ಪತ್ರಿಕೋದ್ಯಮ ಒಂದು ಸಾಮಾಜಿಕ ಹೊಣೆಗಾರಿಕೆ: ರವಿಕುಮಾರ್

KannadaprabhaNewsNetwork |  
Published : Mar 23, 2026, 01:45 AM IST
ಫೋಟೋ 21 ಟಿಟಿಎಚ್ 01: ಕೋಣಂದೂರಿನಲ್ಲಿ ನಡೆದ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಪತ್ರಿಕೋದ್ಯಮ ಒಂದು ವೃತ್ತಿಯಾಗಿರದೇ, ಅದೊಂದು ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯ ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಪತ್ರಿಕೋದ್ಯಮ ಒಂದು ವೃತ್ತಿಯಾಗಿರದೇ, ಅದೊಂದು ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯ ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.

ಕೋಣಂದೂರು ಗ್ರೀನ್ ಹಾರ್ಟ್ ಕೆಫೆಯಲ್ಲಿ ಶನಿವಾರ ನಡೆದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ತೀರ್ಥಹಳ್ಳಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಕ್ರಿಯಾಶೀಲ ಪತ್ರಕರ್ತ ಇರುವ ಭಾಗದ ಸಮಸ್ಯೆಗಳು ಶೀಘ್ರದಲ್ಲಿ ಇತ್ಯರ್ಥವಾಗುತ್ತವೆ. ಸರ್ಕಾರದ, ವ್ಯವಸ್ಥೆಯ ಕಣ್ಣು ತೆರೆಸುವ ಕಾರ್ಯ ಪತ್ರಕರ್ತರಿಂದ ಆಗುತ್ತಿದೆ. ಆದರೆ, ಸರ್ಕಾರಕ್ಕೆ ಮಾತ್ರ ಪತ್ರಕರ್ತರ ಮೇಲೆ ಯಾವುದೇ ತರಹದ ಅಂತ:ಕರಣ ಇದ್ದಂತೆ ಕಾಣುತ್ತಿಲ್ಲ. ಕೋವಿಡ್ ಕಾಲದಲ್ಲಿ ಕರ್ತವ್ಯ ನಿರತ 56 ಪತ್ರಕರ್ತರು ಮರಣ ಹೊಂದಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿಶೇಷ ಆಸಕ್ತಿಯಿಂದ ಕುಟುಂಬಕ್ಕೆ ತಲಾ 5ಲಕ್ಷ ರು. ನೆರವು ನೀಡಿರುವುದನ್ನು ಸ್ಮರಿಸಬಹುದು ಎಂದರು.

ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ಹುಚ್ಚರಾಯಪ್ಪ, ಜೇನು ಕೃಷಿಕ ಕುಕ್ಕನಕೊಡಿಗೆ ಅವಿನಾಶ್, ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಸದಾಶಿವ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುನ್ನೂರು ಮೋಹನ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೋಣಂದೂರು ಮುರುಗರಾಜ್,ಜಿಲ್ಲಾಧ್ಯಕ್ಷ ವೈದ್ಯನಾಥ್,ಉಪಾಧ್ಯಕ್ಷ ಹುಚ್ಚರಾಯಪ್ಪ, ಕೋಣಂದೂರು ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಸದಾಶಿವ, ಪತ್ರಕರ್ತ ಟೆಲೆಕ್ಸ್ ರವಿಕುಮಾರ್, ಜಿಲ್ಲಾ ಪದಾಧಿಕಾರಿ ರಂಜಿತ್, ಜಿಲ್ಲಾ ಪ್ರತಿನಿಧಿ ಟಿ.ಕೆ.ರಮೇಶ್ ಶೆಟ್ಟಿ ,ಪತ್ರಕರ್ತ ಮನುಕುಮಾರ್ ಹಾಗೂ ತಾಲ್ಲೂಕು ಸಂಘದ ಎಲ್ಲಾ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಲ್ಲಿ ಸಕ್ರಿಯ ಪಾಲ್ಗೊಳ್ಳುವೆ ಎಂದ ಅರ್ಪಿತಾ ಪಟೇಲ್‌
ಪಡಗೂರು ಅಡವಿ ಮಠದಲ್ಲಿ ವಚನ ಕಲ್ಯಾಣ