ಮುಡುಕುತೊರೆ- ಶ್ರೀಶೈಲಗಳಲ್ಲಿ ಸಾಮ್ಯತೆ

KannadaprabhaNewsNetwork |  
Published : Jan 13, 2024, 01:30 AM IST
65 | Kannada Prabha

ಸಾರಾಂಶ

ಮುಡುಕುತೊರೆ ತೋಪಿನ ಮಠದ ಲಿಂಗೈಕ್ಯ ಶ್ರೀ ಮಹಾಲಿಂಗಸ್ವಾಮಿಗಳ ಮೂರನೇ ವರ್ಷದ ಪುಣ್ಯಸ್ಮರಣೆ

- ಮುಡುಕುತೊರೆ ತೋಪಿನ ಮಠದ ಲಿಂಗೈಕ್ಯ ಶ್ರೀ ಮಹಾಲಿಂಗಸ್ವಾಮಿಗಳ ಮೂರನೇ ವರ್ಷದ ಪುಣ್ಯಸ್ಮರಣೆಕನ್ನಡಪ್ರಭ ವಾರ್ತೆ ತಲಕಾಡು

ದಾರ್ಮಿಕ ಪ್ರಸಿದ್ಧ ಪುಣ್ಯಕ್ಷೇತ್ರ ಮುಡುಕುತೊರೆ ಹಾಗೂ ಶ್ರೀಶೈಲ ಪುಣ್ಯಕ್ಷೇತ್ರಗಳು ತನ್ನದೇ ಆದಂತಹ ಪರಸ್ಪರ ವಿಶಿಷ್ಟ ಧಾರ್ಮಿಕ ಪರಂಪರೆ ಸಾಮ್ಯತೆ ಹೊಂದಿವೆ ಎಂದು ಶ್ರೀಶೈಲ ಪೀಠಾಧಿಪತಿ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮುಡುಕುತೊರೆ ತೋಪಿನ ಮಠದ ಲಿಂಗೈಕ್ಯ ಶ್ರೀ ಮಹಾಲಿಂಗಸ್ವಾಮಿಗಳ ಮೂರನೇ ವರ್ಷದ ಪುಣ್ಯ ಸ್ಮರಣಾರ್ಥ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರತಿವರ್ಷ ಮುಡುಕೊತೊರೆ ಜಾತ್ರೆಯ ನಂತರ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಗೆ ನಂದಿಯ ಉಡುಗೊರೆಯೊಂದಿಗೆ ಆಗಮಿಸುವ ಭಕ್ತಗಣ, ಯುಗಾದಿಯ ದಿನ ಭ್ರಮಾರಾಂಭಿಕೆಗೆ ಉಡುಗೋರೆ ಅರ್ಪಣ ಅರ್ಪಿಸಿದ ಬಳಿಕವೇ ಶ್ರೀ ಶೈಲದ ಜಾತ್ರೆ ಪೂರ್ಣಗೊಳ್ಳುವ ಥಾರ್ಮಿಕ ಸತ್ಸಂಪ್ರದಾಯವನ್ನು ಅವರು ತಿಳಿಸಿದರು.

ನಾಲ್ಕು ದಶಕದಿಂದ ಥಾರ್ಮಿಕವಾಗಿ ಸಾಮಾಜಿಕವಾಗಿ ಜನತೆಗೆ ಮಾರ್ಗದರ್ಶನ ನೀಡುತ್ತ ಮಠವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ ಎಂದು ತೋಪಿನ ಶ್ರೀಗಳ ಸಾಧನೆ ಸೇವೆಯ ಶ್ಲಾಘಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮುಡುಕುತೊರೆ- ತಲಕಾಡು ಅವಳಿ ಶ್ರದ್ಧಾಭಕ್ತಿ ಪುಣ್ಯಕ್ಷೇತ್ರಗಳಾಗಿ ಜನಮಾನಸದಲ್ಲಿ ನೆಲೆಗೊಂಡಿವೆ. ವೈದಿಕ ಕ್ಷೇತ್ರದಲ್ಲಿ ಅಪಾರ ಅನುಭವ ಸಂಸ್ಕಾರ ಹೊಂದಿದ್ದ ತೋಪಿನ ಮಠದ ಲಿಂಗೈಕ್ಯ ಶ್ರೀ ಮಹಾಲಿಂಗ ಸ್ವಾಮೀಜಿ ಇಲ್ಲಿ ಗುರುಕುಲ ಪೀಠ ಸ್ಥಾಪಿಸಿ ಭಕ್ತಗಣಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.

ಮನುಷ್ಯ ಧರ್ಮದ ಸೂಕ್ಷ್ಮತೆಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ‌ಮಾಡಬೇಕು. ಜಗತ್ತಿನ ಎಲ್ಲಾ ಧರ್ಮಗಳ‌ಆಚರಣೆಯ ಮೂಲ ಉದ್ದೇಶ ಮಾನವ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದೇ ಆಗಿದೆ ಎಂದ ಸುತ್ತೂರು ಶ್ರೀಗಳು. ದೇವರ ನೆನಪು ಸದಾ ತಪ್ಪು ಮಾಡದಂತೆ ಎಚ್ಚರಿಸುತ್ತದೆ. ಶಿವಲಿಂಗ ಪೂಜೆ, ಮಸೀದಿ ಅಥವಾ ಚರ್ಚಿನಲ್ಲಿ ಪ್ರಾರ್ಥನೆ ಮಾಡುವುದು ಮನುಷ್ಯ ಜೀವನದಲ್ಲಿ ತಪ್ಪು ಹೆಜ್ಜೆ ಇಡದಂತೆ ಸನ್ಮಾರ್ಗದಲ್ಲಿ ನಡೆಯುವಂತಾಗಿದೆ. ಧರ್ಮೋ ರಕ್ಷಿತ ರಕ್ಷತಿ ಮನುಷ್ಯ ಧರ್ಮವನ್ನು ಪಾಲಿಸಿದರೆ ಧರ್ಮ ಮನುಷ್ಯನ ಕಾಪಾಡುತ್ತದೆ‌ಎಂದು ಭಕ್ತಗಣಕ್ಕೆ ಶ್ರೀಗಳು ಆಶೀರ್ವಚನ ಬೋಧಿಸಿದರು.

ಕನಕಪುರ ಮರಳೇ ಗವಿಮಠದ ಶ್ರೀ ಮುಮ್ಮಡಿ‌ ಶಿವರುದ್ರ ಸ್ವಾಮೀಜಿ‌ ಮಾತನಾಡಿದರು.

ತೋಪಿನ‌ಮಠಧ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀವತ್ಸ ಉದ್ಘಾಟಿಸಿದರು. ರೇಣುಕಾ ಶ್ರಮ ಚಂದೂಪುರ ಹೊನ್ನಲಗೆರೆ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ನಂಜುಂಡಸ್ವಾಮಿ, ಡಾ.ಎಂ. ರೇವಣ್ಣ ಹಾಗೂ ಸುತ್ತಮುತ್ತಲಿನ ಹರಗುರು ಚರಮೂರ್ತಿಗಳು, ಗ್ರಾಮದ ಮುಖಂಡರು ಭಾಗವಹಿಸಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌