- ಸಾಲಿಗ್ರಾಮ ತಾಲೂಕು ಕರ್ನಾಟಕ ಪ್ರೆಸ್ ಕ್ಲಬ್ ನ ನೂತನ ಸಂಘ ಉದ್ಘಾಟನೆಕನ್ನಡಪ್ರಭ ವಾರ್ತೆ ಸಾಲಿಗ್ರಾಮ
ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಪತ್ರಿಕಾ ರಂಗವು ಸತ್ಯವನ್ನು ಹೊರಗೆ ತರುವ ಮೂಲಕ ಸಮಾಜ ಹಾಗೂ ರಾಜಕಾರಣಿಗಳನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಸಾಲಿಗ್ರಾಮ ಪಟ್ಟಣದಲ್ಲಿ ಸಾಲಿಗ್ರಾಮ ತಾಲೂಕು ಕರ್ನಾಟಕ ಪ್ರೆಸ್ ಕ್ಲಬ್ ನ ನೂತನ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಸಮಾಜದ ನಿಜವಾದ ಕಣ್ಣುಗಳಾಗಿದ್ದಾರೆ. ಸಮಾಜದ ನೈಜತೆ ಮತ್ತು ಓರೆ ಕೋರೆ ಗಳನ್ನು ತಮ್ಮ ಮೊನಚಾದ ಲೇಖನಿಯಿಂದ ಜನಮಾನಸಕ್ಕೆ ಮುಟ್ಟಿಸುವಲ್ಲಿ ಪತ್ರಕರ್ತರು ಹಗಲಿರುಳು ಶ್ರಮಿಸುತ್ತಾರೆ ಎಂದು ಹೇಳಿದರು.ಸಾಲಿಗ್ರಾಮ ಪಟ್ಟಣದಲ್ಲಿ ನೂತನವಾಗಿ ಕರ್ನಾಟಕ ಪ್ರೆಸ್ ಕ್ಲಬ್ ಶಾಖೆ ಆರಂಭಿಸಿರುವುದು ತುಂಬಾ ಸಂತಸ ತಂದಿದೆ ಎಂದರು.
ಕರ್ನಾಟಕ ಪ್ರೆಸ್ ಕ್ಲಬ್ ನ ರಾಜ್ಯಾಧ್ಯಕ್ಷ ದಯಾನಂದ್, ಕಸಾಪ ಅಧ್ಯಕ್ಷ ಮಧುಚಂದ್ರ ಮಾತನಾಡಿದರು.ಕರ್ನಾಟಕ ಪ್ರೆಸ್ ಕ್ಲಬ್ ಕಾರ್ಯದರ್ಶಿ ರಮೇಶ್, ಹಿರಿಯ ಪತ್ರಕರ್ತ ಭಾಸ್ಕರ್, ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ನಿವೃತ ಶಿಕ್ಷಕ ಸಾ.ರಾ ರಾಮೇಗೌಡ, ಪಿಡಿಒ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಫಾತಿಮಾ ಉನ್ನಿಸ್, ಜ್ಯೋತಿ ಜಯಸೇನ, ಲಾಲು ಸಾಬ್, ದಮ್ಮನಹಳ್ಳಿ ಪಾಲಾಕ್ಷ, ಹಾಡ್ಯ ಮಹದೇವ ಸ್ವಾಮಿ, ಚಂದ್ರಶೇಖರ್, ಚೆನ್ನಕೇಶವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಡೇರಿ ಮಾದು, ಅಶ್ವತ್ಥ್, ಗೌರಮ್ಮ, ಬಾಲಮನೋಹರ್, ಸಂಘದ ಅಧ್ಯಕ್ಷ ಎಸ್.ಆರ್. ಪ್ರಕಾಶ್, ಉಪಾಧ್ಯಕ್ಷ ಸಿ.ಆರ್. ಮಣಿಕಂಠ, ಪ್ರಧಾನ ಕಾರ್ಯದರ್ಶಿ ಸತೀಶ್, ಕಾರ್ಯದರ್ಶಿ ಸಂಘಟನೆ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಗಂಗಾಧರ. ಖಜಾಂಚಿ ಪ್ರಕಾಶ್, ಸಂಚಾಲಕ ಬ್ರಿಜೇಶ್, ಕಾರ್ಯದರ್ಶಿ ಅವಿನಾಶ್, ಚೇತನ್, ಅಮಿತ್ ಇದ್ದರು.