ಸಹಕಾರ ಸಂಘಗಳ ಅಭಿವೃದ್ಧಿಗೆ ಕೈ ಜೋಡಿಸಿ: ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Oct 27, 2025, 12:00 AM IST
26ಕೆಎಂಎನ್ ಡಿ18 | Kannada Prabha

ಸಾರಾಂಶ

ಹಾಲಿನಿಂದ ಮೊಸರು, ಬೆಣ್ಣೆ ತುಪ್ಪ ಆವುಗಳು ನಂದಿನಿಯಲ್ಲಿ ನೈಜವಾಗಿರುವುದರಿಂದ ಬಹಳ ಬೇಡಿಕೆ ಪದಾರ್ಥಗಳಾಗಿದ್ದು, ವಿವಿಧ ರಾಜ್ಯಗಳಲ್ಲಿ ನಮ್ಮ ನಂದಿನಿ ಉತ್ಪನ್ನಗಳನ್ನು ರಪ್ತು ಮಾಡಿಕೊಡಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಇಂತಹ ಕೇಂದ್ರಗಳಿದ್ದರೆ ಆಯಾ ಗ್ರಾಮಗಳಲ್ಲಿರುವ ಹೈನುಗಾರಿಕೆ ಮಾಡುವ ರೈತರಿಗೂ ಅನುಕೂಲವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನಂದಿನಿ ಉತ್ಪನ್ನಗಳ ಬಳಸಿ ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದಿಂದ ನೂತನವಾಗಿ ತೆರೆಯಲಾದ ನಂದಿನಿ ಉತ್ಪನ್ನ ಮಾರಾಟ ಕೇಂದ್ರ ಉದ್ಘಾಟಿಸಿ ಮಾತನಾಡಿ, ನಂದಿನಿ ಹಾಲಿನಿಂದ ನೂರಕ್ಕೂ ಹೆಚ್ಚು ವಿವಿಧ ಉತ್ಪನ್ನ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಟಡಲಾಗುತ್ತಿದೆ. ಇದು ರೈತರ ಬೆನ್ನೆಲುಬು ಎನ್ನಬಹುದು ಎಂದರು.

ರೈತರಿಂದ ಖರೀದಿಸಿದ ಹಾಲಿನಿಂದ ತಯಾರಿಸುವ ಈ ಉತ್ಪನ್ನಗಳ ರಾಜ್ಯದಲ್ಲದೆ ದೇಶದ ವಿವಿಧೆಡೆಯಿಂದಲೂ ಬೇಡಿಕೆಗೆ ಹೆಸರಾಗಿದೆ. ನೈಜ ಹಾಲಿನಿಂದ ತಯಾರಾಗುವ ಈ ಪದಾರ್ಥಗಳು ಬಹಳ ಬೇಡಿಕೆಯಾಗಿದೆ ಎಂದರು.

ಹಾಲಿನಿಂದ ಮೊಸರು, ಬೆಣ್ಣೆ ತುಪ್ಪ ಆವುಗಳು ನಂದಿನಿಯಲ್ಲಿ ನೈಜವಾಗಿರುವುದರಿಂದ ಬಹಳ ಬೇಡಿಕೆ ಪದಾರ್ಥಗಳಾಗಿದ್ದು, ವಿವಿಧ ರಾಜ್ಯಗಳಲ್ಲಿ ನಮ್ಮ ನಂದಿನಿ ಉತ್ಪನ್ನಗಳನ್ನು ರಪ್ತು ಮಾಡಿಕೊಡಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಇಂತಹ ಕೇಂದ್ರಗಳಿದ್ದರೆ ಆಯಾ ಗ್ರಾಮಗಳಲ್ಲಿರುವ ಹೈನುಗಾರಿಕೆ ಮಾಡುವ ರೈತರಿಗೂ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಿ.ಬಾಬು, ಉಪಾಧ್ಯಕ್ಷೆ ಲತಾ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಬಿ ಎಂ.ಸ್ವಾಮೀಗೌಡ, ಸಂಘದ ನಿರ್ದೇಶಕರಾದ ಯತೀಶ್‍, ಶ್ರೀನಿವಾಸ್‍, ಬಿ.ಟಿ.ದೀಪಕ್‍, ವಿಜಯಕುಮಾರ್, ಬಿ.ಕೆ.ಕುಮಾರ್, ಪದ್ಮ, ಸೋಮಾಚಾರಿ, ಪುಟ್ಟಯ್ಯ, ಬಿ.ಟಿ.ರಘು, ಬಿ.ಎಸ್‍.ಕುಮಾರ್, ಕಾರ್ಯದರ್ಶಿ ಗುರುರಾಜ್‍ ಸೇರಿದಂತೆ ಇತರರು ಇದ್ದರು.ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿರುವ ಜಿಲ್ಲಾಧಿಕಾರಿ ನಿವಾಸದಲ್ಲಿ ಭಾನುವಾರ ಜಿಲ್ಲಾ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಹುಟ್ಟುಹಬ್ಬ-ಅಭಿನಂದನೆ ಕಾರ್ಯಕ್ರಮವು ನಡೆಯಿತು.

ಬಳಿಕ ಮಾತನಾಡಿದ ಜಿಲ್ಲಾ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಕೆ.ನಾಗೇಶ್, ಜಿಲ್ಲಾಡಳಿತ ವ್ಯವಸ್ಥೆಯಲ್ಲಿ ಕಾರ್ಯದಕ್ಷತೆಗೆ ಹೆಚ್ಚು ಮಹತ್ವ ನೀಡಿರುವ ಅಧಿಕಾರಿಗಳು ನೌಕರರಿಗೆ ಮತ್ತು ಜನಸಾಮಾನ್ಯರಿಗೆ ಅಚ್ಚುಮೆಚ್ಚಿನ ಅಧಿಕಾರಿಯಾಗುತ್ತಾರೆ. ಇಂತಹ ಸಾಲಿನಲ್ಲಿ ಡಾ.ಕುಮಾರ ಕೂಡ ನಿಲ್ಲುತ್ತಾರೆ. ದಕ್ಷತೆ, ಪ್ರಾಮಾಣಿಕತೆಯೊಂದಿಗೆ ಆಡಳಿತ ಕೌಶಲ್ಯವನ್ನು ಹೊಂದಿರುವ ಅವರು ಎಲ್ಲ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಕಾರ್ಯಕ್ರಮಗಳನ್ನು ಸುಗಮವಾಗಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಮುಖ್ಯಕಾರ್ಯದರ್ಶಿಯಂತಹ ಹುದ್ದೆಗಳು ದೊರಕಲಿ ಎಂದು ಆಶಿಸಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ. ಮೀರಾಶಿವಲಿಂಗಯ್ಯ, ಜಿಂಟಿ ಕಾರ್ಯದರ್ಶಿ ರಂಗಸ್ವಾಮಿ, ನೌಕರರ ಸಂಘದ ಉಪಾಧ್ಯಕ್ಷ ಎಂ.ಎಲ್.ಕೃಷ್ಣೇಗೌಡ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣಗೌಡ, ರಮೇಶ್, ನಟರಾಜು, ಕಾಂತರಾಜು, ಲಿಂಗರಾಜು, ಲಿಂಗರಾಜು, ವಿಜಯ್‌ಕುಮಾರ್, ಚಿಕ್ಕೇಗೌಡ, ರವಿಶಂಕರ್, ಜಯರಾಂ, ಡಿಡಿಪಿಐ ಲೋಕೇಶ್, ಬಿಇಓ ಮಹದೇವು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!