ಕುಷ್ಟಗಿ: ಇನ್ನರ್‌ವೀಲ್ ಕ್ಲಬ್‌ನ ಪ್ರತಿಯೊಬ್ಬ ಸದಸ್ಯೆಯೂ ಸೇವಾ ಮನೋಭಾವದಿಂದ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಇನ್ನರ್‌ವೀಲ್ ಡಿಸ್ಟ್ರಿಕ್ಟ್ 316ರ ಚೇರ್‌ಮನ್ ಮಂಜುಳಾ ಮುಲ್ಗೆ ಕರೆ ನೀಡಿದರು.
ನೂತನ ಅಧ್ಯಕ್ಷೆ ಗೌರಮ್ಮ ಕುಡತಿನಿ ಮಾತನಾಡಿ, ಸಮಾಜಸೇವೆ, ಪರಿಸರ ಸಂರಕ್ಷಣೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಐವರು ಡಯಾಲಿಸಿಸ್ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸುವುದು, ಇಬ್ಬರು ವಿದ್ಯಾರ್ಥಿನಿಯರಿಗೆ ಬ್ಯಾಡ್ಮಿಂಟನ್ ಸಾಮಗ್ರಿ ವಿತರಿಸುವುದು, ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ವೈಷ್ಣವಿ ಅವರನ್ನು ಸನ್ಮಾನಿಸುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯ ನವೋದಯ ಪ್ರವೇಶ ಪರೀಕ್ಷೆಯ ಶುಲ್ಕ ಭರಿಸುವುದು ಹಾಗೂ ಬಸವ ಭವನಕ್ಕೆ 100 ಸ್ಟೀಲ್ ಊಟದ ತಟ್ಟೆಗಳನ್ನು ದೇಣಿಗೆಯಾಗಿ ನೀಡುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಡಿಸ್ಟ್ರಿಕ್ಟ್ ಸೆಕ್ರೆಟರಿ ಡಾ. ಪಾರ್ವತಿ ಪಳೋಟಿ, ಕಾರ್ಯದರ್ಶಿ ಶ್ರೀದೇವಿ ಮಸ್ಕಿಮಠ, ಉಪಾಧ್ಯಕ್ಷೆ ಮೇಘಾ ದೇಸಾಯಿ, ಐಪಿಪಿ ಗಿರಿಜಾ ಮಾಲಿಪಾಟೀಲ, ಖಜಾಂಚಿ ಪ್ರಭಾ ಬಂಗಾರಶೆಟ್ಟರ, ಐಎಸ್‌ಒ ವಂದನಾ ಗೋಗಿ, ಎಡಿಟರ್ ಶಾರದಾ ಶೆಟ್ಟರ್ , ಡಾ. ಕುಮುದಾ ಪಲ್ಲೇದ್, ಡಾ. ವೇದಾ ಪಾಟೀಲ್, ಶೋಭಾ ಕಂದಕೂರ್, ಸುಕನ್ಯಾ ಶೆಟ್ಟರ್, ಗಿರಿಜಾ ಚಿನಿವಾಳ, ಶರಣಮ್ಮ ಅಂಗಡಿ, ಅಡಿವೆಮ್ಮ, ಶಾರದಾ ಜಿಗಜಿನ್ನಿ, ಸುವರ್ಣ ಬಳೂಟಗಿ, ಶಿಲ್ಪಾ ಸುಂಕದ್, ಕಾವೇರಿ ಕುಂದರಗಿ, ಸವಿತಾ ಮಳಗಿ, ಲತಾ, ಅಶ್ವಿನಿ ಪಾಟೀಲ್, ಶಶಿಕಲಾ ಕುಡತಿನಿ, ಪ್ರಿಯಾಂಕಾ ಬಯ್ಯಾಪುರ, ಶಾರದಾ ಕಟ್ಟಿಮನಿ, ಶೋಭಾ ನಾಯಕ್ ಉಪಸ್ಥಿತರಿದ್ದರು.