ಪತ್ರಕರ್ತರಿಗೂ ಸೂಕ್ತ ನೆಲೆ ಅವಶ್ಯ

KannadaprabhaNewsNetwork |  
Published : Sep 25, 2024, 12:49 AM IST
ಪತ್ರಕರ್ತರು ನೆಲೆ ಹೊಂದುವುದು ಅವಶ್ಯ | Kannada Prabha

ಸಾರಾಂಶ

ತುಮಕೂರು: ಸಮಾಜದಲ್ಲಿ ಜಾಗೃತಿ ಮೂಡಿಸಿ ಎಚ್ಚರಿಸುವ ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರು ಸಾಮಾಜಿಕ ಕಳಕಳಿಯೊಂದಿಗೆ ಸ್ವಂತ ನೆಲೆ ಹೊಂದುವುದು ಅತ್ಯವಶ್ಯಕವಾಗಿದೆ ಎಂದು ಜಿಪಂ ಸಿಇಓ ಜಿ.ಪ್ರಭು ಸಲಹೆ ನೀಡಿದರು.

ತುಮಕೂರು: ಸಮಾಜದಲ್ಲಿ ಜಾಗೃತಿ ಮೂಡಿಸಿ ಎಚ್ಚರಿಸುವ ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರು ಸಾಮಾಜಿಕ ಕಳಕಳಿಯೊಂದಿಗೆ ಸ್ವಂತ ನೆಲೆ ಹೊಂದುವುದು ಅತ್ಯವಶ್ಯಕವಾಗಿದೆ ಎಂದು ಜಿಪಂ ಸಿಇಓ ಜಿ.ಪ್ರಭು ಸಲಹೆ ನೀಡಿದರು.ಅವರು ನಗರದ ಪತ್ರಿಕಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗೆ ನಿವೇಶನ ಹಂಚಿಕೆ ಸಂಬಂಧ ನಡೆದ ಮೊದಲ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಬಡಜನರಿಗೆ ಸೂರಿಲ್ಲವೆಂದು ವರದಿ ಮಾಡಿ ಸಾಮಾಜಿಕ ಕಳಕಳಿ ಮೆರೆವ ಪತ್ರಕರ್ತರನೇಕರು ಸ್ವಂತ ಸೂರು ಹೊಂದಲು ಸಾಧ್ಯವಾಗಿಲ್ಲ. ಕೆಲವರಿಗೆ ಸ್ವಂತ ಸೂರಿದ್ದರೂ ಅವರ ಮಕ್ಕಳಿಗೆ ಭವಿಷ್ಯದ ಭದ್ರತೆಯಿಲ್ಲ. ಈ ನಿಟ್ಟಿನಲ್ಲಿ ನೈಜ ಪತ್ರಕರ್ತರಾದವರಿಗೆ ಜಿಲ್ಲೆಯ ಪತ್ರಕರ್ತರ ಸಂಘದವರು ಜಿಲ್ಲಾಡಳಿತ, ಜನಪ್ರತಿನಿಧಿಗಳ ಸಹಕಾರ ಪಡೆದು ರಿಯಾಯಿತಿ ದರದ ನಿವೇಶನ ಕಲ್ಪಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲೆಯ ಪತ್ರಕರ್ತರು ಒಮ್ಮತದೊಂದಿಗೆ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದರು.ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಟಿ.ಎನ್.ಮಧುಕರ್ ಮಾತನಾಡಿ ಜಿಲ್ಲಾ ಪತ್ರಕರ್ತರ ಸಂಘದಿಂದ ಕಾರ್ಯನಿರತ ಪತ್ರಕರ್ತರಿಗೆ ಅನೇಕ ಒಳಿತಿನ ಕಾರ್ಯಗಳು ಆಗುತ್ತಿದ್ದು, ಬಹುದಶಕದ ಬೇಡಿಕೆಯಾಗಿದ ಸ್ವಂತ ನಿವೇಶನ ಹಂಚಿಕೆಗೂ ಕಾಲ ಕೂಡಿಬಂದಿದೆ ಎಂದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತರ ಸಂಘದಿಂದ ಅನೇಕ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ನಿರಂತರ ಮಾಡುತ್ತಿದ್ದು, ಬಹುವರ್ಷಗಳ ಬೇಡಿಕೆಯಾದ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ನಿವೇಶನ ಕಲ್ಪಿಸುವ ಯೋಜನೆ ಕಾರ್ಯಗತಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.ನಿರ್ದೇಶಕ ಎಚ್.ಪರಮೇಶ್, ಪತ್ರಕರ್ತರಾದ ಉಗಮಶ್ರೀನಿವಾಸ್, ಮಹಂತೇಶ್, ಛಾಯಾಗ್ರಾಹಕ ರೇಣುಕಾ, ಕುಣಿಗಲ್ ಅಧ್ಯಕ್ಷ ರಂಗನಾಥ್ ಇತರರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗಸ್ವಾಮಿ, ಸಂಘದ ಉಪಾಧ್ಯಕ್ಷ ಎಲ್.ಚಿಕ್ಕೀರಪ್ಪ, ತಿಪಟೂರು ಕೃಷ್ಣ, ಕಾರ್ಯದರ್ಶಿ ಸತೀಶ್ ಹಾರೋಗೆರೆ, ಮಾಜಿ ಅಧ್ಯಕ್ಷ ಕೆ.ಬಿ.ಚಂದ್ರಮೌಳಿ ಸೇರಿ ಇತರ ನಿರ್ದೇಶಕರು, ಜಿಲ್ಲೆಯ ವಿವಿಧೆಡೆಯ ಸದಸ್ಯರು, ಕಾರ್ಯನಿರತ ಪತ್ರಕರ್ತರು ಪಾಲ್ಗೊಂಡರು. ಸಭೆ ಬಳಿಕ ಮಾನವಿಯ ವರದಿ ಬಿತ್ತರಿಸಿದ ರಿಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಜಗದೀಶ್, ವಿಡಿಯೋ ಜರ್ನಲಿಸ್ಟ್ ರಾಕೇಶ್ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌