ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿ ಮುಂಭಾಗ ಜಿಲ್ಲಾ ವಕೀಲರ ಸಂಘದಿಂದ ನಡೆದ ವಕೀಲರ ದಿನಾಚರಣೆ ಹಾಗೂ ವಕೀಲರ ಸಂಘದ ಡೈರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಕೀಲಿ ವೃತ್ತಿ ಪವಿತ್ರ ಮತ್ತು ಸೇವಾಪರ ವೃತ್ತಿಯಾದ್ದರಿಂದ ವೃತ್ತಿಗೆ ಬಂದ ಕಿರಿಯರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಆದರ್ಶ ವೃತ್ತಿ ಬದುಕು ರೂಢಿಸಿಕೊಳ್ಳಬೇಕು. ಬಿಡುವಿನ ಸಂದರ್ಭದಲ್ಲಿ ಗ್ರಂಥಾಲಯಗಳಲ್ಲಿ ಪುಸ್ತಕಗಳ ವ್ಯಾಸಂಗ ಮಾಡಬೇಕು. ಕಚೇರಿಯಲ್ಲಿರುವ ಪ್ರಕರಣಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.ವಕೀಲರ ಸಂಘದ ಡೈರಿ ಬಿಡುಗಡೆಗೊಳಿಸಿದ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಲ್. ವಿಶಾಲರಘು ಮಾತನಾಡಿ, ವಕೀಲರ ನಡುವೆ ಸಣ್ಣಪುಟ್ಟ ವೈಮನಸ್ಸು ಉಂಟಾಗಬಹುದು. ಅದನ್ನು ಹಿರಿಯ ವಕೀಲರು ಸರಿಪಡಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ವೃತ್ತಿ ನಡೆಸಿಕೊಂಡು ಹೋಗಬೇಕು. ಜೊತೆಗೆ ನ್ಯಾಯಾಧೀಶರು ಹಾಗೂ ವಕೀಲರ ನಡುವೆ ಅನ್ಯೂನತೆ ಇರಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಮಾತನಾಡಿ, ವಕೀಲರು ಶ್ರದ್ಧೆಯಿಂದ ತಮ್ಮ ವೃತ್ತಿಯನ್ನು ಮಾಡಿದಾಗ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಕಿರಿಯ ವಕೀಲರು ತಮ್ಮ ವೃತ್ತಿಯನ್ನು ಗೌರವಿಸುವುದು, ಪ್ರೀತಿಸುವುದನ್ನು ಕಲಿಯಬೇಕು. ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಮಾಡಿಕೊಡು ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ಹಿರಿಯ ವಕೀಲರಾದ ರವೀಂದ್ರ ಕಾಮತ್, ನ್ಯಾಯಾಧೀಶರಾದ ಈಶ್ವರ್, ಸಿ.ಡಿ. ಪ್ರಕಾಶ್, ಸುನೀಲ್, ಸ್ಮೀತಾನಾಗಲಾಪುರ, ಪ್ರತಿಭಾ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮ್, ಉಪಾಧ್ಯಕ್ಷ ರಂಗಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.