ಪ್ರಾಚೀನ ಸಂಸ್ಕೃತಿ ಮರೆಯದಿರಿ: ಡಾ. ಉದಯಶಂಕರ್‌

KannadaprabhaNewsNetwork |  
Published : Sep 01, 2026, 03:00 AM IST
 | Kannada Prabha

ಸಾರಾಂಶ

ಹೊಸ ತಂತ್ರಜ್ಞಾನ, ನವ ನವೀನ ಆವಿಷ್ಕಾರದ ಇಂದಿನ ದಿನಗಳಲ್ಲಿ ನಮ್ಮ ಪ್ರಾಚೀನ ಸಂಸ್ಕೃತಿ, ಆಚರಣೆಯನ್ನು ಮರೆಯದೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರದ ವೈದ್ಯ ಸಾಹಿತಿ ಡಾ. ನಡಿಬೈಲು ಉದಯಶಂಕರ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹೊಸ ತಂತ್ರಜ್ಞಾನ, ನವ ನವೀನ ಆವಿಷ್ಕಾರದ ಇಂದಿನ ದಿನಗಳಲ್ಲಿ ನಮ್ಮ ಪ್ರಾಚೀನ ಸಂಸ್ಕೃತಿ, ಆಚರಣೆಯನ್ನು ಮರೆಯದೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರದ ವೈದ್ಯ ಸಾಹಿತಿ ಡಾ. ನಡಿಬೈಲು ಉದಯಶಂಕರ್ ಕರೆ ನೀಡಿದರು.

ನಗರದ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಶೖತಿಲಯ ತಂಡದಿಂದ ಕೊಡಗು ಕನ್ನಡ ಮತ್ತು ಸಂಸ್ಕೖತಿ ಇಲಾಖೆ, ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ದಿ ನಿಧಿ ಸಹಯೋಗದಲ್ಲಿ ಆಯೋಜಿಸಲಾದ ಶ್ರೀ ರಾಘವೇಂದ್ರ ಆರಾಧನೆ, ವಿಶ್ವ ಸಂಗೀತ ದಿನದ ಅಂಗವಾಗಿ ದಾಸರ ಕೀರ್ತನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾಸ ಪರಂಪರೆ ಈ ನಾಡಿನಲ್ಲಿ ಶ್ರೀಮಂತವಾಗಿದೆ. ಎಂಥ ಸಂಕಷ್ಟ, ಸವಾಲು ಎದುರಾದರೂ ದೇವರು ನಮ್ಮನ್ನು ಸುರಕ್ಷಿತವಾಗಿ ಇರಿಸುತ್ತಾನೆ ಎಂಬ ನಂಬಿಕೆಯನ್ನು ದಾಸ ಪರಂಪರೆ ಸೃಷ್ಟಿಸಿದೆ ಎಂದೂ ಅವರು ಹೇಳಿದರು.ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ಕಲೆ, ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿ ಇಂಥ ಕಾರ್ಯಕ್ರಮಗಳಿಗೆ ಸಹಯೋಗ ನೀಡುತ್ತದೆ. ಕಲೆ, ಸಂಸ್ಕೃತಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, ನಮ್ಮೊಳಗಿನ ನೋವು, ಸಂಕಟವನ್ನು ಮರೆ ಮಾಚುವಂಥ ಶಕ್ತಿ ಸಂಗೀತ ಪ್ರಾಕಾರಕ್ಕಿದೆ. ಅಂದಿನ ಕಾಲದಲ್ಲೇ ಹರಿದಾಸರು ಭಕ್ತಿ ಸಂಗೀತದ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಸೃಷ್ಟಿಗೆ ಕಾರಣರಾಗಿದ್ದರು ಎಂದರು. ಸಂಗೀತ, ಕೀರ್ತನೆಗಳು ತಮ್ಮಲ್ಲಿ ಹೊಂದಿರುವ ಅಘಾಧ ಪ್ರಭಾವದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಂಗೀತ, ಭಜನೆ, ಯೋಗ, ಧ್ಯಾನ್ಸದತ್ತ ಇಂದಿನ ದಿನಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಸಕ್ತರಾಗುತ್ತಿದ್ದಾರೆ ಎಂದರು.

ಶೖತಿ ಲಯ ತಂಡದ ಅಧ್ಯಕ್ಷೆ ವೀಣಾ ಎಸ್. ಹೊಳ್ಳ ಮಾತನಾಡಿ, 7 ವರ್ಷಗಳ ಹಿಂದೆ 4 ಮಹಿಳೆಯರಿಂದ ಆರಂಭವಾದ ಶೃತಿ ಲಯ ತಂಡ ಇಂದು 13 ಮಹಿಳೆಯರೊಂದಿಗೆ ಜಿಲ್ಲೆ ಮಾತ್ರ ಅಲ್ಲದೆ ರಾಜ್ಯದ ವಿವಿಧೆಡೆ ಸಂಗೀತದ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದೆ. ಈ ಮೂಲಕ ಯುವ ಪೀಳಿಗೆಯಲ್ಲಿ ಸಂಗೀತದ ಅಭಿರುಚಿ ಉಂಟು ಮಾಡಿದ ತೃಪ್ತಿ ತಂದಿದೆ ಎಂದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿದರು.ಗೀತಾ ಸಂಪತ್ ಕುಮಾರ್, ಲಕ್ಷ್ಮಿ ಈಶ್ವರ ಭಟ್, ಸ್ವಾತಿ ಅರುಣ್, ತನುಶ್ರೀ ರಾವ್, .ಚೈತ್ರ ಗುರುಪ್ರಸಾದ್ ಪ್ರಾರ್ಥಿಸಿ, ಸವಿತಾ ಗುರುಪ್ರಸಾದ್ ಸ್ವಾಗತಿಸಿ, ಡಾ. ಗಾಯತ್ರಿ ದೇವಿ ನಿರೂಪಿಸಿ, ಮಮತಾ ಶಾಸ್ತ್ರಿ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಸಂದರ್ಭ ಹಿರಿಯ ಕಲಾವಿದರಾದ ಜಿ. ಚಿದ್ವಿಲಾಸ್ ಮತ್ತು ಸಂಧ್ಯಾ ಚಿದ್ವಿಲಾಸ್ ಭಕ್ತಿ ಗೀತೆ ಹಾಡಿದರು.ಕನ್ನಡ ಮತ್ತು ಸಂಸ್ಕೖತಿ ಇಲಾಖೆಯ ಸಹಯೋಗದಲ್ಲಿ ಆಯೋಜಿತ ದಾಸರ ಕೀರ್ತನೆ ಕಾರ್ಯಕ್ರಮದಲ್ಲಿ ಜಿಲ್ಲೆಯ 15 ತಂಡಗಳು ಪಾಲ್ಗೊಂಡಿದ್ದವು.ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು. ಜಯಲಕ್ಷ್ಮಿ ಕೆ. ಮತ್ತು ತಂಡ ಮಡಿಕೇರಿ, ಆರ್ಯ ವೈಶ್ಯ ಭಜನಾ ತಂಡ, ಕುಶಾಲನಗರ, ವಿಜಯ ವಿನಾಯಕ ತಂಡ ಮಡಿಕೇರಿ. ದೇವರಕೊಲ್ಲಿ ಭಜನಾ ತಂಡ, ಭಗವತಿ ವಿಪ್ರ ಮಹಿಳಾ ಸಂಘ ಗೋಣಿಕೊಪ್ಪ, ಮೇಘಾ ಭಟ್ ಮತ್ತು ತಂಡ ಮಡಿಕೇರಿ. ಕೋದಂಡ ರಾಮ ಭಜನಾ ತಂಡ ಮಡಿಕೇರಿ, ಪ್ರಜ್ಞ ಕಲಾ ಕೇಂದ್ರ ಮಡಿಕೇರಿ, ಶ್ರೀವತ್ಸ ಸಂಘ, ಮಡಿಕೇರಿ, ಕನ್ನಿಕಾ ಪರಮೇಶ್ವರಿ ತಂಡ ಮಡಿಕೇರಿ, ನೃತ್ಯ ಭಜನೆ ತಂಡ ಉಡುವತ್ ಮೊಟ್ಟೆ (ಎ), ನೃತ್ಯ ಭಜನೆ ತಂಡ ಉಡುವತ್ ಮೊಟ್ಟೆ (ಬಿ ), ರಾಮಾಂಜನೇಯ ಭಜನಾ ಮಂಡಳಿ ಮಹಿಳೆಯರ ತಂಡ, ರಾಮಾಂಜನೇಯ ಭಜನಾ ಪುರುಷರ ತಂಡ ಮಡಿಕೇರಿಯಿಂದ ದಿನವಿಡೀ ದಾಸರಕೀರ್ತನೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳ ಧಾರ್ಮಿಕ ಆಚರಣೆ ಮೇಲೆ ಅತಿಯಾದ ನಿಯಂತ್ರಣ ಬೇಡ: ಸಂಸದ ಕೋಟ
ಪಶ್ಚಿಮ ಘಟ್ಟದ ಜನರಿಗೆ ತೊಂದರೆಯಾಗದಂತೆ ಸರ್ಕಾರಕ್ಕೆ ಪತ್ರ: ಸ್ವರೂಪ