ಕನ್ನಡಪ್ರಭ ವಾರ್ತೆ ಗಂಗಾವತಿ
ಸ್ಥಳೀಯ ಶ್ರೀ ಚನ್ನಬಸವಸ್ವಾಮಿ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹಿರಿಯ ಪತ್ರಕರ್ತರಾದ ಎಸ್.ಎಂ. ಪಟೇಲ್, ರಾಮಮೂರ್ತಿ ನವಲಿ, ದಂತ ವೈದ್ಯ ಡಾ. ಶಿವಕುಮಾರ, ರಂಗಭೂಮಿ ಕಲಾವಿದೆ ಡಾ. ಸಿ. ಮಹಾಲಕ್ಷ್ಮೀ ಸೇರಿದಂತೆ ಸಾಧಕರಿಗೆ ಶ್ರೀಕೃಷ್ಣದೇವರಾಯ ಪ್ರಶಸ್ತಿ ಘೋಷಿಸಿದೆ.ತಾಲೂಕ ಕಸಾಪ ಭವನದಲ್ಲಿ ಫೆ. 16ರಂದು ವೇದವ್ಯಾಸರಾವ್ ನವಲಿ ಸ್ಮರಣಾರ್ಥ ಕಾವ್ಯಲೋಕದ 108ನೇ ಕವಿಗೋಷ್ಠಿ ಜರುಗಲಿದ್ದು, ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಪ್ರಕಾಶನದ ಎಂ. ಪರಶುರಾಮ ಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಳಿಹಳ್ಳಿಯ ರೇವಣಸಿದ್ದಯ್ಯ ತಾತನವರು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಉದ್ಘಾಟಿಸುವುರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ನಿವೃತ್ತ ಪ್ರಾಚಾರ್ಯ ಬಸವರಾಜ ಐಗೋಳ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸಂಸದ ಶಿವರಾಮಗೌಡ, ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ, ರಾಜ್ಯ ಕರಕುಶಲ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷೆ ಲಲಿತರಾಣಿ ರಾಯಲು, ನಗರಸಭೆ ಅಧ್ಯಕ್ಷ ಮೌಲಾಸಾಬ್, ಮಾಜಿ ಕಾಡಾ ಅಧ್ಯಕ್ಷ ಜೆ. ತಿಪ್ಪೇರುದ್ರಸ್ವಾಮಿ, ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಕಸಾಪ ಜಿಲ್ಲಾಧ್ಯಕ್ಷ ಶರಣೆಗೌಡ ಪೊಲೀಸ್‌ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ರುದ್ರೇಶ ಆರ‍್ಹಾಳ, ಗುರುರಾಜ ಬೆಳ್ಳುಬ್ಬಿ ಪಾಲ್ಗೊಳ್ಳಲಿದ್ದಾರೆ.ಪ್ರಶಸ್ತಿಗೆ ಆಯ್ಕೆಯಾದವರು:
ಹಿರಿಯ ಪತ್ರಕರ್ತರಾದ ಎಸ್.ಎಂ. ಪಟೇಲ್, ರಾಮಮೂರ್ತಿ ನವಲಿ, ಪ್ರಮುಖರಾದ ಡಾ. ಶಿವಕುಮಾರ ಮಾಲಿಪಾಟೀಲ್, ಡಾ. ಸಿ. ಮಹಾಲಕ್ಷ್ಮೀ, ಹನುಮಂತಪ್ಪ ಗೂಗಿಬಂಡಿ, ಮಲ್ಲಮ್ಮ ವಡ್ಡರ, ಮಾರುತಿ ಐಲಿ, ಚನ್ನಬಸಪ್ಪ ಬಳಗಾರ, ಗಿರಿಯಪ್ಪ ಕೆ., ಕೆ. ಪಂಪಣ್ಣ, ಕಳಕಪ್ಪ ತಳವಾರ, ಶೇಖಪ್ಪ ಕಿನ್ನೂರಿ, ಎನ್.ಆರ್. ರಾಯಬಾಗಿ, ಬಸವರಾಜ ಐಗೋಳ, ಚನ್ನಬಸ ಜೇಕಿನ್, ಮಹಾದೇವಿ ಪಾಟೀಲ್, ಪಂಚಾಕ್ಷರಕುಮಾರ, ಡಾ. ಬಸವರಾಜ ಪೂಜಾರ, ಭಾಗ್ಯಶ್ರೀ ಹುರಕಡ್ಲಿ, ವಿಷ್ಣುತೀರ್ಥ ಜೋಶಿ, ಸುನೀತಾ, ಮಂಜುನಾಥ ಹೊಸಕೇರಿ, ಹನುಮಂತಪ್ಪ ನಾಯಕ, ರಿಜ್ವಾನ್ ಮುದ್ದಾಬಳ್ಳಿ, ವಿರುಪಾಕ್ಷಪ್ಪ ಶಿರವಾರ, ಹನುಮೇಶ ಮಹಿಪತಿ, ಮಲ್ಲೇಶ ಸಣಾಪುರ, ಪಂಪನಗೌಡ ಬನ್ನಿಮರದ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.