ಕನ್ನಡಪ್ರಭ ವಾರ್ತೆ ಹುನಗುಂದ
ಹಿರಿಯ ಪತ್ರಕರ್ತ ಅಮರೇಶ ನಾಗೂರ ಪ್ರಾಸ್ತಾವಿಕ ಮಾತನಾಡಿ, ಯುವ ಪತ್ರಕರ್ತರು ಇನ್ನೂ ಹೆಚ್ಚು ಅಧ್ಯಯನಶೀಲರಾಗಬೇಕು. ದೀಪ ಎಲ್ಲರಿಗೂ ಬೆಳಕು ನೀಡಿ ತನ್ನನ್ನು ತಾನು ಸುಟ್ಟುಕೊಳ್ಳುವಂತೆ ಪತ್ರಕರ್ತರ ಪರಿಸ್ಥಿತಿ ಹಾಗೆ ಇದೆ. ಪತ್ರಕರ್ತರ ಬದುಕು ಬಹಳಷ್ಟು ಕಷ್ಟದಾಗಿದೆ. ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆ ಅಪಾರ ಎಂದರು.
ಜಿಲ್ಲಾಧ್ಯಕ್ಷ ಆನಂದ ದಲಬಂಜನ ಮಾತನಾಡಿ, ಪತ್ರಿಕಾರಂಗವು ಇಂದು ಸಾಕಷ್ಟು ಬೆಳವಣೆ ಹೊಂದಿದೆ. ನಿಖರವಾದ ಸುದ್ದಿಗಳು ಪತ್ರಿಕೆಯಿಂದಲೇ ಸಿಗುವುದು. ಆದ್ದರಿಂದ ವಸ್ತುನಿಷ್ಠ ವರದಿ ಮಾಡಲು ಪತ್ರಕರ್ತರು ಶ್ರಮಿಸಬೇಕು. ಪತ್ರಿಕಾರಂಗವು ಇಂದು ಉದ್ದಿಮಿಯಾಗಿದೆ. ಬಂಡವಾಳಶಾಹಿಗಳ ಕೈಕೆಳಗೆ ದುಡಿಯು ಪರಿಸ್ಥಿತಿ ಬಂದಿದೆ ಎಂದು ಹೇಳಿದರು.ತಹಸೀಲ್ದಾರ್ ನಿಂಗಪ್ಪ ಬಿರಾದರ, ತಾಪಂ ಇಒ ಮುರಳೀಧರ ದೇಶಪಾಂಡೆ, ಪ್ರಾಚಾರ್ಯ ಎಚ್.ಸುರೇಶ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶರಣಪ್ಪಹೂಲಗೇರಿ ಉಪನ್ಯಾಸ ನೀಡಿದರು. ಹಿರಿಯ ಪತ್ರಕರ್ತರಾದ ಜಾಕೀರಹುಸೇನ ತಾಳಿಕೋಟಿ, ಮೆಹಬೂಬ ಸರಕಾವಸ, ಜಬ್ಬಾರ ಕಲಬುರ್ಗಿ, ಮಲ್ಲಿಕಾರ್ಜುನ ದರಗಾದ, ಅಮರೇಶ ನಾಗೂರ ಅವರನ್ನು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ, ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಮನಿ, ಪತ್ರಕರ್ತರಾದ ಬಸವರಾಜ ಕಮ್ಮಾರ, ವಿರೇಶ ಕರ್ತುಕೋಟಿ, ಚಂದ್ರು ಗಂಗೂರ, ರಾಜು ಬಡಿಗೇರ, ಸಂಗಮೇಶ ಹೂಗಾರ, ಮಹಾಂತೇಶ ತೋಪಲಕಟ್ಟಿ, ಮಲ್ಲಿಕಾರ್ಜುನ ಬಂಡರಗಲ್ಲ, ರವಿ.ಡಿ.ಎಸ್. ಎಫ್.ಎಂ ಪಿಂಜಾರ, ಬಸವರಾಜ ನಿಡಗುಂದಿ, ಅಂದಾನೆಪ್ಪ ಸುಂಕದ, ಗುರು ಹಿರೇಮಠ, ಶರಣಪ್ಪ ಹಳಪೇಟಿ, ಸುರೇಶ ಪತ್ತಾರ, ಮುತ್ತಣ್ಣ ಬಳಿಗಾರ, ವಿಜಯ ಸಿಂಗದ, ಜಗದೀಶ ಹದ್ಲಿ, ಮುತ್ತಪ್ಪ ಕಮ್ಮಾರ, ದೇವು ಕುರಿ ಸೇರಿದಂತೆ ಇತರರು ಇದ್ದರು.