ಭಾರತೀಯರು ಜಗತ್ತಿಗೆ ಸಂಸ್ಕೃತಿ, ನಾಗರಿಕತೆ ಹಾಗೂ ಬದುಕುವ ಕಲೆ ಹೇಳಿಕೊಟ್ಟಿದ್ದು, ನಮ್ಮ ದೇಶ ಉಳಿಯಬೇಕೆಂದರೇ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು ಎಂದು ಆರ್‌ಎಸ್‌ಎಸ್‌ನ ಉತ್ತರ ಕರ್ನಾಟಕ ಸಹ ಪ್ರಾಂತ ಸಂಚಾಲಕ ಶ್ರೀನಿವಾಸ ನಾಯಕ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ತಿಕೋಟಾ
ಭಾರತೀಯರು ಜಗತ್ತಿಗೆ ಸಂಸ್ಕೃತಿ, ನಾಗರಿಕತೆ ಹಾಗೂ ಬದುಕುವ ಕಲೆ ಹೇಳಿಕೊಟ್ಟಿದ್ದು, ನಮ್ಮ ದೇಶ ಉಳಿಯಬೇಕೆಂದರೇ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು ಎಂದು ಆರ್‌ಎಸ್‌ಎಸ್‌ನ ಉತ್ತರ ಕರ್ನಾಟಕ ಸಹ ಪ್ರಾಂತ ಸಂಚಾಲಕ ಶ್ರೀನಿವಾಸ ನಾಯಕ ಕರೆ ನೀಡಿದರು.ಪಟ್ಟಣದಲ್ಲಿ ಹಿಂದೂ ಸಮಾವೇಶ ಸಂಚಲನಾ ತಿಕೋಟಾ ಮಂಡಲ ಸಮಿತಿಯಿಂದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಸಮಾವೇಶ ಯಾರ ವಿರುದ್ಧವಲ್ಲ, ಸಮಾಜದಲ್ಲಿ ಇರುವಂತಹ ಕೆಟ್ಟ ಆಚರಣೆಗಳನ್ನು ತೆಗೆದು ಒಗ್ಗಟ್ಟಿನಿಂದ ಒಂದೇ ತಾಯಿ ಮಕ್ಕಳಾಗಿ ಬದುಕುವಂತೆ ಈ ವ್ಯವಸ್ಥೆ ನಿರ್ಮಾಣ ಮಾಡುವುದು ಎಂದರು.ಭಾರತೀಯರಿಗೂ ದೇವರ ಪೂಜೆ ಮಾಡಲು ಕೊಟ್ಟಂತಹ ದೇಶ ನಮ್ಮದು. ಮತ ಸಹಿಷ್ಣುತೆಯ ಕಲಿಸಬೇಕಿದೆ. ಭಾರತಮಾತೆಯನ್ನು ಯಾರು ತಾಯಿಯಂತೆ ಕಾಣುತ್ತಾರೆ ಅವರೆಲ್ಲರೂ ಭಾರತೀಯರು. ಹಿಂದೂಗಳು ಹುಟ್ಟಿನಿಂದ ತಾಯಿಯೇ ಹಾಲನ್ನು ಕುಡಿದು ಬೆಳೆದು, ನಂತರ ನಾವು ಗೋಮಾತೆಯ ಹಾಲನ್ನು ಕುಡಿದು ಬೆಳೆದವರು. ನೀರನ್ನು ಗಂಗೆಯಂತೆ ಪೂಜೆ ಮಾಡುತ್ತೇವೆ. ಪ್ರಕೃತಿಯ ಆರಾಧಕರು ಜಗತ್ತಿನ ಕಣಕಣದಲ್ಲೂ ದೇವರನ್ನು ಕಂಡವರು. ನಾವು ಒಂದು ವೈಶಿಷ್ಟ ಪೂರ್ಣವಾಗಿರತಕ್ಕಂತ ಸಂಸ್ಕೃತಿ ಕಂಡಿರತಕ್ಕಂತಹ ದೇಶ ಭಾರತ ಎಂದರು.ಅಭಿನವ ಸಂಗನಬಸವ ಶ್ರೀಗಳು ಮನಗೂಳಿ ಮಾತನಾಡಿ, ಭಾರತದಲ್ಲಿರುವಂತಹ ಎಲ್ಲರೂ ಭಾರತೀಯರೇ. ಎಲ್ಲರೂ ಹಿಂದೂಗಳು ದೇಶದ ಉಳಿವಿಗಾಗಿ ಪ್ರತಿಯೊಬ್ಬರ ಸಹಕಾರ ಬೆಂಬಲ ಅವಶ್ಯಕತೆ ಇದೆ. ಈ ದೇಶ ವಿಶ್ವ ಗುರುವಾಗಿ ಮೆರೆಯಬೇಕು. ವಿದೇಶಿಗರು ಯಾರಾದರೂ ನಮ್ಮ ದೇಶಕ್ಕೆ ಬಂದರೇ ಅಂತಹ ಹಿರಿಯರನ್ನು ಗೌರವಿಸುವಂತಹ ದೇಶ ನಮ್ಮ ಭಾರತ. ಜಾತಿ ಅನ್ನುವಂಥದ್ದು ಇಂದು ಜನರಲ್ಲಿ ಹೆಚ್ಚಾಗಿ ಕಾಣಿಸಿತೊಡಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತ ಹಲವಾರು ಪುರುಷರು, ಮಹಿಳೆಯರು ತಮ್ಮ ಪ್ರಾಣ ತ್ಯಾಗ ಮಾಡಿದ ಈ ದೇಶಕ್ಕಾಗಿ ದೇಶದ ಜನರ ಒಳತಿಗಾಗಿ. ಯಾರನ್ನು ತನ್ನ ಜಾತಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲಿ, ಶಿಕ್ಷಕರನ್ನಾಗಿ ಮಾಡಲಿ ಅಂತ ಸ್ವತಂತ್ರ ಹೋರಾಟ ಮಾಡಲಿಲ್ಲ, ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರು. ನಮ್ಮ ಹಿಂದೂ ಸಮಾಜದ ಹೆಣ್ಣು ಮಕ್ಕಳು ವಿದ್ಯೆ ಕಲಿಯುವಂತಹ ವೇಳೆಯೊಳಗೆ ಲವ್ ಜಿಹಾದಿಗೆ ಸಿಲುಕಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಯುವಕರು ದುಶ್ಚಟಗಳಿಂದ ಹಾಳಾಗಿ ಹೋಗಿದ್ದಾರೆ. ದುಶ್ಚಟಗಳಿಗೆ ಬಲಿಯಾಗದೇ ನಾವು ಈ ದೇಶವನ್ನು ನವ ಭಾರತ ನಿರ್ಮಾಣಕ್ಕಾಗಿ ಕೈಜೋಡಿಸಬೇಕು ಎಂದು ಕೋರಿದರು.ದಾನಮ್ಮದೇವಿ ದೇವಸ್ಥಾನದ ಆವರಣದಿಂದ ವಿವಿಧ ಕಲಾ ತಂಡಗಳು ನಂದಿಗಳ ಮೆರವಣಿಗೆ ಹಾಗೂ ಮಕ್ಕಳ ವೇಷ ಭೂಷಣಗಳೊಂದಿಗೆ ಭಾರತ ಮಾತೆಯ ಶೋಭಾ ಯಾತ್ರೆ ಆರಂಭವಾಗಿ ಬಳಿಕ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಬಸವೇಶ್ವರ ಸರ್ಕಲ್‌ನಿಂದ ಛತ್ರಪತಿ ಶಿವಾಜಿ ಮಹಾರಾಜರ ಸರ್ಕಲ್‌ವರೆಗೆ ತಲುಪಿ ಭವ್ಯ ಹಿಂದೂ ಸಮಾವೇಶ ಜರುಗಿತು.ವೇದಿಕೆಯ ಮೇಲೆ ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವೀರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದ ರಾಮಪುರದ ಚಂದ್ರಗಿರಿ ಮಠದ ವಿದ್ಯಾನಂದ ಸ್ವಾಮಿಗಳು ಇದ್ದರು. ಬಸಯ್ಯ ವಿಭೂತಿ, ವಾಮನರಾವ್ ಸಂಡೂರ್, ಎಂ.ಎಸ್.ಜತ್ತಿ, ಅಧ್ಯಕ್ಷ ರಾಜು ಚೌಧರಿ, ಉಪಾಧ್ಯಕ್ಷ ಮಹಾನಿಂಗ ಮಂಟೂರ, ಮಲ್ಲಿಕಾರ್ಜುನ ಹಂಜಗಿ, ರಾಜು ಕುಲಕರ್ಣಿ, ಸಿದ್ರಾಮ ಪೂಜಾರಿ, ಚಂದ್ರಕಾಂತ್ ತೋರವಿ, ಮುತ್ತು ಲಂಗೋಟಿ, ರಾವುತ್ ಕಂಬಾರ, ಗಿರೀಶ್ ತೇಲಿ ಇದ್ದರು. ಸುರೇಶ ಕೊಣ್ಣೂರ ಕಾರ್ಯಕ್ರಮ ನಿರೂಪಿಸಿದರು. ಗೀತಾ ತಾಳಿಕೋಟಿ ಸ್ವಾಗತಿಸಿದರು. ವಂದನಾರ್ಪಣೆ ಮಹೇಶ ಬುಗಾರ ಶಾಂತಿ ಮಂತ್ರ ಬಸವರಾಜ ದೇವನಾಯಕ ಪ್ರಾರ್ಥನೆ ಗೀತೆ ಶ್ರೀಕಾಂತ ಪರಣಾಕಾರ ಮತ್ತಿತರರು ಇದ್ದರು.