ಪ್ರೊಬೆಷನರಿ ಪಿಎಸ್ಸೈಗಳೊಂದಿಗೆ ಪತ್ರಕರ್ತರ ಸಂವಾದ

KannadaprabhaNewsNetwork |  
Published : Aug 07, 2025, 12:45 AM IST
6ಎಚ್ಎಸ್ಎನ್18 :  | Kannada Prabha

ಸಾರಾಂಶ

ಪೊಲೀಸ್ ಠಾಣೆಗೆ ಯಾವುದಾದರೂ ದೂರು ಬಂದಾಗ ನಮ್ಮ ಮೇಲಿನ ಅಧಿಕಾರಿಗಳು ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ, ಯಾವ ರೀತಿ ನ್ಯಾಯ ಕೊಡಿಸುತ್ತಾರೆ? ಬಗ್ಗೆ ನಮಗೆ ಸಹಾಯ ಆಗಲಿ ಎಂದು ಎಲ್ಲವನ್ನು ನಮ್ಮ ಟ್ರೈನಿಂಗ್‌ನಲ್ಲಿ ತಿಳಿಸಿಕೊಡುತ್ತಾರೆ. ಈ ತಿಂಗಳಲ್ಲಿ ನಮಗೆ ಆಗಿರುವ ಅನುಭವ, ಇನ್ನು ಮುಂದೆ ಆರು ತಿಂಗಳ ತರಬೇತಿಯಿದೆ. ಇದರಲ್ಲಿ ವಿವಿಧ ರೀತಿಯ ಕೋರ್ಸ್‌ಗಳು ಇರುತ್ತದೆ. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಮುಂದೆ ನಮಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಮುಂದಿನ ಆರು ತಿಂಗಳ ಕೋರ್ಸ್‌ನಲ್ಲಿ ನಮ್ಮನ್ನು ನಾವು ಗಟ್ಟಿಗೊಳ್ಳಿಸುವುದಕ್ಕೆ ಪ್ರಯತ್ನ ಆಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಪೊಲೀಸ್ ಠಾಣೆಗೆ ಯಾವುದಾದರೂ ದೂರು ಬಂದಾಗ ನಮ್ಮ ಮೇಲಿನ ಅಧಿಕಾರಿಗಳು ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ, ಯಾವ ರೀತಿ ನ್ಯಾಯ ಕೊಡಿಸುತ್ತಾರೆ ಹಾಗೂ ಸಮಾಜದ ಜೊತೆ ಯಾವ ರೀತಿ ಹೊಂದಾಣಿಕೆ ಇರಬೇಕು ಎನ್ನುವ ಬಗ್ಗೆ ನಮಗೆ ತರಬೇತಿಯಲ್ಲಿ ತಿಳಿಸಿಕೊಡುತ್ತಾರೆ ಎಂದು ಶಿವಾನಂದ್ ಹಾಗೂ ತರಬೇತಿ ಪಡೆಯುತ್ತಿರುವ ಪಿಎಸ್‌ಐ ಗಳು ತಮ್ಮ ಅನುಭವವನ್ನು ಹಂಚಿಕೊಂಡರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪೊಲೀಸ್ ಮತ್ತು ಮಾಧ್ಯಮದೊಂದಿಗಿನ ಸಂವಾದದಲ್ಲಿ ಹೊಸದಾಗಿ ಅಧಿಕಾರ ಸ್ವೀಕರಿಸಲು ತರಬೇತಿಗೆ ಬಂದಿರುವ ಪ್ರೊಬೆಷನರಿ ಪಿಎಸ್‌ಐಗಳೂ ತರಬೇತಿಯಲ್ಲಿ ತಮ್ಮ ಅನುಭವದ ಮಾತುಗಳನ್ನ ಹೇಳಿಕೊಂಡರು. ಇದೇ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿ, ಈಗಾಗಲೇ ಪೊಲೀಸ್ ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಗೊಂಡಿದ್ದು, ಈ ನಿಟ್ಟಿನಲ್ಲಿ ನಾವುಗಳೆಲ್ಲಾ ತರಬೇತಿ ಪಡೆಯುತ್ತಿದ್ದೇವೆ. ಫೀಲ್ಡ್ ಅಂಡ್ ಆಪರೇಷನ್ ಕೋರ್ಸ್ ಎಂದು ಒಂದು ತಿಂಗಳ ಕೋರ್ಸ್ ಪರಿಚಯಿಸಿದರು. ನಾವುಗಳು ಫೀಲ್ಡ್‌ನಲ್ಲಿ ಪೊಲೀಸ್ ಜವಾಬ್ದಾರಿ ಯಾವ ರೀತಿ ಇದೆ? ಇತರರೊಂದಿಗೆ ಯಾವ ರೀತಿ ಹೊಂದಿಕೊಂಡು ಹೋಗಬೇಕು. ಸಮಾಜದ ಜೊತೆ ಯಾವ ನಡೆಯಲ್ಲಿ ಹೊಂದಾಣಿಕೆ ಇರಬೇಕು ಎನ್ನುವ ಬಗ್ಗೆ ತಿಳಿಯುವುದು ಮುಖ್ಯ ಉದ್ದೇಶವಾಗಿದೆ. ಕಳೆದ ಒಂದು ತಿಂಗಳಿನಿಂದ ಹಾಸನ ಜಿಲ್ಲೆಯಲ್ಲಿಯೇ ಇದ್ದು, ಒಬ್ಬೊಬ್ಬರನ್ನು ಒಂದೊಂದು ಪೊಲೀಸ್ ಠಾಣೆಗೆ ಹಾಕಿದ್ದು, ಒಂದು ತಿಂಗಳು ಫೀಲ್ಡ್ ಅಂಡ್ ಆಪರೇಷನ್ ಕೋರ್ಸ್ ತೆಗೆದುಕೊಳ್ಳಲಾಯಿತು ಎಂದರು.

ಪೊಲೀಸ್ ಠಾಣೆಗೆ ಯಾವುದಾದರೂ ದೂರು ಬಂದಾಗ ನಮ್ಮ ಮೇಲಿನ ಅಧಿಕಾರಿಗಳು ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ, ಯಾವ ರೀತಿ ನ್ಯಾಯ ಕೊಡಿಸುತ್ತಾರೆ? ಬಗ್ಗೆ ನಮಗೆ ಸಹಾಯ ಆಗಲಿ ಎಂದು ಎಲ್ಲವನ್ನು ನಮ್ಮ ಟ್ರೈನಿಂಗ್‌ನಲ್ಲಿ ತಿಳಿಸಿಕೊಡುತ್ತಾರೆ. ಈ ತಿಂಗಳಲ್ಲಿ ನಮಗೆ ಆಗಿರುವ ಅನುಭವ, ಇನ್ನು ಮುಂದೆ ಆರು ತಿಂಗಳ ತರಬೇತಿಯಿದೆ. ಇದರಲ್ಲಿ ವಿವಿಧ ರೀತಿಯ ಕೋರ್ಸ್‌ಗಳು ಇರುತ್ತದೆ. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಮುಂದೆ ನಮಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಮುಂದಿನ ಆರು ತಿಂಗಳ ಕೋರ್ಸ್‌ನಲ್ಲಿ ನಮ್ಮನ್ನು ನಾವು ಗಟ್ಟಿಗೊಳ್ಳಿಸುವುದಕ್ಕೆ ಪ್ರಯತ್ನ ಆಗಿದೆ ಎಂದು ಹೇಳಿದರು.

ಪೊಲೀಸ್ ತರಬೇತಿ ಪಡೆದು ನೇರವಾಗಿ ಕೆಲಸ ಮಾಡುವುದು ಕಷ್ಟ. ಈ ನಿಟ್ಟಿನಲ್ಲಿ ಇನ್ ಡೋರ್‌ ಮತ್ತು ಔಟ್ ಡೋರ್‌ ತರಬೇತಿ ಕೊಡುತ್ತಿದ್ದಾರೆ. ಎಂತಹ ಸಂಕಷ್ಟರ ಪರಿಸ್ಥಿತಿ ಬಂದರೂ ಹೇಗೆ ಎದುರಿಸಬೇಕು ಎನ್ನುವ ಬಗ್ಗೆ ತಿಳಿಸಿಕೊಡುತ್ತಾರೆ. ನಾವೇ ಮನೆಗೆ ಹೋಗಿ ಪರಿಹಾರ ನೀಡಿ ಸಮಸ್ಯೆ ಬಗೆಹರಿಸಬೇಕು ಎಂಬುದು ಪೊಲೀಸ್ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಂವಾದದಲ್ಲಿ ತರಬೇತಿ ಪಡೆಯಲು ಆಗಮಿಸಿರುವ ಪಿಎಸ್ಐ ಶಿವಾನಂದ್, ಶಿವರಾಜ್ ಪಾಟೀಲ್, ಶಿವಕುಮಾರ್, ಶಿವರಾಂ, ಶಿವಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ