ಕನ್ನಡದ ಕಂಪು ಹೆಚ್ಚಿಸಿದ ಕೆ.ಎಂ.ಮಠ ಅಡತಿ ಅಂಗಡಿ

KannadaprabhaNewsNetwork |  
Published : Nov 01, 2026, 04:15 AM IST
ತಾಳಿಕೋಟೆ | Kannada Prabha

ಸಾರಾಂಶ

ಇಂದಿನ ಯುಗದಲ್ಲಿ ಯಾವುದೇ ಅಂಗಡಿಗಳಿಗೆ ಹೋದರೂ ಕನ್ನಡ ಶಬ್ದ ಸಿಗುವುದೇ ವಿರಳ. ಇಂತಹ ಯುಗದಲ್ಲಿಯೂ ಕನ್ನಡ ಕನ್ನಡತನವನ್ನು ಕಟ್ಟಿ ಬೆಳೆಸುವುದರೊಂದಿಗೆ ಕನ್ನಡ ಭಾಷಾಭಿಮಾನ ಹೆಚ್ಚಿಸುವುದರಲ್ಲಿ ಕುಮಾರಸ್ವಾಮಿ ಮಠ ಅಡತಿ ಅಂಗಡಿಯ ಮಾಲೀಕರು ಮುಂದಾಗಿರುವುದು ಕನ್ನಡದ ಆಸ್ಮೀತೆಗೆ ಮತ್ತೊಂದು ಗರಿ ಬಂದಿದೆ.

ಪ್ರವಿಣ್ ಘೋರ್ಪಡೆ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಇಂದಿನ ಯುಗದಲ್ಲಿ ಯಾವುದೇ ಅಂಗಡಿಗಳಿಗೆ ಹೋದರೂ ಕನ್ನಡ ಶಬ್ದ ಸಿಗುವುದೇ ವಿರಳ. ಇಂತಹ ಯುಗದಲ್ಲಿಯೂ ಕನ್ನಡ ಕನ್ನಡತನವನ್ನು ಕಟ್ಟಿ ಬೆಳೆಸುವುದರೊಂದಿಗೆ ಕನ್ನಡ ಭಾಷಾಭಿಮಾನ ಹೆಚ್ಚಿಸುವುದರಲ್ಲಿ ಕುಮಾರಸ್ವಾಮಿ ಮಠ ಅಡತಿ ಅಂಗಡಿಯ ಮಾಲೀಕರು ಮುಂದಾಗಿರುವುದು ಕನ್ನಡದ ಆಸ್ಮೀತೆಗೆ ಮತ್ತೊಂದು ಗರಿ ಬಂದಿದೆ.

ಪಟ್ಟಣದಲ್ಲಿ ಕಳೆದ ೩೬ ವರ್ಷಗಳಿಂದಲೂ ಅಡತಿ ಅಂಗಡಿಯನ್ನು ನಡೆಸಿಕೊಂಡು ಬರುತ್ತಿರುವ ಮಾಲೀಕರಾದ ಕುಮಾರಸ್ವಾಮಿ ಮಠ ಅವರು ಇಂದಿನವರೆಗೂ ಕೇವಲ ಕನ್ನಡ ಅಕ್ಷರಗಳನಷ್ಟೇ ಅಲ್ಲದೇ ಅಂಕಿ ಸಂಖ್ಯೆಗಳನ್ನೂ ಸಹ ಕನ್ನಡದಲ್ಲಿಯೇ ತಮ್ಮ ದೈನಂದಿನ ಖಾತೆಯ ಹೊತ್ತಿಗೆಯಲ್ಲಿ ಬರೆಯುವ ಹವ್ಯಾಸದ ರೂಢಿ ಇಟ್ಟುಕೊಳ್ಳುವುದರ ಜತೆಗೆ ಕನ್ನಡ ಭಾಷೆಯ ಅಭಿಮಾನ, ಸಂಸ್ಕೃತಿ ಎತ್ತಿ ಹಿಡಿದು ಶ್ರೀಮಂತಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.ಮಾತಾಡುವಾಗ ಕನ್ನಡತನದಲ್ಲಿಯೇ ಇಂಗ್ಲಿಷ್‌ ಪದಗಳನ್ನು ಸೇರಿಸಿ ದೊಡ್ಡ ವ್ಯಕ್ತಿ ಎನ್ನಿಸಿಕೊಳ್ಳಲು ಹವಣಿಸುವ ವ್ಯಕ್ತಿಗಳನ್ನು ಸಾಕಷ್ಟು ಜನರನ್ನು ಕಾಣುತ್ತೇವೆ(ಜಸ್ಟ್ ಮಿಸ್ ಆಯ್ತು, ಪೇಪರ್ ತೊಗೊಂಡ್ಯಾ) ಮೊದಲಾದ ಪದಗಳನ್ನು ಕನ್ನಡತನದಲ್ಲಿ ಸೇರಿಸಿ ಇಂಗ್ಲಿಷ್‌ನ ವ್ಯಾಮೋಹ ಹೆಚ್ಚಿಸಿಕೊಳ್ಳುವುದು ಸಾಮಾನ್ಯವಾಗುತ್ತ ಸಾಗಿರುವ ಇಂದಿನ ಯುಗದಲ್ಲಿಯೂ ೩೬ ವರ್ಷಗಳಿಂದ ಕನ್ನಡತನದ ಅಕ್ಷರಗಳ ಜೊತೆಗೆ ಲೆಕ್ಕ ಪತ್ರದ ಪುಸ್ತಕದ ಹೊತ್ತಿಗೆಯಲ್ಲಿ ಎಲ್ಲ ಅಂಕಿ ಸಂಖ್ಯೆಗಳನ್ನು ಕನ್ನಡದಲ್ಲಿ ಬರೆದಿಡುವ ಪದ್ಧತಿ ಈ ಕೆ.ಎಂ.ಮಠ ಅಡತಿ ಅಂಗಡಿಯ ಮಾಲೀಕ ಕುಮಾರಸ್ವಾಮಿ ಮಠ ಅವರು ಉಳಿಸಿಕೊಂಡಿರುವುದು ಕನ್ನಡಕ್ಕೆ ತಾಯಿ ಬೇರಿನಂತೆ ಹೃದಯ ಶ್ರೀಮಂತಿಕೆಯಿಂದ ಎತ್ತಿ ಹಿಡಿದ ಕೀರ್ತಿ ಇವರಿಗೆ ಸಲ್ಲಬೇಕು.ಪಟ್ಟಣದ ಶ್ರೀ ಬಸವೇಶ್ವರ ಮಾರ್ಕೇಟ್ ಯಾರ್ಡ್‌ನಲ್ಲಿ ೧೦೦ಕ್ಕೂ ಅಧಿಕ ಅಡತಿ ಅಂಗಡಿಗಳಿದ್ದು, ಎಲ್ಲ ಅಂಗಡಿಗಳಲ್ಲಿಯೂ ದೈನಿಂದಿನ ಹೊತ್ತಿಗೆ ಜೊತೆಗೆ ರೋಖಡಿ ಅಲ್ಲದೇ ಖಾತೆಯಲ್ಲಿಯೂ ಕೂಡಾ ನೂರಾರು ವರ್ಷಗಳಿಂದ ಕನ್ನಡ ಅಕ್ಷರವನ್ನು ಬಳಿಸಿಕೊಳ್ಳುತ್ತ ಬಂದಿರುವುದು ಕನ್ನಡ ತಾಯಿಬೇರು ಮುದ್ದೇಬಿಹಾಳದಲ್ಲಿ ಗಟ್ಟಿಯಾಗಿ ಉಳಿದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ.ಇಂತಹ ಆಧುನಿಕ ಕಾಲಘಟ್ಟದಲ್ಲಿಯೂ ಇಂಗ್ಲಿಷ್‌ ಭಾಷೆಗೆ ಸೆಡ್ಡು ಹೊಡೆಯುವುದರೊಂದಿಗೆ ತಮ್ಮ ದೈನಂದಿನ ಲೆಕ್ಕಪತ್ರಗಳು ಅಲ್ಲದೇ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ಅಕ್ಷರಗಳು ಮತ್ತು ಅಂಕಿ ಸಂಖ್ಯೆಗಳು ಸಹ ಕನ್ನಡದಲ್ಲಿ ಬರೆಯುತ್ತಾರೆ. ಇಂತಹ ಅಚ್ಚು ಕನ್ನಡತನವನ್ನು ಶ್ರೀಮಂತಗೊಳಿಸುವುದರೊಂದಿಗೆ ವ್ಯವಹಾರ ನಡೆಸುತ್ತಿರುವ ಕೆ.ಎಂ.ಮಠ ಅಡತಿ ಅಂಗಡಿ ಕನ್ನಡತನದ ಸುಗಂದ ಬೀರುವ ಅಡಿತಿ ಅಂಗಡಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.ಅಪ್ಪಟ ಕನ್ನಡತನವನ್ನು ಹೊಂದಿರುವ ಅಡತಿ ಅಂಗಡಿ ಮಾಲೀಕ ಕುಮಾರಸ್ವಾಮಿ ಮಠ ಅವರಿಗೆ ಅವರ ಸಹೋದರ ಈರಯ್ಯ ಮಠ ಅವರು ಕನ್ನಡದಲ್ಲಿಯೇ ಅಕ್ಷರದ ಜತೆಗೆ ಅಂಕಿ ಸಂಖ್ಯೆಗಳನ್ನು ಬರೆಯುವ ರೂಢಿ ಕಲಿಸಿದವರು. ಈಗ ಕುಮಾರಸ್ವಾಮಿ ಮಠ ಅವರ ಕೈ ಕೆಳಗೆ ಕೆಲಸ ಮಾಡಿದ ನಾರಾಯಣಸಿಂಗ್ ಮನಗೂಳಿ, ಬದ್ರು ವಸ್ತ್ರದ ಅವರು ಕನ್ನಡದಲ್ಲಿಯೇ ಬರೆಯುವುದರ ಜತೆಗೆ ಅನೇಕರಿಗೆ ಸಹ ಲೆಕ್ಕಪತ್ರದ ಶಿರ್ಷಿಕೆಯನ್ನು ಕನ್ನಡದಲ್ಲಿಯೇ ಬರೆಯಬೇಕು. ಹೊಸದಾಗಿ ಕೆಲಸಕ್ಕೆ ಬರುವ ಪ್ರತಿಯೊಬ್ಬರಿಗೂ ಕನ್ನಡದ ಅಂಕಿ ಸಂಖ್ಯೆಗಳನ್ನು ಹೇಳಿಕೊಡುವ ಕಾರ್ಯದೊಂದಿಗೆ ಕನ್ನಡತನವನ್ನು ಉಳಿಸಿ, ಬೆಳೆಸುವಲ್ಲಿ ತೋರಿದ ಪ್ರೀತಿ ಕನ್ನಡದ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ.ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ಹೊಂದಿರುವ ಅಪ್ಪಟ ಕನ್ನಡತನವನ್ನು ಅಚ್ಚು ಹಸಿರಿನಂತೆ ಬೆಳೆಸುತ್ತಿರುವ ತಾಳಿಕೋಟೆಯ ಕೆ.ಎಂ.ಮಠ ಅಡತಿ ಅಂಗಡಿಯ ವ್ಯವಹಾರಗಳನ್ನು ಒಮ್ಮೆ ಕಣ್ತುಂಬಾ ನೋಡಿದರೇ ಸಂತಸಗೊಳ್ಳದೇ ಯಾರೂ ಇರಲಾರರು.ಸುಮಾರು ೩೬ ವರ್ಷಗಳಿಂದ ಅಡತಿ ಅಂಗಡಿಯನ್ನು ನಡೆಸಿಕೊಂಡು ಬಂದಿದ್ದೇವೆ. ಸಹೋದರ ಈರಯ್ಯ ಮಠ ಅವರ ಮಾರ್ಗದರ್ಶನದಂತೆ ಅಂದಿನಿಂದ ಇಂದಿನವರೆಗೂ ರೋಖಡಿ ಮತ್ತು ಖಾತೆ ಅಲ್ಲದೇ ಇನ್ನಿತರ ವ್ಯವಹಾರ ಪುಸ್ತಕದಲ್ಲಿ ಕನ್ನಡ ಅಕ್ಷರಗಳನ್ನು ಮತ್ತು ಅಂಕಿ ಸಂಖ್ಯೆಗಳನ್ನೂ ಸಹ ಕನ್ನಡದಲ್ಲಿ ಬಳೆಸುತ್ತ ಮುನ್ನಡೆದಿದ್ದೇವೆ. ಕನ್ನಡ ಅಕ್ಷರ ಅಂಕಿಗಳೆಂದರೇ ಬಹಳ ಪ್ರೀತಿಯಿಂದ ಲೆಕ್ಕ ಶಿರ್ಷಿಕೆಯಲ್ಲಿ ಬರೆಯುತ್ತೇವೆ.

-ಕುಮಾರಸ್ವಾಮಿ ಮಠ,

ಶ್ರೀ ಕೆ.ಎಂ.ಮಠ ಅಡತಿ ಅಂಗಡಿ ಮಾಲೀಕರು.ಇಂದು ಯಾವುದೇ ಅಂಗಡಿಗೆ ಹೋದರೂ ಇಂಗ್ಲಿಷ್‌ ಶಬ್ದ ಅಂಕಿ ಸಂಖ್ಯೆಗಳನ್ನು ಬಿಟ್ಟರೇ ಬೇರೆ ಭಾಷೆ ಸಿಗುವುದಿಲ್ಲ. ಇಂತಹ ದಿನಮಾನದಲ್ಲಿಯೂ ಶ್ರೀ ಕೆ.ಎಂ.ಮಠ ಅಡತಿ ಅಂಗಡಿ ಮಾಲೀಕರು ಕಳೆದ ೩೬ ವರ್ಷಗಳಿಂದ ಕನ್ನಡತನದ ಅಕ್ಷರ ಅಂಕಿ ಸಂಖ್ಯೆಗಳ ಮೂಲಕವೇ ವ್ಯವಹಾರ ಮಾಡುತ್ತಿರುವುದು ಕನ್ನಡತನದ ಬೇರು ತಾಳಿಕೋಟೆಯಲ್ಲಿ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿರುವುದು ಸಂತಸ ಪಡುವಂತದ್ದಾಗಿದೆ.

-ಜೈಭೀಮ ಮುತ್ತಗಿ,
ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ