ಉದ್ಯೋಗ ಸಂದರ್ಶನ ಕುರಿತಂತೆ ತರಬೇತಿ

KannadaprabhaNewsNetwork |  
Published : Jul 17, 2025, 12:30 AM IST
16ಎಚ್ಎಸ್ಎನ್16 :  | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಕೌಶಲ್ಯವೃದ್ಧಿ ಹೆಚ್ಚಿಸಲು ಮೂರು ದಿನದ ತರಬೇತಿಯನ್ನು ಕೊಡಲಾಗುತ್ತಿದೆ. ನಂತರ ಬೆಂಗಳೂರು ಮತ್ತು ಹಾಸನದ ವಿವಿಧ ಕಂಪನಿಗಳ ಬೃಹತ್ ಉದ್ಯೋಗ ಮೇಳ ಎದುರಿಸಲು ಅನುಕೂಲ ಮಾಡಿಕೊಡಲಾಗುವುದು. ಪ್ಲೇಸ್ಮೆಂಟ್ ಟ್ರೈನಿಂಗ್ ಇದಾಗಿದೆ. ಕೆಲಸಕ್ಕೆ ಸೇರಲು ಹೇಗೆ ಸಂದರ್ಶನ ಹೇಗೆ ಎದುರಿಸುವುದು ಬಗ್ಗೆ ಈ ತರಬೇತಿಯಲ್ಲಿ ತಿಳಿಸಲಾಗುತ್ತದೆ. ಪದವಿ ಸ್ನಾತಕೋತ್ತರ ಪದವಿ, ಐ.ಟಿ.ಐ ಮತ್ತು ಡಿಪ್ಲೋಮೊ ಪಾಸಾದವರು ಹಾಗೂ ಇತರೆ ಕೌಶಲ್ಯಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳನ್ನು ಈ ಉದ್ಯೋಗ ಮೇಳದಲ್ಲಿ ಆಯ್ಕೆ ಮಾಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಮೀಪದ ಬಿ. ಕಾಟೀಹಳ್ಳಿಯಲ್ಲಿರುವ ಮ್ಯಾಜಿಕ್ ಬಸ್ ಇಂಡಿಯ ಫೌಂಡೇಶನ್ ಸಹಯೋಗದೊಂದಿಗೆ ಸಂತ ಜೋಸೆಫರ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿದರು.

ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ನ ಜೋಸ್ವತ್ ಡಾಡಿನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯವೃದ್ಧಿ ಹೆಚ್ಚಿಸಲು ಮೂರು ದಿನದ ತರಬೇತಿಯನ್ನು ಕೊಡಲಾಗುತ್ತಿದೆ. ನಂತರ ಬೆಂಗಳೂರು ಮತ್ತು ಹಾಸನದ ವಿವಿಧ ಕಂಪನಿಗಳ ಬೃಹತ್ ಉದ್ಯೋಗ ಮೇಳ ಎದುರಿಸಲು ಅನುಕೂಲ ಮಾಡಿಕೊಡಲಾಗುವುದು. ಪ್ಲೇಸ್ಮೆಂಟ್ ಟ್ರೈನಿಂಗ್ ಇದಾಗಿದೆ. ಕೆಲಸಕ್ಕೆ ಸೇರಲು ಹೇಗೆ ಸಂದರ್ಶನ ಹೇಗೆ ಎದುರಿಸುವುದು ಬಗ್ಗೆ ಈ ತರಬೇತಿಯಲ್ಲಿ ತಿಳಿಸಲಾಗುತ್ತದೆ. ಪದವಿ ಸ್ನಾತಕೋತ್ತರ ಪದವಿ, ಐ.ಟಿ.ಐ ಮತ್ತು ಡಿಪ್ಲೋಮೊ ಪಾಸಾದವರು ಹಾಗೂ ಇತರೆ ಕೌಶಲ್ಯಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳನ್ನು ಈ ಉದ್ಯೋಗ ಮೇಳದಲ್ಲಿ ಆಯ್ಕೆ ಮಾಡಲಾಗುವುದು ಎಂದರು.

ಕಾಲೇಜಿನ ಸೆಂಟ್ ಜೋಸೆಫ್ ಕಾಲೇಜು ಕ್ಯಾಂಪಸ್‌ನ ಫಾಧರ್ ಓಲ್ವಿನ್ ಯಗಾಸ್ ಮಾತನಾಡಿ, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ನಗರದ ಸಮೀಪ ಬಿ. ಕಾಟೀಹಳ್ಳಿಯಲ್ಲಿರುವ ಸೆಂಟ್ ಜೋಸೆಫ್ ಕಾಲೇಜು ಆವರಣದಲ್ಲಿ ಮೊದಲ ಎರಡು ದಿನಗಳ ಕಾಲ ವಿವಿಧ ಕಂಪನಿಗಳ ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಮೂರನೇ ದಿನದಲ್ಲಿ ಬೆಂಗಳೂರು ಮತ್ತು ಹಾಸನದಿಂದ ಕಂಪನಿಗಳು ಬರುತ್ತಿದೆ. ಉದ್ಯೋಗ ಸಿಗಲೆಂದು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. ಸೆಂಟ್ ಜೋಸೆಫ್ ಕಾಲೇಜು ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ ಮತ್ತು ಇವು ಸಾಂಪ್ರದಾಯಿಕ ಶ್ರೇಷ್ಠತೆಯನ್ನು ಹೊಂದಿದ್ದು, ಜುಲೈ ೧೮ರಂದು ಬೆಂಗಳೂರು ಮತ್ತು ಹಾಸನದ ವಿವಿಧ ಕಂಪನಿಗಳ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಇದೇ ವೇಳೆ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ನಿಖಿಲ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರಂಗೇಗೌಡ, ಕಾಲೇಜಿನ ಉಪ ಪ್ರಾಂಶುಪಾಲ ಪ್ರದೀಪ್, ಗ್ರಂಥ ಪಾಲಕಿ ಶಶಿಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ