ಕನ್ನಡಪ್ರಭ ವಾರ್ತೆ ಮೈಸೂರುಜಾತಿ ಮತಧರ್ಮ ಭೇದವಿಲ್ಲದೆ ಜನಕಲ್ಯಾಣಕ್ಕೆದುಡಿದದ್ದು ಸುತ್ತೂರು ಮಠ ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದರು.ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 110ನೇ ಜಯಂತಿ ಮಹೋತ್ಸ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಮೈಸೂರು ಭಾಗದ ಜನರ ಒಂದು ವಿಶೇಷ ಗುಣವೆಂದರೆ ಯಾರೇ ಮನೆಗೆ ಬಂದರು ಮೊದಲು ಊಟ ಮಾಡಿ ಎನ್ನುತ್ತಾರೆ, ಇದು ಈ ಭಾಗದ ಜನರ ಮಾತೃ ಹೃದಯ ಗುಣ. ಅದೇ ರೀತಿ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಅನ್ನ ದಾಸೋಹ, ಅಕ್ಷರ ದಾಸೋಹ ನೀಡಿದ ಮಹಾನ್ ಸಂತ ಶ್ರೀ ರಾಜೇಂದ್ರ ಸ್ವಾಮೀಜಿ ಎಂದರು,ಜೆಎಸ್‌ಎಸ್ ಸಂಸ್ಥೆ ಇಂದು ಸುಮಾರು ಹದಿನಾರು ಸಾವಿರ ಜನರಿಗೆ ಉದ್ಯೋಗ ನೀಡಿ ಅವರ ಕುಟುಂಬ ವರ್ಗದವರಿಗೆ ಸಹಾಕಾರಿಯಾಗಿದೆ ಎಂದು ಅವರು ಹೇಳಿದರು.ವೀರಶೈವ ಲಿಂಗಾಯತ ಮಹಾವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಮಾತನಾಡಿ, ಶಿಕ್ಷಣದ ಬಗ್ಗೆ ಶ್ರೀಗಳಿಗೆ ಇದ್ದ ದೂರದೃಷ್ಟಿ ಶ್ಲಾಘನೀಯ. ಆ ಕಾಲದಲ್ಲೇ ಶ್ರೀಗಳು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು.ಜೆಎಸ್‌ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ವಿಭಾಗದ ನಿರ್ದೇಶಕ ಎನ್.ಎಂ.ಏ ಶಿವಶಂಕರಪ್ಪ ಅವರು ಶ್ರೀಗಳು ಹಸಿದವರ, ದೀನ ದಲಿತರ, ಬಡವರ ಪಾಲಿಗೆ ದಾರಿ ದೀಪವಾಗಿದ್ದಾಗಿ ಅವರು ಹೇಳಿದರು.ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ. ಮಧು ಮಾತನಾಡಿ, ರಾಜೇಂದ್ರ ಶ್ರೀಗಳ ಲೋಕ ಕಲ್ಯಾಣಕ್ಕಾಗಿ ತಮ್ಮ ತಪ್ಪಸ್ ಶಕ್ತಿಯನ್ನು ಧಾರೆ ಎರೆದು ಲಕ್ಷಾಂತರ ಜನರಿಗೆ ಜ್ಞಾನನ್ನದಾಸೋಹ ನೀಡಿದರು.ಶ್ರೀಗಳು ತಮ್ಮ 70 ವರ್ಷದ ಜೀವಿತಾವಧಿಯನ್ನು ಶ್ರೀಗಂಧದಂತೆ ಸಮಾಜಕ್ಕೆ ಬಳಸಿದರು. ರಾಜೇಂದ್ರ ಶ್ರೀಗಳು ಜೆಎಸ್‌ಎಸ್ ಆಸ್ಪತ್ರೆಯ ಸ್ಥಾಪನೆ ಸಂದರ್ಭದಲ್ಲಿ ಅವರ ಜೊತೆ ಇದ್ದ ಒಡನಾಟವನ್ನು ಹಂಚಿಕೊಂಡರು.ಮೈಸೂರು ವಿವಿ ಗಣಕ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಅವರು ರಾಜೇಂದ್ರ ಶ್ರೀಗಳಿಗೆ ನುಡಿನಮನ ಸಲ್ಲಿಸಿದರು.ಜಯಂತಿ ಅಂಗವಾಗಿ ಪ್ರತಿವರ್ಷದಂತೆ ವಿಶೇಷಚೇತನರಿಗೆ ಆಸರೆ ಗ್ರೂಪ್ ವತಿಯಿಂದ ಉಚಿತವಾಗಿ ಕೃತಕಾಂಗಗಳನ್ನು ವಿತರಿಸಲಾಯಿತು. ಆಸರೆ ಗ್ರೂಪ್ ನ ನಿತಿನ್, ಆಸ್ಪತ್ರೆಯ ಸಂದರ್ಶಕ ಸಮಿತಿ ಸದಸ್ಯರು, ಜೆಎಸ್‌ಎಸ್ ಅಂಗ ಸಂಸ್ಥೆಗಳ ಅಧಿಕಾರಿಗಳು, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಜಾನೆಟ್ ಮಥಾಯಿಸ್ ಕಾರ್ಯಕ್ರಮ ನಿರೂಪಿಸಿದರು.