ಉತ್ತಮ ಪರಿಸರ ನಿರ್ಮಾಣಕ್ಕಾಗಿ ಕೈಜೋಡಿಸಿ

KannadaprabhaNewsNetwork |  
Published : Sep 20, 2024, 01:42 AM IST
ಮುದ್ದೇಬಿಹಾಳ ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹಾಗೂ ಅಧ್ಯಕ್ಷ ಮೈಬೂಬ್‌ ಗೊಳಸಂಗಿ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಮನುಷ್ಯ ಸದಾ ಆರೋಗ್ಯವಂತನಾಗಿ ರೋಗಮುಕ್ತನಾಗಿರಲು ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕ ಕರ್ತವ್ಯವಾಗಿದೆ. ಮಾತ್ರವಲ್ಲದೇ ಪರಿಸರ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ. ಕಾರಣ ಸಾರ್ವಜನಿಕರು ಕಸ ಮುಕ್ತ, ಪ್ಲಾಸ್ಟಿಕ್‌ ಮುಕ್ತ ಉತ್ತಮ ಪರಿಸರ ನಿರ್ಮಾಣಕ್ಕಾಗಿ ಪುರಸಭೆ ಇಲಾಖೆಯ ಕೈಜೋಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮನುಷ್ಯ ಸದಾ ಆರೋಗ್ಯವಂತನಾಗಿ ರೋಗಮುಕ್ತನಾಗಿರಲು ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕ ಕರ್ತವ್ಯವಾಗಿದೆ. ಮಾತ್ರವಲ್ಲದೇ ಪರಿಸರ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ. ಕಾರಣ ಸಾರ್ವಜನಿಕರು ಕಸ ಮುಕ್ತ, ಪ್ಲಾಸ್ಟಿಕ್‌ ಮುಕ್ತ ಉತ್ತಮ ಪರಿಸರ ನಿರ್ಮಾಣಕ್ಕಾಗಿ ಪುರಸಭೆ ಇಲಾಖೆಯ ಕೈಜೋಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.14 ರಿಂದ ಅ.2 ರವರೆಗೆ ಸ್ವಚ್ಛಭಾರತ ಮಿಷನ್‌ ಅಡಿಯಲ್ಲಿ ಪುರಸಭೆ ನೂತನ ಅಧ್ಯಕ್ಷ ಮೈಬೂಬ್‌ ಗೊಳಸಂಗಿ ಹಾಗೂ ಉಪಾಧ್ಯಕ್ಷ ಪ್ರೀತಿ ದೇಗಿನಾಳ ನೇತೃತ್ವದಲ್ಲಿ ಪಟ್ಟಣದ ಬಹುತೇಕ ಎಲ್ಲ 23 ಪ್ರತಿ ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಒಣ ಕಸ ಹಾಗೂ ಹಸಿ ಕಸವನ್ನು ಎರಡನ್ನು ಪ್ರತ್ಯೇಕಿಸಿ ಪುರಸಭೆಯಿಂದ ತಮ್ಮ ಮನೆ ಬಾಗಿಲಗೆ ಬರುವ ಕಸದ ವಾಹನದಲ್ಲಿ ಹಾಕಬೇಕು. ಜೊತೆಗೆ ಪ್ಲಾಷ್ಟಿಕ್‌ ಬಳಕೆ ನಿಲ್ಲಿಸಬೇಕು. ಇದರಿಂದ ಪರಿಸರದಲ್ಲಿ ವ್ಯತಾಸಗೊಂಡು ವಿಷಮಕಾರಿ ಪರಿಸರಹೊಂದಿ ಮನುಷ್ಯನ ಮಾತ್ರವಲ್ಲದೇ ದನಕರುಗಳ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರಲಿದೆ ಎಂದರು.ಪುರಸಭೆ ಅಧ್ಯಕ್ಷ ಮೈಬೂಬ್‌ ಗೊಳಸಂಗಿ ಮಾತನಾಡಿ, ಸುಂದರ ಪಟ್ಟಣ, ನಗರ, ಬಡಾವಣೆಗಳಾಗಬೇಕಾದರೇ ನಾವೆಲ್ಲ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಕೂಡ ಆಗಿದೆ. ಪಟ್ಟಣದ ಜನರು ಎಲ್ಲೆಂದರಲ್ಲಿ ಕಸ ಕಡ್ಡಿ, ಮುಸುರೆ ಎಸೆಯುವುದರಿಂದ ಆ ಭಾಗದ ಕೊಳಚೆ ಪ್ರದೇಶವಾಗಿ ಸೊಳ್ಳೆಗಳ ಉತ್ಪತ್ತಿಯಿಂದ ಮನುಷ್ಯನು ಹಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾನೆ. ಇದರಿಂದ ಮನುಷ್ಯನ ಆರೋಗ್ಯವೂ ಹದಗೆಟ್ಟು ಹೋಗುತ್ತದೆ. ಜತೆಗೆ ನಮ್ಮ ಪರಿಸರವೂ ಕೆಟ್ಟು ಹೋಗಿ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ವಚ್ಛ ಭಾರತ ಮಷಿನ್ ಮೂಲಕ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಉತ್ತಮ ಪರಿಸರ ನಿರ್ಮಿಸುವ ಉದ್ದೇಶ ಹೊಂದಿದೆ. ಕಾರಣ ಇದೊಂದು ಕೇವಲ ಅಭಿಯಾನ ಮಾತ್ರವಾಗದೇ ನಿತ್ಯದ ಕರ್ತವ್ಯದಲ್ಲಿ ಒಂದಾಗಬೇಕು ಎನ್ನುವ ಉದ್ದೇಶದಿಂದ ಈ ಬಾರಿ ಪುರಸಭೆಯಿಂದ ಪಟ್ಟಣದ ಆಯಾ ವಾರ್ಡ್‌ಗಳ ಸದಸ್ಯರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ನೇತೃತ್ವದಲ್ಲಿ ಪ್ರತಿ ವಾರ್ಡ್‌ಗಳಲ್ಲಿ ಸಂಚರಿಸಿ ಮನೆ ಮನೆಗೆ ತೆರಳಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಮ್ಮದಾಗಿದೆ. ಜೊತೆಗೆ ಗಿಡ ಮರಗಳನ್ನು ಬೆಳೆಸುವುದು ಸೇರಿದಂತೆ ಹಲವು ರೀತಿಯಲ್ಲಿ ಅಭಿಯಾನಕ್ಕೆ ಸಾರ್ವಜನಿಕರು ಸಹಕಾರ ಅತ್ಯಗತ್ಯವಾಗಿದೆ ಎಂದರು.ಈ ವೇಳೆ ಪುರಸಭೆ ಉಪಾಧ್ಯಕ್ಷ ಪ್ರೀತಿ ದೇಗಿನಾಳ, ಸದಸ್ಯೆ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ರಫೀಕ್‌ ದ್ರಾಕ್ಷಿ, ಗೋಪಿ ಮಡಿವಾಳರ, ಚನ್ನಪ್ಪಕಂಠಿ, ಕಂದಾಯ ಅಧಿಕಾರಿ ಎನ್.ಎಸ್.ಪಾಟೀಲ, ಆರೋಗ್ಯ ನಿರೀಕ್ಷಕ ಮಹಾಂತೇಶ ಕಟ್ಟಿಮನಿ, ಜಾವಿದ್‌ ನಾಯ್ಕೋಡಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪ ಕ್ರಿಸ್ ಮಸ್ ಪ್ರಯುಕ್ತ ೨೧ರಂದು ಸೌಹಾರ್ದ ರ‍್ಯಾಲಿ
ಪ್ರತಿ ಮಹಿಳೆ ಸಮತೋಲನ ಆಹಾರ ಸೇವಿಸಬೇಕು: ಸೋನಾ ಮ್ಯಾಥ್ಯೂ