಚಾರ್ಯ ಎಸ್.ಎಲ್. ಪಾಟೀಲ ಸ್ವಾಗತಿಸಿದರು. ಸತೀಶ ಕುಂದಗೋಳ ಪ್ರಾರ್ಥಿಸಿದರು. ಡಾ. ನೇತ್ರಾವತಿ ಗಬ್ಬೂರ ನಿರೂಪಿಸಿದರು. ಸಾವಿರಾರು ಉದ್ಯೋಗಾಂಕ್ಷಿಗಳು ಬೆಳಗ್ಗೆಯಿಂದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು ಕಂಡು ಬಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಷಡ್ಯಂತ್ರ
ಭಾರತ ಏಕತೆ, ಶಾಂತಿಯ ಸುಂದರ ತೋಟ: ಡಾ. ಅನ್ನದಾನೀಶ್ವರ ಶ್ರೀ