ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಈ ಸಂದರ್ಭ ಮಾತನಾಡಿದ ಶಾಸಕ ಪೊನ್ನಣ್ಣ ಐನ್ ಮನೆ ಸಂಸ್ಕೃತಿಯು ಕೊಡಗಿನ ಪ್ರಮುಖ ಆಕರ್ಷಣೆ ಹಾಗೂ ಸಂಪ್ರದಾಯವಾಗಿದ್ದು, ಕ್ಷೇತ್ರದಾದ್ಯಂತ ಐನ್ ಮನೆಗಳ ಅಭಿವೃದ್ಧಿಗೆ ಮುತುವರ್ಜಿ ವಹಿಸುತ್ತಿರುವುದಾಗಿ ನುಡಿದರು.
ಐನ್ ಮನೆ ಹಿರಿಯರು ಹಾಗೂ ಪ್ರಮುಖದೊಂದಿಗೆ ಮಾತನಾಡಿದ ಶಾಸಕರು ಮಲ್ಲಂಗಡ ಐನ್ ಮನೆಯ ಇತಿಹಾಸದ ಬಗ್ಗೆ ತಿಳಿದುಕೊಂಡರು.ಐನ್ ಮನೆ ಅಭಿವೃದ್ಧಿಗೆ ತನ್ನ ಕೈಲಾದ ಮತ್ತಷ್ಟು ಅನುದಾನ ಒದಗಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಂದರ್ಭ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ತೀತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಮಲ್ಲಂಗಡ ಕುಟುಂಬ ನಿರನ್ ಉತ್ತಪ್ಪ, ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.