ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಶ್ವವಿದ್ಯಾನಿಲಯದ ಜುಂಜಪ್ಪಅಧ್ಯಯನ ಪೀಠ ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜುಂಜಪ್ಪನ ಕಾವ್ಯದಲ್ಲಿ ಪಶುಪಾಲನೆ ಮತ್ತು ಗಣೆಪದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ವೃತ್ತಿಯ ಗೌರವವನ್ನು ಎತ್ತಿ ಹಿಡಿಯುವ ಮೂಲಕ ಗೋವಿನ ಪಾಲನೆ, ರಕ್ಷಣೆ, ಸಮುದಾಯದ ಸಾಂಸ್ಕೃತಿಕ ನಾಯಕನಾಗಿ ಪರಿಶ್ರಮದ ಮೂಲಕ ಹೊರಹೊಮ್ಮಿದವರು ಜುಂಜಪ್ಪ. ಸಮಾಜದ, ವ್ಯಕ್ತಿಯ, ಸಮುದಾಯದ ಸ್ಥಾನಮಾನಗಳನ್ನು ಗುರುತಿಸುವ ಗೋ ಪಾಲನೆಯ ವೃತ್ತಿಯನ್ನು ಗೋವಾಳರು ಅಥವಾ ಗೊಲ್ಲರು ಮಾಡುತ್ತಿದ್ದರು. ಗೋವಿನ ರಕ್ಷಣೆಯಲ್ಲಿ ಯುದ್ಧಗಳಾಗಿದ್ದನ್ನು ಇತಿಹಾಸ ಉಲ್ಲೇಖಿಸುತ್ತದೆ. ಗೋಪಾಲಕರು ಜೀವತೆತ್ತು ಗೋವುಗಳನ್ನು ರಕ್ಷಿಸಿ ಪೂಜೆಗೆ ಒಳಪಟ್ಟಿದ್ದಾರೆ ಎಂದು ಹೇಳಿದರು.ಜುಂಜಪ್ಪನ ಅರ್ಥದಲ್ಲಿ ಪಶುಪಾಲನೆಯು ಸಾಂಸ್ಕೃತಿಕ ಕೃಷಿ ಪದ್ಧತಿಯ ಸಂತಾನ ಸೂತ್ರವನ್ನು ಹಾಗೂ ಸಾಮಾಜಿಕ ನೈತಿಕ ಎಚ್ಚರಿಕೆಯನ್ನು ಸಾರುವ ವೃತ್ತಿಯಾಗಿತ್ತು. ಏಳು ಊನ ದನಗಳನ್ನು ಪಡೆದು, ಅವನ್ನು ಪಾಲಿಸಿ, ಪೋಷಿಸಿ, ವೈರತ್ವ ಎದುರಿಸಿ 700 ದನಗಳ ಒಡೆಯನಾಗಿ, ಅರಸನಾಗಿ ಕೆರೆ, ಅಣೆಕಟ್ಟು, ಹುಲ್ಲುಬಾನಿ ನಿರ್ಮಿಸಲು, ಕಾಡಿನ ಸಂಪತ್ತನ್ನು ವೃದ್ಧಿಸಲು ಜುಂಜಪ್ಪ ಮುಂದಾದರು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಯಾವುದೇ ವೃತ್ತಿಯಾಗಿರಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇರಬೇಕು. ಕಾರ್ಮಿಕರ ಘನತೆ ಕಾಪಾಡುವ ಜವಾಬ್ದಾರಿ ಸಂಸ್ಥೆಯದ್ದಾಗಿರಬೇಕು. ವಿಶ್ವವಿದ್ಯಾನಿಲಯಗಳ ಅಧ್ಯಯನ ಪೀಠಗಳು ಮಹನೀಯರ ಸಾಧನೆಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯಕೈಗೊಳ್ಳಬೇಕು ಎಂದರು.
‘ಜುಂಜಪ್ಪನ ಕಾವ್ಯದಲ್ಲಿ ಬಡಮೈಲ’ ಕುರಿತ ವಿಷಯದಲ್ಲಿ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಪ್ರಬಂಧ ಮಂಡಿಸಿದರು. ರಾಮಯ್ಯ ಹಾಗೂ ತಂಡದವರಿಂದ ಗಣೆಪದ ಗಾಯನ ನಡೆಯಿತು.
30 ಪ್ರಾಚೀನ ಕಾವ್ಯಗಳಲ್ಲಿ ಗೊಲ್ಲ ಸಮುದಾಯದ ಕುರಿತ ಪ್ರಸ್ತಾಪವಿದೆ. ಗೋಪಾಲಕರು ಭೌಗೋಳಿಕ ಅನ್ವೇಷಕರಾಗಿ, ಪಾರಂಪರಿಕ ಸಂಖ್ಯಾಶಾಸ್ತ್ರಜ್ಞರಾಗಿ, ಹಾಲೋತ್ಪನ್ನ ಪ್ರಕ್ರಿಯೆಗಳನ್ನು ಪಾರಂಪರಿಕವಾಗಿ ಭಾರತೀಯ ಸಮಾಜಕ್ಕೆ ಪರಿಚಯಿಸಿ, ನದಿ ಕಾಡುಗಳ ವಿಸ್ತಾರವನ್ನು ಅನ್ವೇಷಿಸುವುದರ ರಾಯಭಾರಿಗಳೆಂದೇ ಹೇಳಬಹುದು. ಪಶುಪಾಲನೆಯ ತೀವ್ರತೆಯ ಮುಂದೆ ತಮ್ಮ ಖಾಸಗಿ ಬದುಕು ನಗಣ್ಯವಾಗಿತ್ತು ಎಂದು ಜುಂಜಪ್ಪ ತನ್ನ ಕಾವ್ಯಗಳಲ್ಲಿ ಹಾಡಿದ್ದಾರೆ.