ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಐ ಬಾಹ್ಯ ಪ್ರಭಾವದಿಂದ ಮಾರುಕಟ್ಟೆಯು ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಎಐ ಎಂಬ ಮಹಾಸಾಗರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಅರಿಯಬೇಕು ತಂತ್ರಜ್ಞಾನ ಯುಗದಲ್ಲಿ ಎಐ ಮನುಷ್ಯನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.ಓದುಗರ ನಾಡಿಮಿಡಿತವನ್ನು ಗಮನದಲ್ಲಿಟ್ಟುಕೊಂಡು ಸರಳವಾದ ಶೈಲಿಯಲ್ಲಿ ಸುದ್ದಿ ಬರವಣಿಗೆ ರೂಢಿಸಿಕೊಳ್ಳಿ. ಪತ್ರಕರ್ತನಿಗೆ ಸವಾಲು ಸರ್ವೆ ಸಾಮಾನ್ಯ. ಗೆಲ್ಲಬಲ್ಲೆ ಎಂಬ ಧೈರ್ಯದಿಂದ ಸಮಾಜಕ್ಕೆ ಕನ್ನಡಿಯಾಗಿ ಕಾರ್ಯನಿರ್ವಹಿಸಿ ಎಂದರು.ಪತ್ರಕರ್ತ ಸುಶೀಲೆಂದ್ರ ಕುಂದರಗಿ ಅವರು ಪತ್ರಿಕೋದ್ಯಮದಲ್ಲಿ ಮಹಿಳೆಯರು ಮತ್ತು ವ್ಯಾಕರಣ ವಿಷಯದ ಕುರಿತು ಮಾತನಾಡಿದ ಅವರು, ಜಗತ್ತು ಬದಲಾದಂತೆ ನಾವು ಬದಲಾಗಬೇಕು. ಪತ್ರಿಕೋದ್ಯಮದಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಯುದ್ಧದ ಸಂದರ್ಭದಲ್ಲಿ ಮಹಿಳೆಯರು ಜನರಿಗೆ ಇಂಚಿಂಚು ಮಾಹಿತಿಯನ್ನು ಜನರಿಗೆ ತಲುಪಿಸುತ್ತಿರುವುದು ಸಂತೋಷ. ಜತೆಗೆ ಪತ್ರಿಕೋದ್ಯಮದಲ್ಲಿ ಭಾಷೆ, ವಾಕ್ಯ, ವಿಷಯ ಪ್ರಸ್ತುತತೆ ಮುಖ್ಯ. ಪತ್ರಿಕೆಯಲ್ಲಿ ವಿಭಕ್ತಿ ಪ್ರತ್ಯಯ, ಹೃಸ್ವಸ್ವರ, ದೀರ್ಘಸ್ವರದ ಬಳಕೆ ಅವಶ್ಯಕ. ವರದಿಗಾರ ಇದ್ದ ಪದಗಳಿಂದ ವರದಿ ಮಾಡದೆ ಹೊಸ ಪದಗಳನ್ನು ಹುಟ್ಟುಹಾಕಬೇಕು. ಸರಳವಾದ ಶೀರ್ಷಿಕೆಯ ಮೂಲಕ ಓದುಗರನ್ನು ನಿಮ್ಮತ್ತ ಸೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಅವರು, ಲಿಥೋ ಪ್ರಿಂಟ್ ಹಿಡಿದು ಸೋಶಿಯಲ್ ಮೀಡಿಯವರೆಗೂ ನಡೆದು ಬಂದ ದಾರಿ ಅಗಾಧ. ಎಐ ಯುಗದಲ್ಲಿದ್ದು ಭಾಷೆ, ಸಂಸ್ಕೃತಿ, ನೈತಿಕತೆಯನ್ನು ಗಮನದಲ್ಲಿಕೊಂಡು ಸಾಗಬೇಕು. ನಮ್ಮ ಮೆದುಳಿಗಿಂತ ಉತ್ತಮ ಕೃತಕ ಬುದ್ಧಿಮತ್ತೆ ಸಿಗದು. ವಿದ್ಯಾರ್ಥಿಗಳು ಉತ್ತಮ ಬರವಣಿಗೆಯನ್ನು ಅಳವಡಿಸಿಕೊಳ್ಳಿ. ಮನುಷ್ಯ ಅಂದಮೇಲೆ ತಪ್ಪು ಸಹಜ. ಸೂಕ್ಷ್ಮತೆಯಿಂದ ಕಾರ್ಯಚಟುವಟಿಕೆ ಮಾಡಬೇಕು. ಓದುಗನು ನಿಮ್ಮ ಬರವಣಿಗೆಗಾಗಿ ಕಾಯುವಂತೆ ಮಾಡಬೇಕು ಎಂದರು. ಪ್ರಾಸ್ತವಿಕವಾಗಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಐ.ಬಿ.ಚಿಕ್ಕಮಠ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಎಂ.ಪಿ.ದೊಡವಾಡ ಸೇರಿ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ: ಕಳೆದ ಸಾಲಿನ ಪರೀಕ್ಷೆಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಗಂಗಾ ಅಮಾತೆಪ್ಪನವರ, ಶಾಂತಾ ಪಟೀಲ, ದೀಪಾ ಮುರನಾಳ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಪ್ರೊತ್ಸಾಹಿಸಲಾಯಿತು.ಬಹುಮಾನ ವಿತರಣೆ: ಪತ್ರಿಕಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪಿಟಿಸಿ, ಆಶುಭಾಷಣ, ಸುದ್ದಿ ಬರವಣಿಗೆ, ಫೋಟೋಗ್ರಫಿ, ರೀಲ್ಸ್ ಮೇಕಿಂಗ್, ಪ್ರಬಂಧ, ಕೊಲೈಜ್ ಮೇಕಿಂಗ್ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಬಳಿಕ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಕುವೆಂಪು ರಚಿತ ರಕ್ತಾಕ್ಷಿ ನಾಟಕದ ಏಕಾಭಿನಯ ನಾಟಕ ಮೈರೋಮಾಂಚನಗೊಳಿಸುವಂತಿತ್ತು.