ಕನ್ನಡಪ್ರಭ ವಾರ್ತೆ ಸುರಪುರ
ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಪುರ ಮತಕ್ಷೇತ್ರದಲ್ಲಿ 2.83 ಲಕ್ಷ ಮತದಾರರಿದ್ದು, 2.15 ಲಕ್ಷ ಮತದಾರರು ಮತದಾನ ಮಾಡಿದ್ದು, ಶೇ.76.04 ರಷ್ಟು ಮತದಾನವಾಗಿದೆ. ಮತ ಎಣಿಕೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
317 ಮತಗಟ್ಟೆಗಳ ಇವಿಎಂ ಯಂತ್ರಗಳಿದ್ದು, 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಆರ್‌ಒ ನೇತೃತ್ವದಲ್ಲೇ 23 ರೌಂಡ್ ಟೇಬಲ್‌ನಲ್ಲಿ ಮತ ಎಣಿಕೆ ನಡೆಯಲಿದೆ. ಮೊದಲಿಗೆ ಪೋಸ್ಟಲ್ ಬ್ಯಾಲೆಟ್ ಎಣಿಕೆಯಿಂದ ಆರಂಭವಾಗಲಿದೆ. 500 ಪೋಸ್ಟಲ್ ಬ್ಯಾಲೆಟ್‌ಗೆ ಒಂದರಂತೆ ಮೂರು ಟೇಬಲ್ ವ್ಯವಸ್ಥೆ ಮಾಡಲಾಗಿದೆ. 1,311 ಪೋಸ್ಟಲ್ ಬ್ಯಾಲೆಟ್‌ನಿಂದ ಮತದಾನವಾಗಿದೆ ಎಂದು ತಿಳಿಸಿದರು.ಮತ ಎಣಿಕೆಯಲ್ಲಿ ಪಾಲ್ಗೊಳ್ಳುವರು ಮೂರು ದಿನ ಮುಂಚೆಯೇ ಪಾಸ್ ಪಡೆದುಕೊಳ್ಳಬೇಕು. ಈ ಕುರಿತು ಈಗಾಗಲೇ ರಾಜಕೀಯ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಮನವರಿಕೆ ಮಾಡಲಾಗಿದೆ. ಭಾರತೀಯ ಚುನಾವಣೆ ನೀತಿ ಸಂಹಿತೆಯ ಅನುಸಾರ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆ ಆಯುಕ್ತ, ಮತ ಎಣಿಕೆ ಕೇಂದ್ರದ ಸಹಾಯಕ ಅಧಿಕಾರಿ ಜಗನ್ನಾಥ ರೆಡ್ಡಿ, ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೊಡಿ, ಸುರಪುರ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಇದ್ದರು.