ಎಲ್ಲ ವರ್ಗದವರಿಗೂ ಸಂವಿಧಾನದಲ್ಲಿ ನ್ಯಾಯ

KannadaprabhaNewsNetwork |  
Published : Apr 19, 2026, 01:15 AM IST
ಚಿತ್ರದುರ್ಗ  ಎರಡನೇ ಪುಟದ ಮಿಡ್ಲ್ 111     | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಅಂಬೇಡ್ಕರ್ ಮಹಿಳಾ ಸಂಘದ ವತಿಯಿಂದ ಶನಿವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯದಲ್ಲಿ ಉಪನ್ಯಾಸ ನೀಡಿದ ವಕೀಲ ಬೆನಕನಹಳ್ಳಿ ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಮಾಜದ ಎಲ್ಲಾ ವರ್ಗದ ಜನರಿಗೂ ಸಂವಿಧಾನದಲ್ಲಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾನತೆಯ ಸಂವಿಧಾನವನ್ನು ಈ ದೇಶಕ್ಕೆ ನೀಡಿದ ಕೀರ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೋರಾಟಗಾರ ವಕೀಲ ಬೆನಕನಹಳ್ಳಿ ಚಂದ್ರಪ್ಪ ಹೇಳಿದರು‌.

ತಾಲೂಕಿನ ನಗರಂಗೆರೆ ಗ್ರಾಮದ ಅಂಬೇಡ್ಕರ್ ಮಹಿಳಾ ಸಂಘದವರು ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.

ಎಲ್ಲಾ ವರ್ಗದ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಅನೇಕ ಕಾನೂನುಗಳನ್ನು ರಚಿಸಿದ್ದಾರೆ. ಮಹಿಳೆಯರಿಗೆ ಶಿಕ್ಷಣ, ಆತ್ಮಾಭಿಮಾನ ಸೇರಿದಂತೆ ಗೌರವಯುತ ಜೀವನ ಸಾಗಿಸಲು ಅವರು ಅನೇಕ ಗುರುತರ ಬದಲಾವಣೆ ಆಗಬೇಕಾದರೆ ಎಲ್ಲರೂ ಶಿಕ್ಷಣ ಪಡೆಯಬೇಕು ಎಂದರು.

ದಲಿತರ ಹಕ್ಕುಗಳ ಜೊತೆ ಎಲ್ಲಾ ಜಾತಿಯ ಜನರಿಗೂ ಹಕ್ಕುಗಳನ್ನು ಅವಕಾಶಗಳನ್ನು ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು ಎಂಬ ಆಶಯದಿಂದ ಅವರು ಜೀವಮಾನವಿಡೀ ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವಾಗಿ ನಾವೆಲ್ಲರೂ ಇಂದು ಶಿಕ್ಷಣ ಪಡೆದು ವೇದಿಕೆಗಳಲ್ಲಿ ನಿಂತು ಮಾತಾಡುವಂತಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮೀದೇವಿ ವಹಿಸಿದ್ದರು. ಪಂಚಾಯಿತಿ ಅಧಿಕಾರಿ ಪ್ರತಿಭಾ, ಗಾಯಕ ಮುತ್ತುರಾಜು, ಹನುಮಂತಪ್ಪ ಪೂಜಾರ್, ರವಿಕುಮಾರ್, ಮಂಜುನಾಥ್, ಪ್ರದೀಪ್, ಉಪಾಧ್ಯಕ್ಷೆ ಶಿವಮ್ಮ, ಸುಚಿತ್ರ, ರೇಣುಕಮ್ಮ, ತಿಪ್ಪಮ್ಮ, ಕಾವ್ಯ, ಲತಾ, ವಿಶಾಲಾಕ್ಷಿ, ನೇತ್ರಮ್ಮ, ಲಾವಣ್ಯ, ಸಂಗೀತ, ಹನುಮಕ್ಕ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಅವಕಾಶ ಕಸಿದುಕೊಂಡ ಕಾಂಗ್ರೆಸ್
ರಸ್ತೆ ಅಪಘಾತಗಳ ಸ್ಥಳ ಗುರುತಿಸಲು ಸೂಚನೆ