ಮೈಸೂರು: ಟೈಮ್ಸ್ ಎಜುಕೇಷನ್ ಇಂಪ್ಯಾಕ್ಟ್ ರ್‍ಯಾಂಕಿಂಗ್ಸ್ 2025ರಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಸಂಶೋಧನಾ ಸಂಸ್ಥೆಯು ಉತ್ತಮ ಸಾಧನೆ ಮಾಡಿದೆ.
ಟರ್ಕಿಯ ಇಸ್ತಾನ್ ಬುಲ್ ನಲ್ಲಿ ಜೂ. 18 ರಂದು ನಡೆದ ಗ್ಲೋಬಲ್ಸ್ ಸ್ಪೈನಬಲ್ ಡೆವಲಪ್ಮೆಂಟ್ ಕಾಂಗ್ರೆಸ್ ನಲ್ಲಿ ಈ ರ್‍ಯಾಂಕಿಂಗ್ ಅನ್ನು ಬಿಡುಗಡೆಗೊಳಿಸಲಾಯಿತು.
ಈ ಗೌರವವು ಪರಿಸರ ರಕ್ಷಣೆ ಮತ್ತು ಸಾಮಾಜಿಕ ನ್ಯಾಯದ ನಿಜವಾದ ಬದ್ಧತೆಯ ಪ್ರತೀಕ. ಇಂದು ವಿಶ್ವವಿದ್ಯಾಲಯಗಳು ಎಸ್.ಡಿ.ಜಿ.ಎಸ್ ಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಕೇವಲ ಸಂಶೋಧನೆ ಮೂಲಕವಲ್ಲದೇ, ಸಮುದಾಯಕ್ಕೆ ಸಂಬಂಧಿಸಿದ ವಿಶೇಷವಾಗಿ ಶುದ್ಧ ಇಂಧನ, ನೀರು, ಆರೋಗ್ಯ ಮತ್ತು ದಾರಿದ್ರ್ಯ ನಿವಾರಣೆಯಂತಹ ಮುಖ್ಯ ಕ್ಷೇತ್ರಗಳಲ್ಲಿ ರ್‍ಯಾಂಕಿಂಗ್ ಪಡೆದಿದೆ.ಒಟ್ಟು 91.9 ಅಂಕಗಳೊಂದಿಗೆ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಎಸ್.ಡಿಜಿಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದೆ.
ಈ ಸಂಬಂಧ ಅಕಾಡೆಮಿಯ ಕಲಾಧಿಪತಿ ಹಾಗೂ ಸುತ್ತೂರು ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶಿಕ್ಷಣದ ನಿಜವಾದ ಸಾರವು ಮಾನವೀಯತೆಯಿಂದ ಸೇವೆ ಸಲ್ಲಿಸುವ ಶಕ್ತಿಯಲ್ಲಿದೆ. ಜ್ಞಾನ ಮತ್ತು ಸಂಶೋಧನೆಯು ಶೈಕ್ಷಣಿಕ ಮಿತಿಗಳನ್ನು ಮೀರಿ ಜೀವನವನ್ನು ಸ್ಪರ್ಶಿಸಬೇಕು, ಸಮುದಾಯಗಳನ್ನು ಉನ್ನತೀಕರಿಸಬೇಕು ಮತ್ತು ಸಹಾನುಭೂತಿಯಿಂದ ಜಗತ್ತನ್ನು ಪೋಷಿಸಬೇಕು ಎಂದು ಹಾರೈಸಿದ್ದಾರೆ.
ಕುಲಪತಿ ಡಾ.ಎಚ್. ಬಸವನಗೌಡಪ್ಪ ಮಾತನಾಡಿ, 2025ರ ಇಂಪ್ಯಾಕ್ಟ್ ರ್‍ಯಾಂಕ್ ಗಳಲ್ಲಿ ಜಾಗತಿಕವಾಗಿ 56ನೇ ಸ್ಥಾನ ಮತ್ತು ಭಾರತದಲ್ಲಿ 3ನೇ ಸ್ಥಾನ ಪಡೆಯುವುದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವವಿದ್ಯಾನಿಲಯಗಳು ಸಮಾನತೆ, ಸುಸ್ಥಿರತೆ ಮತ್ತು ಪರಿವರ್ತನೆಯ ಪ್ರತೀಕಗಳಾಗಿರಬೇಕು ಎಂದು ಅವರು ಹೇಳಿದರು.