ಕೆ.ಬೆಟ್ಟಹಳ್ಳಿ ಡೈರಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಜೆಡಿಎಸ್- ರೈತ ಸಂಘ ಹೊಂದಾಣಿಕೆ

KannadaprabhaNewsNetwork |  
Published : Jun 09, 2025, 02:31 AM IST
8ಕೆಎಂಎನ್ ಡಿ20 | Kannada Prabha

ಸಾರಾಂಶ

ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಹಾಗೂ ರೈತಸಂಘ ಮೈತ್ರಿಕೂಟದ ಸುರೇಶ್ ಮತ್ತು ಲಕ್ಷ್ಮೇಗೌಡ‌ ಅವಿರೋಧವಾಗಿ ಆಯ್ಕೆಯಾದರು.

ಪಾಂಡವಪುರ:

ತಾಲೂಕಿನ ಕೆ.ಬೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಹಾಗೂ ರೈತಸಂಘ ಮೈತ್ರಿಕೂಟದ ಸುರೇಶ್ ಮತ್ತು ಲಕ್ಷ್ಮೇಗೌಡ‌ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 10 ಮಂದಿ ನಿರ್ದೇಶಕರ ಬಲದ ಡೇರಿಯಲ್ಲಿ ಜೆಡಿಎಸ್ ಬೆಂಬಲಿತ 5 ಮತ್ತು ರೈತಸಂಘ ಬೆಂಬಲಿತರು 5 ನಿರ್ದೇಶಕರಿದ್ದರು.

ಐದು ವರ್ಷದ ಆಡಳಿತಾವಧಿಯಲ್ಲಿ ಮೊದಲ ಒಂದು ವರ್ಷದ ಅವಧಿಗೆ ರೈತಸಂಘ ಬೆಂಬಲಿತರಿಗೆ ಹಾಗೂ ಉಳಿದ ನಾಲ್ಕು ವರ್ಷಗಳ ಅವಧಿಗೆ ಜೆಡಿಎಸ್ ಬೆಂಬಲಿತರಿಗೆ ಅಧಿಕಾರ ಹಂಚಿಕೆ ಮಾಡಲಾಯಿತು.

ನಂತರ ಚುನಾವಣೆಯಲ್ಲಿ ರೈತ ಸಂಘದ ಬೆಂಬಲಿತ ಸುರೇಶ್ ಹಾಗೂ ಲಕ್ಷ್ಮೇಗೌಡ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಹಕಾರ ಇಲಾಖೆಯ ವಸೀಂ ಪಾಷ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಈ ವೇಳೆ ಸಿಹಿ ವಿತರಿಸಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಗ್ರಾಪಂ ಮಾಜಿ ಅಧ್ಯಕ್ಷ ಮಾಕೇಗೌಡ, ಸದಸ್ಯ ಆನಂದ, ಮಂಡಲ ಪಂಚಾಯ್ತಿ ಮಾಜಿ ಸದಸ್ಯ ಕೃಷ್ಣೇಗೌಡ, ಮುಖಂಡರಾದ ಬಿ.ಕೆ.ಹರಿಕುಮಾರ್, ಬಿ.ಟಿ.ಶಿವಣ್ಣ, ಶ್ರೀಕಂಠು, ಜಯರಾಮ, ಮಹಾದೇವೆಗೌಡ, ಕೆ.ಎಸ್.ರಮೇಶ್, ವಾಸು, ರವಿ, ಗೌಡೇಗೌಡ, ಬಜೇಗೌಡ, ಶ್ರೀಧರ, ಮನೋಹರ, ಲಕ್ಷ್ಮೇಗೌಡ, ಹೇಮಂತ್, ಡೇರಿ ನಿರ್ದೇಶಕರಾದ ಜೆಡಿಎಸ್ ನ ರಾಮೇಗೌಡ, ಕೆ.ಎಸ್.ರಾಜು, ಶಶಿಕಲಾ, ವಸಂತಮ್ಮ, ಕೆ.ಎಸ್.ಮನೋಜ್, ರೈತಸಂಘದ ನಾರಾಯಣ, ಪ್ರೇಮಮ್ಮ, ಟಿ.ದೇವರಾಜು, ಕಾರ್ಯದರ್ಶಿ ಸುರೇಶ್ ಇತರರು ಅಭಿನಂದಿಸಿದರು.

ಬೀರಶೆಟ್ಟಹಳ್ಳಿ ಡೈರಿ ಜೆಡಿಎಸ್ - ಬಿಜೆಪಿ ಮೈತ್ರಿ ಬೆಂಬಲತರ ವಶಕ್ಕೆ

ಪಾಂಡವಪುರ

ತಾಲೂಕಿನ ಬೀರಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟದಿಂದ ಅಧ್ಯಕ್ಷರಾಗಿ ಪಿ.ದಿವಾಕರ ಹಾಗೂ ಉಪಾಧ್ಯಕ್ಷರಾಗಿ ಪಿ.ಜಿ.ರಮೇಶ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಅಧ್ಯಕ್ಷ ಸ್ಥಾನಕ್ಕೆ ಬೀರಶೆಟ್ಟಹಳ್ಳಿ ದಿವಾಕರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಮೇಶ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ವಸೀಂ ಪಾಷ ಅವಿರೋಧ ಆಯ್ಕೆ ಘೋಷಿಸಿದರು.

ಡೇರಿ ನೂತನ ನಿರ್ದೇಶಕರಾದ ಪಿ.ದಿವಾಕರ, ಸಿ.ಮಧುಸೂಧನ, ಪಿ.ಜಿ.ರಮೇಶ, ಸುಜಾತ ರಾಮೇಗೌಡ, ಸುನಂದಾ ಕೃಷ್ಣಪ್ಪ, ವಿ.ಸುರೇಶ ಮತ್ತು ಡೇರಿ ಕಾರ್ಯದರ್ಶಿ ಗುರುಪ್ರಸಾದ್, ಸಿಬ್ಬಂದಿಯಾದ ಅಖಿಲೇಶ್, ಹರ್ಷ, ಪ್ರಶಾಂತ್ ಸೇರಿದಂತೆ ಇತರೆ ನಿರ್ದೇಶಕರು ಹಾಜರಿದ್ದರು.

ನಂತರ ಅಧ್ಯಕ್ಷ -ಉಪಾಧ್ಯಕ್ಷರನ್ನು ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು, ಪುರಸಭೆ ಸದಸ್ಯ ಯಶವಂತ್ ಚಿಕ್ಕತಮ್ಮೇಗೌಡ (ದಿಲೀಪ್), ದೇವಪ್ಪ, ಜೆಡಿಎಸ್ ಮುಖಂಡ ಸಗಾಯಂ, ಪದ್ಮನಾಭ, ಪಿ.ಎಲ್.ಆದರ್ಶ, ಹಿರೋಡೆ ಬೀದಿ ಗುರು, ಪದ್ಮನಾಭ, ಕುಮಾರ್, ನಟರಾಜು, ಕೆಂಚೇಗೌಡ, ಜಯಕುಮಾರ್ ಕುಂಟೆ, ಜಲೀಲ್, ಕೃಷ್ಣ, ಧರ್ಮ, ನಂಜುಂಡ, ಬಾಹುಬಲಿ, ಕಿರಣ, ಶಂಕರೇಗೌಡ, ಲೋಕೇಶ್, ನವೀನ್ ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ