ಶಿವಕುಮಾರ ಕುಷ್ಟಗಿ ಗದಗ
ಗದಗ ಜಿಲ್ಲೆಯು ವ್ಯಾಪಕ ಪ್ರಮಾಣದಲ್ಲಿ ದುಡಿವ ವರ್ಗವನ್ನು ಹೊಂದಿದ್ದು, ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ನೀಡುವ ಬಿಪಿಎಲ್ ಕಾರ್ಡ್‌ಗಳು ಸಿಗದೇ ಅವರೆಲ್ಲ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.ಕಳೆದ ನಾಲ್ಕು ವರ್ಷಗಳಿಂದಲೂ ಹೊಸ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿಲ್ಲ. ಕಾರ್ಮಿಕ ಇಲಾಖೆಯ ಕಾರ್ಡ್ ಹೊಂದಿರುವವರು ಅಥವಾ ತುರ್ತು ಆರೋಗ್ಯ ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಅಲ್ಪಾವಧಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆಯೇ ಹೊರತು, ಪೂರ್ಣ ಪ್ರಮಾಣದಲ್ಲಿ ಅನುಮತಿ ಸಿಕ್ಕಿಲ್ಲ. ಅರ್ಜಿ ಸಲ್ಲಿಸುವ ಪೋರ್ಟಲ್ ಸ್ಥಗಿತಗೊಂಡಿರುವುದು ಅರ್ಹರಿಗೆ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಅನೇಕ ಬಡ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ.
6854 ಅರ್ಜಿ ಬಾಕಿ:ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಇದುವರೆಗೂ ಒಟ್ಟು 23430 ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 12393 ಅರ್ಜಿಗಳು ಮಾತ್ರ ಅನುಮೋದನೆಗೊಂಡಿವೆ. 6,854 ಅರ್ಜಿಗಳು ವಿವಿಧ ಕಾರಣಗಳಿಂದ ಬಾಕಿ ಉಳಿದಿದ್ದು, ಅವುಗಳಿಗೆ ಇದುವರೆಗೂ ಕಾರ್ಡ್‌ಗಳು ಲಭಿಸಿಲ್ಲ. ಇನ್ನುಳಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಆಹಾರ ಇಲಾಖೆ ಹೇಳುತ್ತಿದೆಯಾದರೂ, ಬಾಕಿ ಉಳಿದಿರುವ ಸಾವಿರಾರು ಅರ್ಜಿಗಳ ಫಲಾನುಭವಿಗಳ ಪ್ರತಿದಿನದ ಅಲೆದಾಟ ತಪ್ಪಿಲ್ಲ.
2023 ಅವಕಾಶವೇ ಇಲ್ಲ:ಸರ್ಕಾರ 2023ರ ನಂತರ ಹೊಸ ಅರ್ಜಿಗಳ ಸಲ್ಲಿಕೆಗೆ ಅವಕಾಶ ನೀಡಿಲ್ಲ. ಪ್ರಸ್ತುತ ಪಡಿತರ ಚೀಟಿ ತಿದ್ದುಪಡಿಗಳಿಗೆ ಮಾತ್ರ ಅವಕಾಶವಿದೆ.ಇದರಿಂದ 2023ರ ನಂತರ ಮದುವೆಯಾದವರು, ಪಾಲಕರಿಂದ ಬೇರ್ಪಟ್ಟವರು, ಕೆಲಸ ಕಾರ್ಯಗಳ ನಿಮಿತ್ತ ತಮ್ಮ ಊರುಗಳನ್ನು ತ್ಯಜಿಸಿ ಬೇರೆಡೆ ತೆರಳಿದವರಿಗೆಲ್ಲ ಸರ್ಕಾರದ ಸೌಲಭ್ಯ ಪಡೆಯಲು ಸಾಕಷ್ಟು ತೊಂದರೆಯಾಗಿದೆ.
ತಾಲೂಕುವಾರು ಬಾಕಿ ಅರ್ಜಿಗಳ ವಿವರಗದಗ ಜಿಲ್ಲೆಯಾದ್ಯಂತ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ಬಾಕಿ ಉಳಿದಿರುವವರ ವಿವರ
ತಾಲೂಕು ಅರ್ಜಿ ಸಲ್ಲಿಕೆ ಅನುಮೋದನೆ ತಿರಸ್ಕೃತ/ವಿಲೇವಾರಿ, ಬಾಕಿಗದಗ 7486 3789 706 2991
ಮುಂಡರಗಿ 4033 2449 770 814ನರಗುಂದ 1630 1055 248 327
ರೋಣ 2990 1754 439 797ಶಿರಹಟ್ಟಿ 2264 1286 547 431
ಗಜೇಂದ್ರಗಡ 2062 1067 152 843ಲಕ್ಷ್ಮೇಶ್ವರ 1871 993 497 381
ಗ್ಯಾರಂಟಿ ಕಾಳಜಿ ಬಿಪಿಎಲ್ ಗಿಲ್ಲಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಗದಗ ಜಿಲ್ಲೆಯಲ್ಲಿ ಅವುಗಳ ಅನುಷ್ಠಾನದಲ್ಲಿ ಶೇ.98 ಕ್ಕಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗೆ ಪ್ರಮುಖ ಮಾನದಂಡವಾಗಿರುವ ಬಿಪಿಎಲ್ ಕಾರ್ಡ್‌ಗಳೇ ಇಲ್ಲದಿರುವುದರಿಂದ ಸಾಕಷ್ಟು ಬಡವರು ಸರ್ಕಾರದ ಮಹಾತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಂದಲೇ ವಂಚಿತರಾಗುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕಿದೆ.
2023ರಿಂದ ಅರ್ಜಿ ಸಲ್ಲಿಸಲು ಅವಕಾಶವಿಲ್ಲದೇ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಬಡವರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ನೂತನ ಕಾರ್ಡ್‌ಗಳ ನೊಂದಣಿಗೆ ಅವಕಾಶ ಕಲ್ಪಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದ್ದಾರೆ.ಬಿಪಿಎಲ್ ಕಾರ್ಡ್‌ಗೆ ಸಂಬಂಧಿಸಿದಂತೆ ಅರ್ಜಿದಾರರ ಸ್ಥಳ ಸಮೀಕ್ಷೆ ನಡೆಸಿ ಅನುಮೋದನೆ ನೀಡಲಾಗಿದೆ. ತಾಂತ್ರಿಕ ಕಾರಣದಿಂದ ಕೆಲ ಅರ್ಜಿಗಳ ಸ್ಥಳ ಸಮೀಕ್ಷೆ ಬಾಕಿ ಉಳಿದಿದೆ. ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶೀಘ್ರವೇ ಅರಂಭವಾಗುವ ನಿರೀಕ್ಷೆಯಿದೆ ಎಂದು ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗದಗ ವಿನೋದಕುಮಾರ ಎಚ್ ಹೇಳಿದ್ದಾರೆ.