ಜೂನಿಯರ್ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್‌: ದಿಯಾ ಭೀಮಯ್ಯಗೆ ಬೆಳ್ಳಿ ಪದಕ

KannadaprabhaNewsNetwork |  
Published : Sep 01, 2026, 03:00 AM IST
ಚಿತ್ರ :  31ಎಂಡಿಕೆ1 : ಬ್ಯಾಡ್ಮಿಂಟನ್‌ನಲ್ಲಿ ಕೊಡಗಿನ ದಿಯಾ ಭೀಮಯ್ಯಗೆ ಬೆಳ್ಳಿ ಪದಕ. | Kannada Prabha

ಸಾರಾಂಶ

ಪುಣೆಯಲ್ಲಿ ಆಗಸ್ಟ್ 25 ರಿಂದ 30ರವರೆಗೆ ನಡೆದ ಯೋನೆಕ್ಸ್ ಸನ್‌ರೈಸ್ ಇಂಡಿಯಾ ಜೂನಿಯರ್ ಇಂಟರ್‌ನ್ಯಾಷನಲ್ ಗ್ರ್ಯಾಂಡ್ ಪ್ರಿಕ್ಸ್ 2026 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕೊಡಗಿನ ಪ್ರತಿಭೆ ದಿಯಾ ಭೀಮಯ್ಯ ಬೆಳ್ಳಿ ಪದಕ ಗೆದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪುಣೆಯಲ್ಲಿ ಆಗಸ್ಟ್ 25 ರಿಂದ 30ರವರೆಗೆ ನಡೆದ ಯೋನೆಕ್ಸ್ ಸನ್‌ರೈಸ್ ಇಂಡಿಯಾ ಜೂನಿಯರ್ ಇಂಟರ್‌ನ್ಯಾಷನಲ್ ಗ್ರ್ಯಾಂಡ್ ಪ್ರಿಕ್ಸ್ 2026 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕೊಡಗಿನ ಪ್ರತಿಭೆ ದಿಯಾ ಭೀಮಯ್ಯ ಬೆಳ್ಳಿ ಪದಕ ಗೆದ್ದಿದ್ದಾರೆ.

ಟೂರ್ನಿಯ 4ನೇ ಶ್ರೇಯಾಂಕಿತರಾಗಿದ್ದ ದಿಯಾ ಭೀಮಯ್ಯ ಅವರು ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ತೆಲಂಗಾಣದ ಕೀರ್ತಿ ಮಂಚಾಲ ಜೊತೆಗೂಡಿ ಫೈನಲ್ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಫೈನಲ್ ಪಂದ್ಯದಲ್ಲಿ ಥೈಲ್ಯಾಂಡ್‌ನ ಚಾಂತ್ರಾತ್ ಮರ್ಡಾಂಕುಲ್ ಮತ್ತು ಪೀರ್ಪ್ಲಾಯಿ ಸುಟ್ಟಿವಾರಯನೊನ್ ಜೋಡಿ ಎದುರು 15-21, 11-21 ಅಂಕಗಳಿಂದ ಸೋಲು ಅನುಭವಿಸಿದರು.

ಭಾರತ, ಇಂಡೋನೇಷ್ಯಾ, ಮಲೇಷ್ಯಾ, ಥೈಲ್ಯಾಂಡ್, ಯು.ಎಸ್.ಎ, ಯು.ಎ.ಇ ದೇಶಗಳ ಆಟಗಾರರು ಭಾಗವಹಿಸಿದ್ದ ಈ ಟೂರ್ನಿಯಲ್ಲಿ 19 ವರ್ಷ ವಯೋಮಿತಿಯ ಜೂನಿಯರ್ ವಿಭಾಗದಲ್ಲಿ ದಿಯಾ ಗಳಿಸಿದ 4ನೇ ಅಂತಾರಾಷ್ಟ್ರೀಯ ಪದಕ ಇದಾಗಿದೆ.

ಈ ಮೊದಲು ನೇಪಾಳದಲ್ಲಿ ನಡೆದ ನೇಪಾಳ ಇಂಟರ್‌ನ್ಯಾಷನಲ್ ಸೀರೀಸ್ 2024ರಲ್ಲಿ ಬಾಲಕಿಯರ ಡಬಲ್ಸ್‌ನಲ್ಲಿ ಬೆಳ್ಳಿ ಮತ್ತು ಸಿಂಗಲ್ಸ್‌ನಲ್ಲಿ ಕಂಚು, ಹಾಗೂ ಇದೇ ತಿಂಗಳು ನಡೆದ ಕೋತಕ್ ಇಂಡಿಯಾ ಜೂನಿಯರ್ ಇಂಟರ್‌ನ್ಯಾಷನಲ್ ಸೀರೀಸ್ 2026ರಲ್ಲಿ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳ ಧಾರ್ಮಿಕ ಆಚರಣೆ ಮೇಲೆ ಅತಿಯಾದ ನಿಯಂತ್ರಣ ಬೇಡ: ಸಂಸದ ಕೋಟ
ಪಶ್ಚಿಮ ಘಟ್ಟದ ಜನರಿಗೆ ತೊಂದರೆಯಾಗದಂತೆ ಸರ್ಕಾರಕ್ಕೆ ಪತ್ರ: ಸ್ವರೂಪ