ಅಂಕೋಲಾ: ಮಾಧ್ಯಮಗಳ ಪ್ರಾಮಾಣಿಕತೆ, ನಿಷ್ಠೆ ಮತ್ತು ಧೈರ್ಯವೇ ಪ್ರಜಾಪ್ರಭುತ್ವದ ಬಲವಾದ ಸ್ತಂಭ. ಪತ್ರಕರ್ತರಿಲ್ಲದ ಸಮಾಜದಲ್ಲಿ ಜನರಿಗೆ ಸತ್ಯ ತಿಳಿಯುವುದೇ ಕಷ್ಟ. ಈ ಹೊಣೆಗಾರಿಕೆಯನ್ನು ತಮ್ಮ ಜೀವದ ಹಂಗು ತೊರೆದು ನಿರ್ವಹಿಸುತ್ತಿರುವ ಪತ್ರಕರ್ತರ ನಿಷ್ಕಾಮ ಸೇವೆ ಅಗ್ರಗಣ್ಯ ಎಂದು ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಮಾತನಾಡಿ, ಪತ್ರಕರ್ತರೆಂದರೆ ನಮ್ಮ ದೇಶದ ಬೆನ್ನೆಲುಬು, ಸಾಮಾಜಿಕ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಅದನ್ನು ಶೀಘ್ರದಲ್ಲೇ ಬಗೆಹರಿಸುವಲ್ಲಿ ಪತ್ರಿಕಾರಂಗದ ಕಾರ್ಯ ಮಹತ್ವದ್ದಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ತಂತ್ರಜ್ಞಾನ, ಸಾಮಾಜಿಕ ಜಾಲತಾಣ, ಡಿಜಿಟಲ್ ಮಾಧ್ಯಮ ಈ ಎಲ್ಲ ಸವಾಲುಗಳ ನಡುವೆ ನಿಜವನ್ನು ಹುಡುಕುವ, ಜನರ ಹಿತವನ್ನು ಕಾಪಾಡುವ ಜವಬ್ದಾರಿ ಪತ್ರಕರ್ತರದ್ದಾಗಿದೆ ಎಂದರು.ಈಸಿ ಕಾಲೇಜಿನ ಪ್ರಾಚಾರ್ಯ ಎಸ್.ವಿ.ವಸ್ತ್ರದ, ಕೆನರಾ ವೇಲ್ಪರ್ ಟ್ರಸ್ಟಿನ ಆಡಳಿತಾಧಿಕಾರಿ ಆರ್.. ಕೇಣಿ ವೇದಿಕೆಯಲ್ಲಿದ್ದರು.
ಪತ್ರಕರ್ತ ವಾಸುದೇವ ಗುನಗಾ ಸ್ವಾಗತಿಸಿದರು. ಮೋಹನ್ ದುರ್ಗೆಕರ್ ಸನ್ಮಾನ ಪತ್ರ ವಾಚಿಸಿದರು, ಸುಭಾಷ್ ಕಾರೇಬೈಲ್ ನಿರೂಪಿಸಿದರು. ನಾಗರಾಜ್ ಜಾಂಬಳೆಕರ್ ವಂದಿಸಿದರು.