ಕನ್ನಡಪ್ರಭ ವಾರ್ತೆ ಕಿಕ್ಕೇರಿವಿವೇಕಾನಂದರ ಚಿಂತನೆ, ತತ್ವ ಸಿದ್ಧಾಂತ, ನುಡಿದ ಮುತ್ತಿನ ನುಡಿ ತಿಳಿಸಿದರೆ ಭವಿಷ್ಯದಲ್ಲಿ ದಾರಿದೀಪವಾಗಲಿದೆ ಎಂದು ಉಪಪ್ರಾಂಶುಪಾಲ ಎಚ್.ಎಂ.ಬಸವರಾಜಪ್ಪ ತಿಳಿಸಿದರು.
ಮೌಢ್ಯಬಿಟ್ಟು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ನಿಮ್ಮ ನಡೆ, ನುಡಿ, ಮಾಡುವ ಕೆಲಸಗಳೇ ತಮಗೆ ದಾರಿ ದೀಪವಾಗಲಿದೆ ಎಂದು ಸಾಧಿಸಿ ತೋರಿಸಿಕೊಟ್ಟವರು ವಿವೇಕಾನಂದರು ಎಂದರು.
ಮೊಬೈಲ್ ಯುಗದಲ್ಲಿ ದಾರ್ಶನಿಕರ ಜೀವನ ಚರಿತ್ರೆ ಮರೆಯುವಂತಾಗಿದೆ. ಪುಸ್ತಕ ಜ್ಞಾನವನ್ನುರೂಪಿಸಲಿದೆ. ವಿವೇಕರ ಜ್ಞಾಪಕ ಶಕ್ತಿ, ಅತಿಮತೆಯ ಬುದ್ಧಿ ಅಪರಿಮಿತವಾಗಿದೆ. ಅಂಧಕಾರದ ಬದುಕಿಗೆ ದಿವ್ಯ ಚೇತನವಾಗಲಿದೆ ಎಂದರು.ವಿವೇಕರ ವಾಣಿ ಬದುಕಿಗೆ ಅಳವಡಿಸಿಕೊಳ್ಳಬೇಕಿದೆ. ಯುವ ಸಂಪತ್ತು. ದೇಶದ ಬಲು ದೊಡ್ಡ ಆಸ್ತಿ. ವಿವೇಕರ ಜನ್ಮದಿನವನ್ನು ಯುವ ದಿನವಾಗಿ ನಾಡಿನಲ್ಲಿ ಆಚರಿಸುತ್ತಿರುವುದು ವಿವೇಕರಲ್ಲಿದ್ದ ಯುವಘರ್ಜನೆಯ ಸಾಧನೆಗೆ ಸಾಕ್ಷಿಯಾಗಿದೆ ಎಂದರು.
ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಯುವಕರು ಈ ದೇಶದ ಆಸ್ತಿ. ದೇಶದ ಭದ್ರತೆಗೆ ಅವರ ಕೊಡುಗೆ ಹೆಚ್ಚಾಗಿ ಸಿಗಬೇಕೆಂದು ಬಯಸಿದ್ಧ ವಿವೇಕಾನಂದರು ಯುವಶಕ್ತಿಯ ಪ್ರತೀಕ ಎಂದರೆ ತಪ್ಪಾಗಲಾರದು. ಅವರ ತತ್ವ ಆದರ್ಶಗಳನ್ನು ಯುವಕರು ಅಳವಡಿಸಿಕೊಂಡಾಗ ಮಾತ್ರ ಅವರ ಜನ್ಮದಿನಕೊಂದು ಅರ್ಥ ಎಂದರು.ವಿದ್ಯಾರ್ಥಿಗಳು ಶಿಕ್ಷಣ ಕಲಿಕೆ ಮಾತ್ರವಲ್ಲದೆ ನೈತಿಕ ಶಿಕ್ಷಣಕ್ಕೂ ಒತ್ತು ನೀಡಿದಾಗ ಮಾತ್ರ ಬದುಕು ಸುಂದರವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ನೈತಿಕತೆ ಪ್ರಾಮಾಣಿಕತೆಯನ್ನು ಮೂಡಿಸಿಕೊಳ್ಳಬೇಕು ಎಂದರು.ಸಮಾರಂಭದಲ್ಲಿ ಕನ್ನಡ ಉಪನ್ಯಾಸಕಿ ಸರ್ವ ಮಂಗಳ, ಪ್ರಥಮ ದರ್ಜೆ ಸಹಾಯಕಿ ಕುಮಾರಿ, ಸಹಾಯಕ ವೆಂಕಟೇಶ್, ಭವಾನಿ ವಿದ್ಯಾರ್ಥಿಗಳು ಹಾಜರಿದ್ದರು.