ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಮಾರ್ಗದರ್ಶನ ಅಗತ್ಯ

KannadaprabhaNewsNetwork |  
Published : Jun 19, 2026, 02:30 AM IST
ಹಾನಗಲ್ಲಿನಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಸಂಸ್ಥೆಯ ಹಾವೇರಿ ಜಿಲ್ಲಾ ಉಸ್ತುವಾರಿ ಕೃಷ್ಣಾ ನಾಯಕ. | Kannada Prabha

ಸಾರಾಂಶ

ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮಾರ್ಗದರ್ಶನ ನೀಡಿ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಎಸ್‌ವಿಟಿಅರ್‌ಎಸ್ ಸಂಸ್ಥೆ ೩೦ ವರ್ಷಗಳಿಂದ ನಿರಂತರವಾಗಿ ಪರಿಶ್ರಮಿಸುತ್ತಿದೆ ಎಂದು ಸಂಸ್ಥೆಯ ಹಾವೇರಿ ಜಿಲ್ಲಾ ಉಸ್ತುವಾರಿ ಕೃಷ್ಣಾ ನಾಯಕ ತಿಳಿಸಿದರು.

ಹಾನಗಲ್ಲ: ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮಾರ್ಗದರ್ಶನ ನೀಡಿ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಎಸ್‌ವಿಟಿಅರ್‌ಎಸ್ ಸಂಸ್ಥೆ ೩೦ ವರ್ಷಗಳಿಂದ ನಿರಂತರವಾಗಿ ಪರಿಶ್ರಮಿಸುತ್ತಿದೆ ಎಂದು ಸಂಸ್ಥೆಯ ಹಾವೇರಿ ಜಿಲ್ಲಾ ಉಸ್ತುವಾರಿ ಕೃಷ್ಣಾ ನಾಯಕ ತಿಳಿಸಿದರು.

ಹಾನಗಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಮತ್ತು ಎಫ್‌ವಿಟಿ ಆರ್‌ಎಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೂರ್ಣ ಪ್ರಮಾಣದ ಶಿಕ್ಷಣ ಪಡೆಯದೆ, ಉದ್ಯೋಗಕ್ಕೂ ಸೇರದೆ ಕಾಲ ಹರಣ ಮಾಡುವ ಯುವಕ ಯುವತಿಯರಿಗೆ ಉತ್ತಮ ಉದ್ಯೋಗ ಮಾರ್ಗದರ್ಶನ ನೀಡಿ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸಲು ಎಲ್ಲರೂ ಮುಂದಾಗಬೇಕು. ಕಾಲ ಹರಣದ ಜೊತೆಗೆ ಯುವಕ ಯುವತಿಯರು ತಂದೆ ತಾಯಿಯರಿಗೆ ಭಾರವಾಗಬಾರದು. ಇಂದಿನ ಕಾಲದಲ್ಲಿ ಮನೆಯಲ್ಲಿ ಒಬ್ಬರೇ ದುಡಿದು ಜೀವನ ಸಾಗಿಸುವುದು ತುಂಬ ಕಷ್ಟ. ಅಲ್ಲದೆ ಪ್ರತಿ ವ್ಯಕ್ತಿ ದುಡಿಮೆ ಮಾಡುವಂತಹವನಾಗಿರಬೇಕು. ಅದಕ್ಕಾಗಿ ಉದ್ಯೋಗ ಮಾರ್ಗದರ್ಶನ ಅತ್ಯವಶ್ಯವಾಗಿದೆ. ಅಲ್ಲದೆ ಉದ್ಯೋಗವೆಂದರೆ ಅದು ಕೇವಲ ಸರ್ಕಾರಿ ಉದ್ಯೋಗ ಎಂಬ ಭ್ರಮೆಯಿಂದ ಯುವಕರು ಹೊರಬರಬೇಕು. ಖಾಸಗಿ ಕಂಪನಿಗಳಲ್ಲಿ ನಮ್ಮ ಕೌಶಲ್ಯವನ್ನು ಆಧರಿಸಿ ಬಹಳಷ್ಟು ಉದ್ಯೋಗಾವಕಾಶಗಳಿವೆ ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ, ರೋಶನಿ ಎಂದರೆ ಬೆಳಕು. ಸಮಾಜದಲ್ಲಿ ಎಲ್ಲ ದುರ್ಬಲರಿಗೆ ಮಾರ್ಗದರ್ಶನ ಮಾಡಿ ಒಳ್ಳೆಯ ಬದುಕಿಗೆ ತಿಳುವಳಿಕೆ ನೀಡುವ ತೀರ ಅವಶ್ಯಕತೆ ಇದೆ. ಜೀವನ ಮೌಲ್ಯಗಳನ್ನು ಕಲಿಸುವುದು ಇಂದಿನ ತೀರ ಅಗತ್ಯಗಳಲ್ಲೊಂದಾಗಿದೆ. ಹಿರಿಯರನ್ನು ಗೌರವದಿಂದ ಕಾಣುವ, ಅವರಿಗೆ ಅಗತ್ಯ ಸಹಾಯ ಮಾಡುವ ಮೂಲಕ ಸಂತೋಷದಿಂದ ಬಾಳಲು ಸಹಾಯ ಮಾಡಬೇಕಾಗಿದೆ. ಹಿರಿಯರು ಮಕ್ಕಳ ಬಗ್ಗೆ ಭರವಸೆ ಕಳೆದುಕೊಳ್ಳುವಂತಾಗಬಾರದು. ಸಮಾಜದಲ್ಲಿ ಯಾರೂ ತಲೆ ತಗ್ಗಿಸುವಂತ ಜೀವನಕ್ಕೆ ದಾರಿಯಾಗುವುದು ಬೇಡ. ಎಲ್ಲರೂ ಒಟ್ಟಾಗಿ ಬದಕುವ ಸಂಕಲ್ಪ ನಮ್ಮದಾಗಬೇಕು ಎಂದು ಸಲಹೆ ಮಾಡಿದರು.

ಆಶಯ ನುಡಿಗಳನ್ನಾಡಿದ ರೋಶನಿ ಸಮಾಜ ಸೇವಾ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಕೆ.ಎಫ.ನಾಯ್ಕರ, ಗ್ರಾಮೀಣ ಯುವಕರ ಸಬಲೀಕರಣವೇ ಇಂದ ತೀರ ಅಗತ್ಯವಾದ ಕೆಲಸ. ಇದಕ್ಕಾಗಿ ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ಇಂದು ಸಮಾಜ ಸೇವಾ ಸಂಸ್ಥೆಗಳು ವಹಿಬೆಕಾಗಿದೆ. ಯುವಕ ಯುವತಿಯರಿಗೆ ಉದ್ಯೋಗವಿಲ್ಲದಿದ್ದರೆ ಅವರು ತಂದೆ ತಾಯಿ ದುಡಿದ ದುಡಿಮೆಯನ್ನೇ ಅವಲಂಬಿಸುವ ಸ್ಥಿತಿಗೆ ಬರಬೇಕಾಗುತ್ತದೆ. ಹೀಗಾಗಿ ಅದು ಖಾಸಗಿ ಅಥವಾ ಸರ್ಕಾರಿ ಯಾವುದೇ ಆಗಿರಲಿ ಅನಗತ್ಯ ಕಾಲ ಹರಣಕ್ಕೆ ಅವಕಾಶವಿಲ್ಲದಂತೆ ದುಡಿಮೆಯ ಕಡೆಗೆ ಗಮನ ಕೊಡಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಲೊಕೇಶ ಲಮಾಣಿ, ತರಬೇತುದಾರರಾದ ಅಶ್ವಿನಿ ಪ್ರಸಾದ್, ಗೌರಮ್ಮ ವೈ ಕೆ, ಮಂಜುನಾಥ ಗೌಳಿ, ಸುನಿಲ ಶಡಗರವಳ್ಳಿ, ಎಸ್.ವಿ. ಪಾಟೀಲ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣದಲ್ಲಿ ಶೇ. 40 ಜನರಿಗೆ ಬಯಲು ಶೌಚವೇ ಗತಿ!
ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ಧ: ನಿಸಾರ್ ಅಹಮದ್