ಕಲಗಾರು ಲಕ್ಷ್ಮಿ ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ತಾಳಗುಪ್ಪ / ಸಾಗರ/ ಬೆಂಗಳೂರು
ಈ ಜಲಪಾತದ ಧೀರ ಗಂಭೀರ ರುದ್ರ ರಮಣೀಯತೆಯ ಎದುರು ಮಾತು ಮೌನವಾಗುತ್ತದೆ. ಬುದ್ಧಿ ಶರಣಾಗುತ್ತದೆ. ಈ ಜಲಪಾತವನ್ನು ಕುರಿತು ಮೈಸೂರು ಗೆಜೆಟೆಯರ್‌ನನಲ್ಲಿ ಲೆವಿಸ್ ಪ್ರಪಂಚದ ಅತಿ ಎತ್ತರದ ಜಲಪಾತಗಳನ್ನು ಗಾತ್ರದಲ್ಲಿ, ಅತಿಗಾತ್ರದ ಜಲಪಾತಗಳನ್ನು ಎತ್ತರದಲ್ಲಿ ಮತ್ತು ಎರಡೂ ಜಲಪಾತಗಳನ್ನು ಸೌಂದರ್ಯದಲ್ಲಿ ಮೀರಿಸುವ ಜೋಗ ಜಲಪಾತ ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾಗಿದೆ ಎಂದು ಬಣ್ಣಿಸಿದ್ದಾನೆ.
ಸೌಂದರ್ಯದಲ್ಲಿ ಅದ್ವಿತೀಯವೆನಿಸಿದ ಜೋಗ ಜಲಪಾತದ ವರ್ಣನೆಯನ್ನು ಮಾಡದ ಕವಿಗಳೇ ಇಲ್ಲ. ಜೋಗಕ್ಕೆ ಬಂದು ನಿಸರ್ಗ ವೈಭವಕ್ಕೆ ಮನಸೋತ ವಿಶ್ವಕವಿ ರವೀಂದ್ರನಾಥ ಟಾಗೋರ್‌ರವರಿಂದ ಹಿಡಿದು ದ.ರಾ.ಬೇಂದ್ರೆಯವರೆಗೆ ಹಲವು ಉತ್ತುಂಗ ಪ್ರತಿಭೆಗಳು ಜಲಪಾತದ ರುದ್ರ ರಮಣೀಯತೆಯನ್ನು ಕಂಡು ಬೆರಗಾಗಿ ಹಾಡಿದ್ದಾರೆ. ಸ್ಥಳದಲ್ಲಿಯೇ ಹಾಡು ಕಟ್ಟಿ ಹಾಡಿದ ಲಾವಣಿಕಾರರು, ಜನಪದ ಕವಿಗಳು, ತಮ್ಮ ಕಲ್ಪನೆಯ ಭಂಡಾರವನ್ನು ತುಂಬಿಕೊಂಡು ಹೋದ ಸಾಹಿತಿಗಳು, ಸ್ಫೂರ್ತಿಯಿಂದ ಚಿತ್ರ ಬಿಡಿಸಿದ ಕಲಾವಿದರು, ವಿದೇಶಿ ಪ್ರವಾಸಿಗರು ಜೋಗವನ್ನು ನೋಡುವುದೇ ಅದ್ಭುತ ಅನುಭವ ಎಂದು ಹಾಡಿ ಹೊಗಳಿದ್ದಾರೆ.ಜೋಗ ಜಲಪಾತದ ಎದುರು ನಿಂತರೆ ಪಕೃತಿಯ ಈ ಅದ್ಭುತ ರಮ್ಯ ವಿಶ್ವ ರೂಪದೆದುರು ನಾವು ಅಣುವಿನಂತೆ ಬಿಂದುವಾಗಿ ಬಿಡುತ್ತೇವೆ. ಜಲಪಾತವನ್ನು ಕುರಿತು ವರಕವಿ ಬೇಂದ್ರೆಯವರು ತಮ್ಮ ‘ತಡಸಲು ತಡಸಲು ಅಗೋ ಅಲ್ಲಿ ಎಂದು ಪ್ರಾರಂಭಗೊಳ್ಳುವ ಪದ್ಯದಲ್ಲಿ ನಿಂತಲ್ಲಿಯೇ ಕಾಲಂಟಿತ್ತು, ಊಹೆ ದಿಗಂತಕ್ಕೆ ಹೊಂಟಿತ್ತು’ ಎಂದು ಹಾಡಿದ್ದಾರೆ.
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದಿಂದ ತಲಾ 250 ಮೆ.ವ್ಯಾಟ್‌ನ ಎಂಟು ಜಲವಿದ್ಯುತ್ ಘಟಕಗಳ ಮೂಲಕ 2,000 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್)ಗೆ ಕೇಂದ್ರ ವಿದ್ಯುತ್ ಪ್ರಾಧಿಕಾರ ಶುಕ್ರವಾರ ಅನುಮೋದನೆ ನೀಡಿದೆ.ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗದ ತಲಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳ ಮಧ್ಯಭಾಗದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಶರಾವತಿ ಯೋಜನೆ ಅನಿವಾರ್ಯವಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತದೆ. ಕೇಂದ್ರವು ಡಿಪಿಆರ್‌ಗೆ ಅನುಮತಿ ನೀಡಿದ್ದು, ಉಳಿದ ಅನುಮತಿಗಳನ್ನು ಶೀಘ್ರದಲ್ಲೇ ಪಡೆದು ಯೋಜನೆಯ ಅನುಷ್ಠಾನಕ್ಕೆ ಬದ್ಧವಾಗಿದ್ದೇವೆ ಎಂದಿದ್ದಾರೆ.ನೀರನ್ನು ಮರು ಪಂಪ್ ಮಾಡಿ ಬಳಕೆ:ಯೋಜನೆ ಬಗ್ಗೆ ವಿವರಿಸಿರುವ ಕೆ.ಜೆ.ಜಾರ್ಜ್, ಒಮ್ಮೆ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು ಹರಿದುಹೋದ ನೀರನ್ನೇ ಮತ್ತೆ ಮೇಲಕ್ಕೆ ಪಂಪ್ ಮಾಡಿ ಅದೇ ನೀರಿನಿಂದ ಎರಡನೇ ಬಾರಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದಕ್ಕೆ ಸ್ವಲ್ಪ ವಿದ್ಯುತ್ ವೆಚ್ಚವಾಗುತ್ತದೆಯೇ ಹೊರತು ಮತ್ತೇನೂ ಬೇಕಿಲ್ಲ. ಒಂದು ಹನಿ ನೀರನ್ನೇ ಹಲವಾರು ಬಾರಿ ಬಳಕೆ ಮಾಡಿ ವಿದ್ಯುತ್ ಉತ್ಪಾದನೆ ಮಾಡುವುದು ಉತ್ತಮ ವಿಧಾನ ಎಂದು ಹೇಳಿದ್ದಾರೆ.ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸಲು ಹೈಡ್ರೋ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗಳು (ಪಿಎಸ್‌ಪಿ) ಅಗತ್ಯ. ನೀರನ್ನು ಪುನರ್ಬಳಕೆ ಮಾಡುವುದರಿಂದ, ನೀರಾವರಿ ಯೋಜನೆಗೆ ನೀರಿನ ಕೊರತೆಯಾಗುವುದಿಲ್ಲ, ಬೇಸಿಗೆಯಲ್ಲಿ ನೀರಿನ ಕೊರತೆ ಇದ್ದಾಗಲೂ ನಿರಂತರವಾಗಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದರು.
ಸಾಗರ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾಗೂ ವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯ 21ನೇ ಬಾರಿ ಭರ್ತಿಯಾಗಿದೆ. ಗರಿಷ್ಠ 1819 ಅಡಿಗಳಷ್ಟಿರುವ ಜಲಾಶಯದಲ್ಲಿ ನೀರಿನ ಮಟ್ಟ ಶುಕ್ರವಾರ 1815 ಅಡಿಗೆ ತಲುಪಿದ ಹಿನ್ನೆಲೆಯಲ್ಲಿ ಎಲ್ಲ 11 ರೇಡಿಯಲ್ ಗೇಟ್‍ಗಳ ಮೂಲಕ ಸುಮಾರು 40 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹುಟ್ಟುವ ಶರಾವತಿ ನದಿ ಹೊಸನಗರ, ಸಾಗರ, ಗೇರುಸೊಪ್ಪ ಮಾರ್ಗವಾಗಿ ಹರಿದು ಹೊನ್ನಾವರದಲ್ಲಿ ಸಮುದ್ರವನ್ನು ಸೇರುತ್ತದೆ. ಈ ನಡುವೆ ನದಿಗೆ ಎರಡು ಅಣೆಕಟ್ಟುಗಳನ್ನು (ಗೇರುಸೊಪ್ಪ ಟೇಲ್‍ರೇಸ್ ಸೇರಿದಂತೆ) ಕಟ್ಟಲಾಗಿದ್ದು, ಈ ಎರಡು ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಮೂರು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಯೇ ಹೆಚ್ಚಿನ ಪ್ರಮಾಣದ ವಿದ್ಯುತ್ ಉತಾದನೆಯಾಗುತ್ತದೆ. ಉಳಿದಂತೆ ಚಕ್ರಾ-ಸಾವೆಹಕ್ಲು ಹಾಗೂ ಗೇರುಸೊಪ್ಪ ಟೇಲ್‍ರೇಸ್‍ಗಳಲ್ಲಿ ಕೂಡ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಎಲ್ಲ ಜಲಾಶಯಗಳಿಂದ ಕನಿಷ್ಟ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆಯಾಗುವುದರಿಂದ ಲಿಂಗನಮಕ್ಕಿ ಜಲಾಶಯ ತುಂಬಿದರೆ ಆಳುವ ಸರ್ಕಾರಗಳಿಗೆ, ಜನರಿಗೆ ಎಲ್ಲಿಲ್ಲದೆ ಸಂತೋಷವನ್ನುಂಟುಮಾಡುತ್ತದೆ.ನದಿಪಾತ್ರದ ಜನರಿಗೆ ಆತಂಕ:
ಗಾದೆ ಮಾತಿನಂತೆ ರಾಜ್ಯಕ್ಕೆ ಬೆಳಕು ನೀಡುತ್ತಿರುವ ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಸಾಗರ ತಾಲ್ಲೂಕಿನ ತುಮರಿ, ಬ್ಯಾಕೋಡು ಹೋಬಳಿಯ ನೂರಾರು ಕುಟುಂಬಗಳ ಸಾವಿರಾರು ಜನ ತಮ್ಮ ಇಡೀ ಬದುಕನ್ನೇ ಕಳೆದುಕೊಂಡಿರುವುದು ಈಗ ಇತಿಹಾಸ. ಮೊದಲು ಮಡೆನೂರಿನಲ್ಲಿ ಅಣೆಕಟ್ಟು ಕಟ್ಟಲಾಗಿತ್ತು. ಆಗ ಒಂದಷ್ಟು ಜನರು ಬದುಕನ್ನು ಕಳೆದಕೊಂಡಿದ್ದರು. ನಂತರ ಮಡೆನೂರಿನಿಂದ ಕೆಲವೇ ಕಿ.ಮೀ. ದೂರದಲ್ಲಿ ಹೆಚ್ಚು ನೀರಿನ ಸಂಗ್ರಹಣಾ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿದಾಗ ಮುಳುಗಡೆ ಸಂತ್ರಸ್ತರ ಸಂಖ್ಯೆ ಜಾಸ್ತಿಯಾಯಿತು. ಆದರೆ ಖೇದದ ಸಂಗತಿಯೆಂದರೆ ಇಷ್ಟು ವರ್ಷಗಳಾದರೂ ಈ ಭಾಗದ ಮುಳುಗಡೆ ಸಂತ್ರಸ್ತರ ಬವಣೆ ಕೊನೆಗೊಂಡಿಲ್ಲ. ಯಾವ ಸರ್ಕಾರಗಳೂ ಪುನರ್ವಸತಿ ಸೌಲಭ್ಯ, ಮೂಲಭೂತ ಸೌಕರ್ಯದ ವಿಷಯದಲ್ಲಿ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ ಎನ್ನಲೇಬೇಕು. ಇಂದಿಗೂ ಶರಾವತಿ ಮುಳುಗಡೆ ಸಂತ್ರಸ್ತರ ಬವಣೆ ಚುನಾವಣಾ ರಾಜಕೀಯದ ವಿಷಯಕ್ಕೆ ಸೀಮಿತವಾಗಿದೆ.---------------------------ಬಾಕ್ಸ್...2
2000- 1816.952001-1795
2004-18082005-1819
2006-18192007-18192008-1807.092009-1819
2010-1814.552011-1817.072012-1809.552013-1819
2014-18192015-1793.102016-1796.852017-1799.20
2018-18192019-18192020-1816.102021-1815.90
2022-1814.102023- 1788.252024- 1815------------------------------
ಪೋಟೊ:20ಸಾಗರ01ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ನೀರು ಹೊರಬಿಡಲಾಯಿತು.-----------------ಪೋಟೊ:20ಸಾಗರ02
ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ರಾತ್ರಿ ನೀರು ಹೊರಬಿಟ್ಟ ದೃಶ್ಯ.