ಸಮಾಜಕ್ಕೆ ಜಂಗಮರ ಕೊಡುಗೆ ಅಪಾರ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು

KannadaprabhaNewsNetwork |  
Published : Sep 01, 2026, 03:00 AM IST
ಕಾರ್ಯಕ್ರಮವನ್ನು ನರೇಗಲ್‌ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಜಗತ್ತನ್ನು ಉದ್ಧಾರ ಮಾಡುವುದು ಜಂಗಮರ ಕರ್ತವ್ಯವಾಗಿದೆ. ಹಳ್ಳಿಯಲ್ಲಿ ಹಾಳು ಬಿದ್ದಿರುವ ಮಠಗಳನ್ನು ಅಭಿವೃದ್ಧಿಪಡಿಸಿ ಆಚರಣೆಗಳನ್ನು ಮುಂದುವರಿಸಬೇಕು.

ಗದಗ: ಎಲ್ಲಿ ಸಂಸ್ಕಾರ, ಧರ್ಮಾಚರಣೆ ಇರುತ್ತದೆಯೋ ಅಂತಹ ಸಮಾಜಕ್ಕೆ ಜಂಗಮ ಸಮಾಜ ಎನ್ನುತ್ತಾರೆ. ಇದನ್ನು ಜಂಗಮರು ಮರೆಯಬಾರದು ಎಂದು ನರೇಗಲ್‌ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಡಿಪೋ ಹಿಂದೆ ಇರುವ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಭಾನುವಾರ ನಡೆದ ಅಖಿಲ ಭಾರತ ಜಂಗಮ ಸೇವಾ ಸಮಿತಿ ಪದಾಧಿಕಾರಿಗಳ ಪದಗ್ರಹಣ, ಸಮಿತಿ ವಾರ್ಷಿಕೋತ್ಸವ, ಜಂಗಮಶ್ರೀ ಪ್ರಶಸ್ತಿ ಪ್ರದಾನ ಹಾಗೂ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಂಗಮ ಸಮಾಜ ಶೈಕ್ಷಣಿಕ, ಧಾರ್ಮಿಕ ಮತ್ತು ರಾಜಕೀಯವಾಗಿ ಹಿಂದುಳಿದಿಲ್ಲ. ಆದರೆ, ಆರ್ಥಿಕವಾಗಿ ಹಿಂದುಳಿದಿದೆ. ಏಕೆಂದರೆ ಇರುವುದನ್ನು ಇನ್ನೊಬ್ಬರಿಗೆ ನೀಡುವುದು ಜಂಗಮ ಸಮಾಜವಾಗಿದೆ. ದುಶ್ಚಟಗಳಿಂದ ಸಮಾಜವು ಹಾಳಾಗುತ್ತಿದೆ. ವ್ಯಸನಮುಕ್ತರಾದರೆ ಮಾತ್ರ ಸಮಾಜದಲ್ಲಿ ದೊಡ್ಡ ಗೌರವ ಸಿಗುತ್ತದೆ ಎಂದರು.

ಜಗತ್ತನ್ನು ಉದ್ಧಾರ ಮಾಡುವುದು ಜಂಗಮರ ಕರ್ತವ್ಯವಾಗಿದೆ. ಹಳ್ಳಿಯಲ್ಲಿ ಹಾಳು ಬಿದ್ದಿರುವ ಮಠಗಳನ್ನು ಅಭಿವೃದ್ಧಿಪಡಿಸಿ ಆಚರಣೆಗಳನ್ನು ಮುಂದುವರಿಸಬೇಕು. ಪಾಲಕರು ಜಂಗಮ ಮಕ್ಕಳಿಗೆ ಗ್ರಂಥಗಳ ಓದಿಸುವ ಮೂಲಕ ಅವರಿಗೆ ಸಂಸ್ಕಾರ, ಧರ್ಮಾಚರಣೆಯ ಮಹತ್ವವನ್ನು ತಿಳಿಸಬೇಕು ಎಂದರು.

ಜಿಲ್ಲಾ ಗ್ರಾಹಕ ನ್ಯಾಯ ಪೀಠದ ನಿವೃತ್ತ ಸದಸ್ಯ ಎಫ್.ಪಿ. ಲಕ್ಷ್ಮೇಶ್ವರಮಠ ಮಾತನಾಡಿ, ಜನಸೇವೆಯ ಜನಾರ್ದನ ಸೇವೆಯಾಗಿದೆ. ಭೂಮಿಯ ಮೇಲೆ ಬದುಕಲು ಕಂದಾಯದ ರೂಪದಲ್ಲಿ ಜನಸೇವೆ ಸಲ್ಲಿಸಬೇಕಾಗಿದೆ. ಕೆಲವರು ತನು, ಮನ, ಧನದಿಂದ ಸೇವೆ ಸಲ್ಲಿಸುತ್ತಾರೆ. ಸೇವೆಯನ್ನು ಸಮಾಜಸೇವಕರು ಸಾರ್ವಜನಿಕವಾಗಿ ಸಲ್ಲಿಸಿದರೆ, ಸರ್ಕಾರಿ ನೌಕರರು ಕೂಡಾ ಕರ್ತವ್ಯನಿಷ್ಠೆಯೊಂದಿಗೆ ಸೇವೆ ಸಲ್ಲಿಸಬೇಕು ಎಂದರು.

ಅಖಿಲ ಭಾರತ ಜಂಗಮ ಸೇವಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೋಟಯ್ಯ ಗಡ್ಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಜಂಗಮಶ್ರೀ ಪ್ರಶಸ್ತಿಯನ್ನು ರುದ್ರಾರಾಧ್ಯ ಶಾಸ್ತ್ರಿಗಳು ಚೌಕಿಮಠ- (ಸಾಹಿತ್ಯ), ರೇವಣಸಿದ್ದಯ್ಯ ಸ್ವಾಮಿಗಳು ಹಿರೇಮಠ- (ಸಾಮಾಜಿಕ), ವೀರಯ್ಯಶಾಸ್ತ್ರಿ ಹಿರೇಮಠ- (ವೈದಿಕ), ಬಸಯ್ಯ ಸಾಸ್ವಿಹಳ್ಳಿಮಠ- (ಕೃಷಿ), ಡಾ. ಶಿವಬಸಯ್ಯ ಗಡ್ಡದಮಠ- (ಸಂಗೀತ), ಕಳಕನಗೌಡ ಪಾಟೀಲ- (ಉದ್ಯಮ), ವೀರಭದ್ರಯ್ಯ ಹಿರೇಮಠ- (ಶಿಕ್ಷಣ), ಚಂದ್ರಕಲಾ ಇಟಗಿಮಠ- (ಸಾಮಾಜಿಕ), ವಿನಯಕುಮಾರ ಗಂಧದ- (ಶಿಕ್ಷಣ), ಈಶ್ವರಯ್ಯ ಹಿರೇಮಠ- (ದಾಸೋಹ), ಶಿವಕುಮಾರ ಸ್ವಾಮಿಮಠ- (ಸಾಮಾಜಿಕ), ಶಿವಯ್ಯ ಅಲ್ಲಮಯ್ಯನವರ- (ಶಿಕ್ಷಣ), ಧನಲಕ್ಷ್ಮೀ ಹಾಲ್ಮಠ- (ಶಿಕ್ಷಣ), ಡಾ. ತೇಜಸ್ವಿನಿ ಹಿರೇಮಠ- (ವೈದ್ಯಕೀಯ), ಅನುಸೂಯ ಹೊಸೂರುಮಠ- (ಕಲೆ), ಫಕ್ಕಿರಗೌಡ ಪಾಟೀಲ- (ಕ್ರೀಡೆ), ಷಡಕ್ಷರಯ್ಯ ಹಿರೇಮಠ- (ವಿದ್ಯುತ್ ಇಲಾಖೆ) ಅವರಿಗೆ ಪ್ರದಾನ ಮಾಡಲಾಯಿತು.

ಹೂವಿನಹಡಗಲಿ ಗವಿಮಠದ ಡಾ. ಹಿರಿಯ ಶಾಂತವೀರ ಸ್ವಾಮಿಗಳು, ಅಸೂಟಿಯ ರೇವಣಶಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಜಂಗಮ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಜಂಗಮ ಸೇವಾ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ವಸ್ತ್ರದ, ಫಕೀರಯ್ಯ ಹಿರೇಮಠ, ಶಿವಾನಂದಯ್ಯ ಹಿರೇಮಠ, ಆನಂದಯ್ಯ ವಿರಕ್ತಮಠ, ಎಂ.ಎಂ. ಶಿರೋಳಮಠ ಸೇರಿದಂತೆ ಮುಂತಾದವರು ಇದ್ದರು. ಕುಮಾರಸ್ವಾಮಿ ಹಿರೇಮಠ ಹಾಗೂ ತಂಡದವರು ಪ್ರಾರ್ಥಿಸಿದರು. ಉಮಾಪತಿ ಭೂಸನೂರಮಠ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳ ಧಾರ್ಮಿಕ ಆಚರಣೆ ಮೇಲೆ ಅತಿಯಾದ ನಿಯಂತ್ರಣ ಬೇಡ: ಸಂಸದ ಕೋಟ
ಪಶ್ಚಿಮ ಘಟ್ಟದ ಜನರಿಗೆ ತೊಂದರೆಯಾಗದಂತೆ ಸರ್ಕಾರಕ್ಕೆ ಪತ್ರ: ಸ್ವರೂಪ