ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ರೂಸಾ 2.0 ಯೋಜನೆಯ ಅಡಿಯಲ್ಲಿ ಎರಡು ದಿನಗಳು ಏರ್ಪಡಿಸಿರುವ ‘ವೃತ್ತಿ ಅವಕಾಶಗಳು ಮತ್ತು ಉದ್ಯೋಗಾರ್ಹತಾ ಕೌಶಲ್ಯಗಳು’ ವಿಷಯದ ಕಾರ್ಯಾಗಾರವನ್ನು ಬುಧವಾರ
ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮವು ಸಮಾಜದ ದಿಕ್ಕನ್ನು ರೂಪಿಸುವ ಶಕ್ತಿಯುತ ಮಾಧ್ಯಮವಾಗಿದ್ದು ಎಂದರು.ಉತ್ತಮ ಪತ್ರಿಕೆ ಜನಮನವನ್ನು ಸೆಳೆಯುವ ಮೂಲಕ ಸಮಾಜವನ್ನು ಸಕಾರಾತ್ಮಕವಾಗಿ ರೂಪಿಸುತ್ತದೆ; ಅದೇ ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ನೀಡುವ ಪತ್ರಿಕೆ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಜವಾಬ್ದಾರಿಯುತ ಪತ್ರಿಕೋದ್ಯಮವು ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದೆ ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಡಾ. ಜೆ. ಲೋಹಿತ್ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭಾಷಾ ಪ್ರಾವೀಣ್ಯತೆ ಮತ್ತು ಪರಿಣಾಮಕಾರಿ ಸಂವಹನ ಕೌಶಲ್ಯಗಳ ಅಗತ್ಯತೆಯನ್ನು ವಿವರಿಸಿದರು.
ಯೋಗಶ್ರೀ ಮತ್ತು ಚಂದ್ರಲಾ ಪ್ರಾರ್ಥಿಸಿದರು, ಮಹದೇವ ಪ್ರಸಾದ್ ಸ್ವಾಗತಿಸಿದರು, ನಂದೀಶ ವಂದಿಸಿದರು. ಎಂ.ಕೆ. ಕೀರ್ತನಾ, ಪಿ. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಅಧ್ಯಾಪಕರಾದ ಡಾ. ಗೋಪಾಲ್, ಡಾ. ಶ್ವೇತಾ ಎಂ. ಹನ್ಸ್, ಕೇಶವಮೂರ್ತಿ, ಡಾ.ಎನ್. ನವೀನ್ ಹಾಗೂ ಇತರ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಜಲ ಸಾಹಸ, ಭೂ ಸಾಹಸ ಕ್ರೀಡಾ ತರಬೇತಿಗೆ ಅರ್ಜಿ ಆಹ್ವಾನಕನ್ನಡಪ್ರಭ ವಾರ್ತೆ ಮೈಸೂರುಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಯ 18 ರಿಂದ 29 ವರ್ಷದೊಳಗಿನ ಯುವಕ, ಯುವತಿಯರಿಗೆ ಜಲ ಸಾಹಸ ಕ್ರೀಡೆಯನ್ನು ವರುಣ ಕೆರೆ ಮತ್ತು ಭೂ ಸಾಹಸ ಕ್ರೀಡೆಯನ್ನು ಪಾಂಡವಪುರದ ಕುಂತಿಬೆಟ್ಟದಲ್ಲಿ ಇಂಡಿಯನ್ ಮೌಂಟನೇರಿಂಗ್ ಫೌಂಡೇಷನ್ ಮತ್ತು ಕರ್ನಾಟಕ ರಾಫ್ಟಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಫೆಬ್ರವರಿ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನಿಸಿದೆ.