ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ತಾಲೂಕಿನ ಸಿದ್ದಯ್ಯನ ಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠದಲ್ಲಿ ಮೂರು ದಿನಗಳ ಕಾಲ ಜರುಗುವ ಗಡಿನಾಡ ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದರು. 12 ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವತ್ತ ಪ್ರಯತ್ನಿಸಿದರು. ಬ್ರಾಹ್ಮಣ್ಯತೆಯ ವಿರುದ್ಧ ಹೋರಾಟ ಮಾಡಿದರು. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಜಾತಿಯ ವ್ಯವಸ್ಥೆ ಹೋಗಿಲ್ಲ. ಸಂವಿಧಾನದ ಮೊದಲ ಪುಟದಲ್ಲಿಯೇ ಸಮಾನತೆ, ಸಹೋದರತೆ, ಭಾತೃತ್ವ ಎಂದು ಸಾರಿದ್ದರೂ ಇಂದಿಗೂ ಜಾತಿ ತಾರತಮ್ಯ ಹೋಗಿಲ್ಲ .ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಇದಕ್ಕೆ ಸರ್ಕಾರಗಳು ಸಹಕಾರ ನೀಡುತ್ತಿವೆ ಎಂದರು.
ಗುರು ಪರಂಪರೆಯಿಂದ ಸಾಗಿ ಬಂದ ದೇಶದಲ್ಲಿ ಜಾತಿ ಪರಂಪರೆಯನ್ನು ಹುಟ್ಟು ಹಾಕಿ ಸಾಮಾಜಿಕ ಅಸಮಾನತೆ ತಾಂಡವಾಡುತ್ತಿದೆ. 12ನೇ ಶತಮಾನದ ಬಸವಣ್ಣರ ಆದರ್ಶಗಳು ಪಾಲನೆಯಾಗಿದ್ದರೆ ಭಾರತ ಇನ್ನಷ್ಟು ಸಾಂಸ್ಕೃತಿಕ, ಶ್ರೀಮಂತವಾಗಿರುತ್ತಿತ್ತು. ಜಾತಿ ತಾರತಮ್ಯ ಹೋಗಬೇಕಾದರೆ ಬಸವ ಬಾರತ ನಿರ್ಮಾಣವಾಗಬೇಕು ಎಂದರು.ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ಬಸವಾದಿ ಶಿವಶರಣರ ಆಶಯಗಳನ್ನು ನಾಡಿನನುದ್ದಕ್ಕೂ ಪರಿಚಯಿಸುವಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಸದಾ ಕಾಯಕದಲ್ಲಿ ತೊಡಗಿರುವ ಅವರು ನಿತ್ಯವೂ ನೂರಾರು ಮಕ್ಕಳಿಗೆ ಸ್ವತ ದಾಸೋಹ ಮಾಡಿ ಉಪಚರಿಸುತ್ತಿರುವುದು ಶ್ಲಾಘನೀಯ. ಮೂಡ ನಂಬಿಕೆ ,ಹಳೆಯ ಕಂದಾಚಾರಗಳನ್ನು ಹೋಗಲಾಡಿಸಿ ಬಸವಾದಿ ಶಿವ ಶರಣರ ಆಶಯಗಳನ್ನು ಸಾರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀ ಮಠವು ಇನ್ನಷ್ಟು ಬೆಳೆಯಲಿ ಎಂದರು.