ಧಾರವಾಡ:
ಇಲ್ಲಿಯ ಭಗನಿ ಸಮಾಜದ ಭವನದಲ್ಲಿ ಭಾನುವಾರ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶಕ್ಕೆ ನರೇಂದ್ರ ಮೋದಿ ಬೇಕಿದೆ. ಹೀಗಾಗಿ ಪ್ರಹ್ಲಾದ್ ಜೋಶಿ ಗೆಲ್ಲಿಸುವ ಮೂಲಕ ಮೋದಿ ಕೈಬಲಪಡಿಸಲು ಸೂಚಿಸಿದರು.
ಮಾಜಿ ಮೇಯರ್ ಈರೇಶ ಅಂಚಟಗೇರಿ, ಏ. 15ರಂದು ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಇದಕ್ಕೂ ಮುನ್ನ ಶಿವಾಜಿ ಮಹಾರಾಜ್ ಪುತ್ಥಳಿಗೆ ಮಾಲಾರ್ಪಣೆ ಬಳಿಕ ಮೆರವಣಿಗೆ ಜರುಗಲಿದೆ. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದರೆ, ಸೋಲಿಲ್ಲದ ಸರದಾರರಾಗಿ ಜೋಶಿ ಈ ಬಾರಿ ನಾಲ್ಕು ಲಕ್ಷ ಮತಗಳ ಅಂತರದ ಗೆಲುವು ದಾಖಲಿಸುವ ಮೂಲಕ ಪುನಃ ಕೇಂದ್ರ ಸಚಿವರಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ನಾಯ್ಕರ ಮಾತನಾಡಿ, ಮಹಿಳಾ ಕಾರ್ಯಕರ್ತರು ಈ ಬಾರಿ ಪ್ರಹ್ಲಾದ ಜೋಶಿ ಅವರಿಗೆ ಬೆಂಬಲಿಸಬೇಕು. ಈ ಮೂಲಕ ಅವರನ್ನು ಪುನಃ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುವಂತೆ ಹೇಳಿದರು.
ಹುಬ್ಬಳ್ಳಿ ಶಹರ ಅಧ್ಯಕ್ಷೆ ಪೂರ್ಣಿಮಾ ಸವದತ್ತಿ, ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿಲು ನೀಡಿರುವ ಗ್ಯಾರಂಟಿಗಳು ಜನರ ಜೀವಕ್ಕೆ ಮಾರಕವಾಗಿವೆ. ಹೀಗಾಗಿ ಗ್ಯಾರಂಟಿಗೆ ತಕ್ಕ ಉತ್ತರ ನೀಡುವಂತೆ ಕರೆ ನೀಡಿದರು.ಬಿಜೆಪಿ ಮುಖಂಡ ಮೋಹನ ರಾಮದುರ್ಗ, ದೇಶಕ್ಕೆ ಮೋದಿ ಜೀ, ಧಾರವಾಡಕ್ಕೆ ಜೋಶಿ ಜೀ ಸಂಕಲ್ಪ ಮಾಡಬೇಕು. ಈ ಪಣದ ಮೂಲಕ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಜೋಶಿ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಸಭೆಯಲ್ಲಿ ಮಾಜಿ ಶಾಸಕ ಕೆ.ಎನ್. ಗಡ್ಡಿ, ಜೆಡಿಎಸ್ ಗ್ರಾಮೀಣಾಧ್ಯಕ್ಷ ಗಂಗಾಧರ ಮಠ, ಮಂಜುನಾಥ ಹೆಗೇದಾರ್, ಮಾರುತಿ ಹಿಂಡಸಗೇರಿ, ಸೈಯದ್ ನದಾಫ್, ಸಿದ್ದಣ್ಣ, ಗೌಸಸಾಬ್ ನದಾಫ್, ಚಿದಂಬರ ನಾಡಗೌಡ, ನವೀನ ಮಡಿವಾಳ ಇದ್ದರು.