ಸೇವಾಲಾಲ್‌ರ ತತ್ವಾದರ್ಶ ಮನುಕುಲಕ್ಕೆ ದಾರಿದೀಪ

KannadaprabhaNewsNetwork |  
Published : Feb 16, 2025, 01:48 AM IST
ಕ್ಯಾಪ್ಷನ್-ಲಕ್ಷೆö್ಮÃಶ್ವರದ ತಹಸೀಲ್ದಾರ ಕಾರ್ಯಾಲಯದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯೋತ್ಸವ ಆಚರಿಸಲಾಯಿತು. ತಹಸೀಲ್ದಾರ ವಾಸುದೇವ ಸ್ವಾಮಿ, ದೀಪಕ ಲಮಾಣಿ, ಶೇಖಪ್ಪ ಲಮಾಣಿ, ಸೋಮಪ್ಪ ಲಮಾಣಿ, ಮಹೇಶ ಲಮಾಣಿ ಇದ್ದರು.  | Kannada Prabha

ಸಾರಾಂಶ

ಸಂತ ಸೇವಾಲಾಲ್ ಮಹಾರಾಜರು ಲಂಬಾಣಿ ಜನರಲ್ಲಿನ ಅಜ್ಞಾನ, ಮೂಢನಂಬಿಕೆ ಹೋಗಲಾಡಿಸಿ ಅವರಲ್ಲಿ ಸುಜ್ಞಾನದ ಬೆಳಕು ಮೂಡಿಸಿದ ಆರಾಧ್ಯ ದೈವವಾಗಿದ್ದಾರೆ.

ಲಕ್ಷ್ಮೇಶ್ವರ: ಸಂತ ಸೇವಾಲಾಲ್ ಮಹಾರಾಜರು ಸಮಾಜದ ಜನರಲ್ಲಿನ ಅಜ್ಞಾನ, ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಿ ಸುಜ್ಞಾನದ ಬೆಳಕು ಮೂಡಿಸಿದ್ದಾರೆ. ಅವರ ತತ್ವಾದರ್ಶ, ಚಿಂತನೆಗಳು ಇಡೀ ಮನುಕುಲಕ್ಕೆ ದಾರಿದೀಪವಾಗಿವೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.

ಅವರು ಶನಿವಾರ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಸಂತ ಸೇವಾಲಾಲ್‌ ಮಹಾರಾಜರ ಜಯಂತ್ಯುತ್ಸವ ಆಚರಿಸಿ ಮಾತನಾಡಿ, ಸಂತ ಸೇವಾಲಾಲ್ ಮಹಾರಾಜರು ಲಂಬಾಣಿ ಜನರಲ್ಲಿನ ಅಜ್ಞಾನ, ಮೂಢನಂಬಿಕೆ ಹೋಗಲಾಡಿಸಿ ಅವರಲ್ಲಿ ಸುಜ್ಞಾನದ ಬೆಳಕು ಮೂಡಿಸಿದ ಆರಾಧ್ಯ ದೈವವಾಗಿದ್ದಾರೆ. ಅವರು ಲೋಕ ಸಂಚಾರದ ಮೂಲಕ ಜನರ ಕಷ್ಟ ಕಾರ್ಪಣ್ಯ ದೂರಮಾಡಿ ಸಾಮಾಜಿಕ ಚಿಂತನೆಯಲ್ಲಿಯೇ ಬದುಕನ್ನು ಸಮರ್ಪಿಸಿದ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ಸಾಗಬೇಕಾಗಿದೆ ಎಂದರು.

ಈ ವೇಳೆ ತಾಪಂ ಇಓ ಧರ್ಮರ ಕೃಷ್ಣಪ್ಪ, ಬಂಜಾರ ಕಲ್ಯಾಣ ಸಂಘದ ತಾಲೂಕಾಧ್ಯಕ್ಷ ದೀಪಕ ಲಮಾಣಿ, ಮುತ್ತಪ್ಪ ಲಮಾಣಿ, ಶೇಖಪ್ಪ ಲಮಾಣಿ, ಸೋಮಪ್ಪ ಲಮಾಣಿ, ಸಮಾಜ ಕಲ್ಯಾಣ ಇಲಾಖೆಯ ಮುತ್ತಣ್ಣ ಸಂಕನೂರ, ಹೆಸ್ಕಾಂನ ಆಂಜನಪ್ಪ ಎ, ಗುರುರಾಜ ಸಿ, ಸೇರಿದಂತೆ ಸಮಾಜ ಬಾಂಧವರು,ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಇದ್ದರು.

ಪಟ್ಟಣದ ತಾಪಂ ಕಾರ್ಯಾಲಯ, ಪುರಸಭೆ, ಕೆಇಬಿ, ಡೀಪೋ ಸೇರಿದಂತೆ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ