ಒಣಬರದಿಂದ ರೈತರು, ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಗ್ರಾಮೀಣ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿ ಗುಳೆ ಹೋಗದಂತೆ ತಡೆಯಲು ಗುಳೆ ತಡೆ ಯಲು ಸರ್ಕಾರ ರಾಜ್ಯದಲ್ಲಿ ಪ್ರತಿ ತಿಂಗಳು ಒಂದು ಸಾವಿರ ಕೋಟಿ ರು.ಗಳನ್ನು ಖರ್ಚು ಮಾಡಲು ಸಿದ್ಧವಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
- ಪ್ರತಿ ತಿಂಗಳೂ ಒಂದು ಸಾವಿರ ಕೋಟಿ ರು.ಖರ್ಚು: ಸಚಿವ । ಗ್ರಾಮದ ಪ್ರತಿಯೊಂದು ಹೊಲಕ್ಕೂ ರಸ್ತೆ; ಪ್ರಮುಖ ಸಂಕಲ್ಪಕನ್ನಡಪ್ರಭ ವಾರ್ತೆ ಬೀದರ್
ಒಣಬರದಿಂದ ರೈತರು, ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಗ್ರಾಮೀಣ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿ ಗುಳೆ ಹೋಗದಂತೆ ತಡೆಯಲು ಗುಳೆ ತಡೆ ಯಲು ಸರ್ಕಾರ ರಾಜ್ಯದಲ್ಲಿ ಪ್ರತಿ ತಿಂಗಳು ಒಂದು ಸಾವಿರ ಕೋಟಿ ರು.ಗಳನ್ನು ಖರ್ಚು ಮಾಡಲು ಸಿದ್ಧವಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ 9 ತಿಂಗಳಿಗಾಗಿ 9500 ಕೋಟಿ ರು.ಗಳ ಅನುದಾನ ಹಂಚಿಕೆಯಾಗಿದೆ. ಕೇಂದ್ರದಿಂದ ಈ ಹಿಂದೆ ಶೇ.90ರಷ್ಟು ಪಾಲಿನ ಅನುದಾನ ಕೊಡಲಾಗುತ್ತಿತ್ತು ಇದೀಗ ಶೇ.60ಷ್ಟು ಮಾತ್ರ ನೀಡಲಾಗುತ್ತಿದೆ. ಉಳಿದ ಶೇ.40ರಷ್ಟು ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದರು.
ಬಡವರಿಗೆ, ಕೂಲಿ ಕಾರ್ಮಿಕರಿಗೆ ಸಹಾಯ ಆಗಲಿದೆ ಎಂಬ ಆಲೋಚನೆಯಿಂದಾಗಿ ರಾಜ್ಯ ಸರ್ಕಾರ ಜುಲೈ 1ರಿಂದ ಯೋಜನೆ ಅನುಷ್ಠಾನಕ್ಕೆ ತಂದಿದ್ದೇವೆ. ಸಧ್ಯ ಜಿಲ್ಲೆಯಲ್ಲಿ ಪ್ರತಿ ದಿನ 22ಸಾವಿರ ಜನರಿಗೆ ಉದ್ಯೋಗ ಕಲ್ಪಿಸುತ್ತಿದ್ದೇವೆ ಇದನ್ನು 50ಸಾವಿರಕ್ಕೆ ಹೆಚ್ಚಿಸುವ ಗುರಿ ನೀಡಿದ್ದೇನೆ ಎಂದರು.
50 ಸಾವಿರ ಜನರಿಗೆ ಉದ್ಯೋಗದ ಗುರಿ: ಬೀದರ್ ಜಿಲ್ಲೆಗೆ 48ಕೋಟಿ ರು.ಗಳನ್ನು ಸದರಿ ಯೋಜನೆ ಜಾರಿಗಾಗಿ ಮುಂಗಡವಾಗಿ ಬಿಡುಗಡೆ ಮಾಡಿದ್ದೇನೆ. ಇಲ್ಲಿಯವರೆಗೆ 3ಲಕ್ಷ ಮಾನವ ದಿನಗಳನ್ನು ಸೃಜನ ಮಾಡಲಾಗಿದ್ದು, ಹೊಸ ಹೊಸ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ತೆರೆದಬಾವಿ, ಶಾಲಾ ಕೋಣೆ, ಗೋಕಟ್ಟಾ, ಕಂಪೌಂಡ್ ಹೀಗೆಯೇ 318 ಕಾಮಗಾರಿಗಳಿವೆ ಎಂದರು.
ಗ್ರಾಮದ ಪ್ರತಿಯೊಂದು ಹೊಲಕ್ಕೂ ರಸ್ತೆ: ಮಳೆಗಾಲದಲ್ಲಿ ಕೆಸರಿನಿಂದಾಗಿ ಹೊಲಗದ್ದೆಗಳಿಗೆ ಹೋಗಲು ದಾರಿಯೇ ಇರೋದಿಲ್ಲ ಇದರಿಂದ ಕೃಷ್ಯೋತ್ಪನ್ನಗಳ ಸಾಗಣೆ ಮತ್ತು ಬೆಳೆ ಬೆಳೆಸಲು ಅನಾನುಕೂಲ ಮತ್ತು ರಾಶಿಗೂ ಸಮಸ್ಯೆ ಇತ್ತು ಇದನ್ನು ಕೊನೆಗಾಳಿಸಲು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಜಿಲ್ಲೆಯಲ್ಲಿ ಅಗತ್ಯವಿರುವ ಎಲ್ಲ ಹೊಲಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಿಸಲಾಗುವದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಮನೆ ಬಾಗಿಲಿಗೆ ಸ್ವತ್ತಿನ ಖಾತಾ:
ಗ್ರಾಮಗಳಲ್ಲಿರುವ ತಮ್ಮ ಸ್ವತ್ತುಗಳ ಖಾತೆಗಾಗಿ ಜನ ಅಲೆಯದಂತೆ, ಅವರ ಶೋಷಣೆ ಆಗದಂತೆ ಅವರ ಮನೆ ಮನೆಗೆ ಹೋಗಿ ಖಾತಾ ದಾಖಲೆ ಕೊಡುವ ಯೋಜನೆ ಹಾಕಿಕೊಂಡಿದ್ದೇವೆ ಅಲ್ಲದೆ ಬಿ ಇಂದ ಎ ಖಾತೆಗೆ ವರ್ಗಾಯಿಸಿ ಕೊಡಲು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ಅನುಮೋದನೆ ಪಡೆಯಲಿದ್ದೇವೆ, ಶುದ್ಧ ಕುಡಿಯುವ ನೀರಿನ ಘಟಗಳ ಪುನಾರಂಭಕ್ಕೆ ರಿಪೇರಿ ಕೆಲಸ ಶೀಘ್ರ ಆಗಲಿದೆ ಇದರೊಟ್ಟಿಗೆ ಬಾರತ್ ಜೋಡೋ ಸಂಘಗಳ ಸ್ಥಾಪನೆಗೆ ವೇಗ ನೀಡಲಾಗುತ್ತಿದೆ ಎಂದರು.
ಮಕ್ಕಳ ಜ್ಞಾನಾರ್ಜನೆಗೆ ಒತ್ತು:
ಜಿಲ್ಲೆಯಲ್ಲಿ 181 ಅರಿವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸದರಿ ಕೇಂದ್ರದ ಗ್ರಂಥಪಾಲಕರಿಗೆ 12ರಿಂದ 18ಸಾವಿರ ರು.ಗಳ ವರೆಗೆ ಸಂಬಳ ಕೊಟ್ಟು ಅವರಿಗೆ ನಿರ್ವಹಣೆಗೆ ಸೂಚಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವೃದ್ಧಿಗೆ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯ ದೊಡ್ಡ ಗ್ರಾಮದಲ್ಲಿ ಗ್ರಂಥಾಲಯ ಶಾಖೆಗಳನ್ನು ಸ್ಥಾಪಿಸುವ ಯೋಜನೆಗೂ ನಾವು ಚಾಲನೆ ನೀಡುತ್ತಿದ್ದೇವೆ, ಗಣಕಯಂತ್ರಗಳ ಪೂರೈಕೆ ಮಾಡಲೂ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ಎಐ ಆಧಾರಿತ ಕೌಶಲ್ಯ, ಆಂಗ್ಲ ತರಬೇತಿ:
ಸಿಎಸ್‌ಆರ್ ಅಡಿಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಎಐ ಆಧಾರಿತ ಕೌಶಲ್ಯ ತರಬೇತಿ ಕಲ್ಪಿಸಲು ಸಹ ನಾವು ಯೋಜನೆ ರೂಪಿಸಿದ್ದು ಗ್ರಾಮಗಳಲ್ಲಿನ ವಿದ್ಯಾರ್ಥಿಗಳಿಗೂ ಅತ್ಯಾಧುನಿಕ ತಂತ್ರಜ್ಞಾನ, ಆಂಗ್ಲ ಭಾಷೆಯ ತರಬೇತಿಯನ್ನು ಕಲ್ಪಿಸಲಾಗುವದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.